ಲೋಕದರ್ಶನ ವರದಿ
ಹೊನ್ನಾವರ, 22: ಜನತಾ ವಿದ್ಯಾಲಯ ಕಾಸರಕೋಡನಲ್ಲಿ ಶಾಲಾ ವಾಷರ್ಿಕೋತ್ಸವ ಸಮಾರಂಭವನ್ನು ನೆರವೇರಿತು. ವಿ.ಎಸ್.ಎಸ್ ಸಂಘ ಕೆಳಗಿನೂರಿ ಅಧ್ಯಕ್ಷರಾದ ಹಾಗೂ ಜನಸೇವಕರಾದ ಗಣಪಯ್ಯ ಗೌಡ ಇವರು ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿ ಮಕ್ಕಳು ದುಚ್ಚಟಗಳಿಂದ ದೂರವಾಗಿ ಸದಾ ಉತ್ತಮ ಕಾರ್ಯ ಮಾಡುವತ್ತ ಒಲವು ತೊರಬೇಕು. ಅಭ್ಯಾಸದ ಕುರಿತು ವಿಶೇಷವಾಗಿ ಕಾಳಜಿ ವಹಿಸಿ ಮೊದಲು ಉತ್ತಮ ಮಾನವನಾಗಬೇಕು ಎಂದು ಕಿವಿಮಾತನ್ನು ಆಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ.ಜಿ.ಶಂಕರ ಮಾತನಾಡಿ ಮಕ್ಕಳ ಏಳ್ಗೆ ಎನ್ನುವುದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ ಅದಕ್ಕೆ ಪಾಲಕರ ಪಾತ್ರ ಕೂಡ ಅಧಿಕವಾಗಿರುತ್ತದೆ. ಪಾಲಕರು ತಮ್ಮ ಮಕ್ಕಳ ಕುರಿತು ವಿಶೇಷವಾಗಿ ಕಾಳಜಿಯನ್ನು ಹೊಂದಿರಬೇಕು ಎಂದರು.
ಹಸ್ತಪತ್ರಿಕೆಯ ಉದ್ಘಾಟಕರಾಗಿ ಆಗಮಿಸಿದ ಅಣ್ಣಪ್ಪ ಎನ್. ಗೌಡ, ಅಧ್ಯಕ್ಷರು ಚಿದಾನಂದೇಶ್ವರ ಮಿತ್ರ ಮಂಡಳಿ, ಕೆಳಗಿನೂರು ಇವರು ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿ, ವಿದ್ಯಾದಾನವೆ ಶ್ರೇಷ್ಠವಾದದ್ದು ಆ ಕಾರ್ಯದಲ್ಲಿ ತಾವು ಸದಾ ಕಾಳಜಿವಹಿಸಿ ಊರಿನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಲವಾರು ಕಾರ್ಯ ಕೈಗೊಂಡ ಕುರಿತು ಮನದಾಳದ ಮಾತನ್ನು ಬಿಚಿಟ್ಟರು.
ನಮ್ಮ ಶಾಲೆಯ ಮೊದಲ ಶಿಕ್ಷಕರು ಹಾಗೂ ಮಹಾದಾನಿಗಳಾದ ಪದ್ಮನಾಭ ಬಾಲಕೃಷ್ಣ ಶಾನಭಾಗ ಅವರನ್ನು ಸನ್ಮಾನಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಹಿರಿಯ ಸದಸ್ಯರಾದ ವಿ.ಡಿ.ನಾಯ್ಕ ಅವರು ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯಾಧ್ಯಾಪಕರಾದ ಫಿಲೋಮಿನಾ ಎಸ್. ರೊಡ್ರಿಗೀಸ್, ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷರಾದ ಅಶೋಕ ಕಾಸರಕೋಡ, ಶಿಕ್ಷಕರಾದ ಜಿ.ಎಸ್.ಭಟ್ಟ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕರು ಎಲ್ಲ ಅತಿಥಿ ಅಭ್ಯಾಗತರನ್ನು ಪರಿಚಯಿಸಿ ಸ್ವಾಗತಿಸಿದರು. ಶಾಲೆಯ ಸಮಗ್ರ ವರದಿಯನ್ನು ಜಿ.ಎಸ್.ಭಟ್ಟ ವಾಚಿಸಿದರು. ಕ್ರೀಡಾ ಹಾಗೂ ಸಾಂಸ್ಕೃತಿಕ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೆದ್ದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಲಾಯಿತು. ಅಶೋಕ ಜೋಸೆಫ್ ವಂದಿಸಿದರೆ, ವಿನಾಯಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜಾನುವಾರು ಪ್ರದರ್ಶನ ಮುಂದಕ್ಕೆ
ಅಂಕೋಲಾ : ಪಶು ಸಂಗೋಪನೆ ಇಲಾಖೆ ಪಶು ವೈದ್ಯ ಆಸ್ಪತ್ರೆ ಅಂಕೋಲಾ ವತಿಯಿಂದ ಜನವರಿ 23ರಂದು ಬಾಳೆಗುಳಿಯಲ್ಲಿ ನಡೆಯಬೇಕಿದ್ದ ತಾಲೂಕು ಮಟ್ಟದ ಜಾನುವಾರು ಪ್ರದರ್ಶನ ಮುಂದೂಡಲಾಗಿದೆ. ಸಿದ್ಧಗಂಗಾ ಶ್ರೀಗಳ ನಿಧನದಿಂದಾಗಿ ಶೋಕಾಚರಣೆ ಇರುವುದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿದರ್ೇಶಕ ಡಾ. ಕೃಷ್ಣಮೂತರ್ಿ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.