ಲೋಕದರ್ಶನ ವರದಿ
ಚೈತನ್ಯ ಗ್ರುಪ್ಸ್‌ನಿಂದ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ
ಬೆಟಗೇರಿ 05: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‌ನ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಕನ್ನಡ ಮಾಧ್ಯಮ ಮತ್ತು ಸತ್ತೆವ್ವ ದೇಯಣ್ಣವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿವಿಧ ಪ್ರೌಢ ಶಾಲೆಯ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ನಡೆಯಿತು.
ಸ್ಥಳೀಯ ವ್ಹಿ.ವ್ಹಿ.ಡಿ ಸರಕಾರಿ ಪ್ರೌಢ ಶಾಲೆಯ ಕುಮಾರಿ ರುಪಾ ಕುರಬೇಟ ಶೇ. 97 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ, ಸವಿತಾ ಮುಧೋಳ ಶೇ. 96 ಅಂಕಗಳನ್ನು ಗಳಿಸಿ ಶಾಲೆಗೆ ದ್ವೀತಿಯ ಸ್ಥಾನ ಹಾಗೂ ಕಾವ್ಯಾ ಮುರಗೋಡ ಶೇ. 95ಅ ಅಂಕ ಗಳಿಸಿ ತೃತೀಯ ಸ್ಥಾನ, ಮನ್ನಿಕೇರಿ ಭೀಮವ್ವಾ ಲಕ್ಷ್ಮಣರಾವ ಜಾರಕಿಹೋಳಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರದೀಪ ಹಾಲಪ್ಪ ಮಾನೋಜಿ ಶೇ. 95 ಅಂಕಗಳಿಸಿ ಶಾಲೆಗೆ ದ್ವಿತೀಯ ಸ್ಥಾನ ಮತ್ತು ಎಮ್‌ಡಿಆರ್‌ಎಸ್ ಸಂಕೇಶ್ವರ ಮೂರಾರ್ಜಿ ಶಾಲೆಯ ವಿದ್ಯಾರ್ಥಿನಿ ಮೇಘಾ ಬೋಳನ್ನವರ ಶೇ. 98 ಅಂಕಗಳಿಸಿ ಮತ್ತು ಎಮ್‌ಡಿಆರ್‌ಎಸ್ ಗವಾನ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ಶೇಟ್ಟೆಪ್ಪ ದಂಡಿನ ಶೇ. 98 ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿರುವ ಪ್ರಯುಕ್ತ ಚೈತನ್ಯ ಗ್ರುಪ್ಸ್‌ನ ಸಂಸ್ಥೆಯ ಪರವಾಗಿ ಮಕ್ಕಳಿಗೆ ಸನ್ಮಾನಿಸಿ ಸತ್ಕರಿಸಲಾಯಿತು.
ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸತತ ಪ್ರಯತ್ನ ಮತ್ತು ನಮ್ಮ ಶಾಲೆಯ ಗುರುಬಳಗದ ಮಾರ್ಗದರ್ಶನದಿಂದ ಮಕ್ಕಳು ಅದ್ಭುತ ಸಾಧನೆ ಮಾಡಿದ್ದಾರೆ. ಮುಂದೆ ಪದವಿ ಪೂರ್ವ ಶಿಕ್ಷಣದಲ್ಲಿ ಕೂಡಾ ಉನ್ನತ ಸ್ಥಾನದಲ್ಲಿ ಪಾಸಾಗುವಂತೆ ಶುಭ ಕೋರಿದರು. ಸ್ಥಳೀಯ ಚೈತನ್ಯ ಗ್ರುಪ್ಸ್‌ನ ಶಾಲೆಗಳ ಆಡಳಿತಾಧಿಕಾರಿ ರವಿ ಭರಮನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತಿ ಪ್ರಧಾನ ಗುರು ಎಸ್. ವಾಯ್ ಪಾಟೀಲ ಅಧ್ಯಕ ್ಷತೆ ವಹಿಸಿದ್ದರು.
ಪ್ರಕಾಶ ಕುರಬೇಟ, ರಮೇಶ ನಾಯ್ಕ, ಪ್ರಧಾನ ಗುರುಮಾತೆ ಕಮಲಾಕ್ಷಿ ನಾಯ್ಕ, ವಿದ್ಯಾ ಜನ್ಮಟ್ಟಿ, ಸಿಬ್ಬಂದಿ ವರ್ಗ, ಸಾಧಕ ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳು, ಇತರು ಇದ್ದರು. ನಬಿಸಾಬ ನದಾಪ್ ಸ್ವಾಗತಿಸಿ ನಿರೂಪಿಸಿದರು..