ಶಿಕ್ಷಕರಿಂದ ಮಕ್ಕಳಿಗೆ ನಿರಂತರ ಮಾರ್ಗದರ್ಶನ ಅಗತ್ಯ: ಆಲಗೂರ
ಇಂಡಿ 04: ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಎಸ್ ಡಿ ಶರ್ಮಾ ಅವರ ಪಾತ್ರ ಅಪಾರವಾಗಿದ್ದು, ಪ್ರಾಮಾಣಿಕವಾಗಿ ಶಾಲೆಗಳ ಅಭಿವೃದ್ಧಿ ಮಾಡುತ್ತಾ, ಜನಾನುರಾಗಿ ಮುಖ್ಯ ಶಿಕ್ಷಕರಾಗಿದ್ದಾರೆ ಎಂದು ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಹೇಳಿದರು.
ಗುರುವಾರದಂದು ತಾಲೂಕಿನ ಬಂಥನಾಳ ಗ್ರಾಮದ ಕೆಬಿಎಚ್‌ಪಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ನಿವೃತ್ತ ಮುಖ್ಯ ಶಿಕ್ಷಕ ಎಸ್ ಡಿ ಶರ್ಮಾ ಅವರ ಅಭಿನಂದನಾ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು.ಈ ಶಾಲೆಯಲ್ಲಿ 10 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಮಾಡಿದ ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಮಕ್ಕಳಿಗೆ ನಿರಂತರ ಮಾರ್ಗದರ್ಶನ ಮಾಡುತ್ತಾ, ತಮ್ಮ ನಿವೃತ್ತಿ ಜೀವನವನ್ನು ಸಾರ್ಥಕಮಾಡಿಕೊಳ್ಳಬೇಕು ಎಂದು ಹೇಳಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಮಾತನಾಡಿ ಸುದೀರ್ಘ 40 ವರ್ಷಗಳ ಸೇವೆಯಲ್ಲಿ ಮಕ್ಕಳ ಉತ್ತಮ ಕಲಿಕೆಗಾಗಿ ಎಸ್ ಡಿ ಶರ್ಮಾ ಅವರು ಸದಾ ಪ್ರೇರಣೆ ನೀಡುತ್ತಿದ್ದರು. ಅವರ ಅನುಭವಿಕ ಮಾರ್ಗದರ್ಶನ ಎಲ್ಲರಿಗೂ ಸಿಗಲಿ ಎಂದು ಹೇಳಿದರು.ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ ಟಿ ಪಾಟೀಲ, ತಾಂಬಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಜಾಕ ಚಿಕ್ಕಗಸಿ,ಉಪಾಧ್ಯಕ್ಷ ರವೀಂದ್ರ ನಡಗಡ್ಡಿ, ಗ್ರಾಮದ ಗಣ್ಯರಾದ ಶರಣಪ್ಪ ಜಾಲವಾದಿ, ಸಿದ್ದನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ ಎಂ ವಾಲೀಕಾರ, ಬೆಳಗಾವಿ ವಿಭಾಗ ಮಟ್ಟದ ಉಪಾಧ್ಯಕ್ಷ ಎಸ್ ವಿ ಹರಳಯ್ಯ, ಇಂಡಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭುಲಿಂಗ ಚಾಂದಕವಟೆ, ಎನ್‌ಜಿಓ ಸದಸ್ಯ ಎಸ್ ಡಿ ಪಾಟೀಲ, ಶಿಕ್ಷಕ ಎಸ್ ಆರ್ ಪಾಟೀಲ, ಎಸ್ ಸಿ,ಎಸ್ ಟಿ ನೌಕರರ ಸಂಘದ ಅಧ್ಯಕ್ಷ ಭೀಮರಾಯ ವಠಾರ,ಶಿಕ್ಷಣ ಸಂಯೋಜಕ ಪ್ರಕಾಶ ನಾಯಕ, ಬಿ ಆರ್ ಪಿ ಗಳಾದ ಅಶೋಕ ರಾಠೋಡ, ಎ ಜಿ ಚೌಧರಿ, ಬಸವರಾಜ ಗೊರನಾಳ, ಕಚೇರಿ ಅಧೀಕ್ಷಕ ಎಸ್ ಸಿ ಗೌಡರ, ತಾಂಬಾ ಕ್ಲಸ್ಟರ್ ಸಿ ಆರ್ ಪಿ ಶರಣು ಕ್ಯಾತಾ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಎಸ್ ಡಿ ಶರ್ಮಾ ಹಾಗೂ ಅವರ ಪತ್ನಿ ಶಶಿಕಲಾ ಶರ್ಮಾ ಅವರನ್ನು ಶಾಲಾ ಎಸ್ ಡಿ ಎಂ ಸಿ, ಅಧ್ಯಕ್ಷರು ಹಾಗೂ ಗ್ರಾಮಸ್ಥರು ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಶಿಕ್ಷಕ ಈರಣ್ಣ ಕಂಬಾರ ಸ್ವಾಗತಿಸಿದರು.ಬಿ ಎಸ್ ಗಂಡೋಳಿ ನಿರೂಪಿಸಿದರು ಆರ್ ಎಸ್ ಸಫಲಿ ವಂದಿಸಿದರು