ಮದ್ಯ ಸಾಗಾಟ ಮಾಡುತ್ತಿದ್ದವ ಸಿಸಿಬಿ ಬಲೆಗೆ

ಬೆಂಗಳೂರು,  ಏ.28, ಲಾಕ್ ಡೌನ್ ಜಾರಿಯಲ್ಲಿದ್ದರೂ ಅಕ್ರಮವಾಗಿ ವಿದೇಶಿ ಮದ್ಯ ಸಾಗಾಟ  ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.31 ವರ್ಷದ ರೋಷನ್ ಬತೇಜ್  ಬಂಧಿತ ಆರೋಪಿ.ಬಂಧಿತ ಮೌಂಟ್ ಕಾರ್ಮೆಲ್ ಕಾಲೇಜು ರಸ್ತೆ ಮಾರ್ಗವಾಗಿ ಪ್ಯಾಲೆಸ್ ರಸ್ತೆಯ ಸರ್ವೀಸ್ ರಸ್ತೆಯ ಮೂಲಕ ಮದ್ಯವನ್ನು ಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ  ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಂಧಿತನಿಂದ  22 ಲೀಟರ್​​ನ 24 ಫಾರಿನ್ ಲಿಕ್ಕರ್ ಬಾಟಲಿಗಳು, ಒಂದು ಐ10 ಕಾರು ಹಾಗೂ ಒಂದು ಐ  ಫೋನ್-11 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.