ಮುಂಬೈ, ಆ. 26 10 ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಿಸಿದ್ದ ಬಾಲಿವುಟ್ ನಟ ಸಂಜಯ್ ದತ್ ಅವರು ಈಗ ಹೊಸ ರಾಜಕೀಯ ಪಕ್ಷ ಸೇರಿ, ಹೊಸ ಇನ್ನಿಂಗ್ಸ್ ಗೆ ಮಾನಸಿಕ ತಯಾರಿ ಮಾಡಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿರುವ ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೆಪ್ಟೆಂಬರ್ 25 ರಂದು ಸೇರಲು ಸಿದ್ದರಾಗಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ, ಪಕ್ಷದ ಸಂಸ್ಥಾಪಕ ಮಹಾದೇವ್ ಜಂಕರ್ ಮುಂಬೈನಲ್ಲಿ ಹೇಳಿದ್ದಾರೆ.
ಆರ್ಎಸ್ಪಿ ಪಕ್ಷವನ್ನು ರಾಜ್ಯದಲ್ಲಿ ವಿಸ್ತರಿಸಲು ನಾವು ಚಿತ್ರ ನಟರ ಕಡೆ ಗಮನ ಹರಿಸಿದ್ದೇವೆ ಇದರ ಭಾಗವಾಗಿ ನಟ ಸಂಜಯ್ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು.