ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದವರ ಕಾರು ಅಪಘಾತ: ಮೂವರು ಸಾವು

ಬಳ್ಳಾರಿ,  ಫೆ 3, ತಂದೆಯ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದಾಗ ಮಗ, ಸೊಸೆ ಹಾಗೂ ಕಾರು  ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ  ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದ  ವಿರುಪಾಪುರ ಗ್ರಾಮದ ಬಳಿ ಸಂಭವಿಸಿದೆ. ಕಾರು ಹಾಗೂ ಟಿಪ್ಪರ್ ಲಾರಿ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. 

ವಸಂತ್ ಕುಮಾರ್(37), ಪತ್ನಿ ವಿನುತ(30) ಹಾಗೂ ಕಾರು ಚಾಲಕ ರವಿ ಮೃತಪಟ್ಟವರು. ಬಾಗಲಕೋಟೆ  ಜಿಲ್ಲೆಯ ಇಳಕಲ್ ಮೂಲದವರಾದ ವಸಂತ್ ಕುಮಾರ್ ಮಡಿಕೇರಿಯ ಮೂರ್ನಾಡುನಲ್ಲಿ ಶಿಕ್ಷಕರರಾಗಿ  ಸೇವೆ ಸಲ್ಲಿಸುತ್ತಿದ್ದರು. ಇಳಕಲ್‍ನಲ್ಲಿ ತಮ್ಮ ತಂದೆ ನಿಧನರಾದ ಹಿನ್ನೆಲೆಯಲ್ಲಿ  ಶವಸಂಸ್ಕಾರಕ್ಕೆ ಪತ್ನಿ ವಿನುತ, ಮಗಳ ರುತ್ವಿಕಾ(2) ಜೊತೆ ವಸಂತ್, ಕಾರಿನಲ್ಲಿ  ತೆರಳುವಾಗ ಈ ದುರ್ಘಟನೆ ನಡೆದಿದೆ. ಕೂಡ್ಲಿಗಿ  ಪಟ್ಟಣದ ಅಂಬೇಡ್ಕರ್ ಸರ್ಕಾರಿ ಶಾಲೆಯ  ಶಿಕ್ಷಕಿ ಮೋಕ್ಷಾವತಿ ಅಪಘಾತ ಸಂಭವಿಸಿದ  ಸ್ಥಳದಿಂದ ತೆರಳುತ್ತಿದ್ದರು. ಈ ವೇಳೆ  ಹೆತ್ತ ತಂದೆ, ತಾಯಿಯನ್ನು ಕಳೆದುಕೊಂಡು  ಕಣ್ಣೀರು ಹಾಕುತ್ತಿದ್ದ ರುತ್ವಿಕಾಳನ್ನು  ಆಸ್ಪತ್ರಗೆ ಕರೆತಂದು, ಮಗುವಿಗೆ ಹಾಲುಣಿಸಿ  ಮಾನವೀಯತೆ ಮೆರೆದಿದ್ದಾರೆ.  ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.