ಪುರಸಭೆ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಎಇಇ ಬಸವರಾಜ ಮಾಹಿತಿ ಮಾರ್ಚ್ 1ರಂದು ಅಮೃತ್ 2.0 ಯೋಜನೆಗೆ ಭೂಮಿ ಪೂಜೆ
ತಾಳಿಕೋಟಿ 28 : ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿ ತಾಳಿಕೋಟಿ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ವಿತರಣಾ ವ್ಯವಸ್ಥೆ ಕಲ್ಪಿಸುವ ಯೋಜನೆ 24/7( ಹಂತ 1್ಘ2) ಕಾಮಗಾರಿಗೆ ಮಾರ್ಚ್ 1 ರಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲರು ಚಾಲನೆ ನೀಡಲಿದ್ದು, ಮುದ್ದೇಬಿಹಾಳ ಮತಕ್ಷೇತ್ರ ಶಾಸಕರಾದ ಅಪ್ಪಾಜಿ ನಾಡಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಾಗೇವಾಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಬಾಗಲಕೋಟ ಸಭೆಗೆ ಮಾಹಿತಿ ನೀಡಿದರು. ಗುರುವಾರ ಪಟ್ಟಣದ ಪುರಸಭೆಯಲ್ಲಿ ಜಿಲ್ಲಾಡಳಿತ ವಿಜಯಪುರ,ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ತಾಳಿಕೋಟಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಭೆಗೆ ಯೋಜನೆಯ ವಿವರ ನೀಡಿದ ಅವರು ಈ ಯೋಜನೆ ಕೇಂದ್ರ ರಾಜ್ಯ ಹಾಗೂ ಸ್ಥಳೀಯ ಸಹಯೋಗದ ಅನುದಾನದಲ್ಲಿ ನಡೆಯಲಿದ್ದು ಒಟ್ಟು ಎಂಟು ಹಂತದಲ್ಲಿ ನಡೆಯಲಿರುವ ಕಾಮಗಾರಿಗೆ ಒಂದನೇ ಹಂತದಲ್ಲಿ ರೂ 14.55 ಕೋಟಿ, ಎರಡನೇ ಹಂತದಲ್ಲಿ ರೂ.17.20 ಕೋಟಿ ಅನುದಾನದ ಇರುವುದು. ಎರಡು ವರ್ಷದ ಅವಧಿಯೊಳಗೆ ಈ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ನಾರಾಯಣಪುರ ಎಡದಂಡೆ ಕಾಲುವೆ ಜಲಧಾರೆಯಿಂದ ನೀರನ್ನು ಸರಬರಾಜು ಮಾಡಿಕೊಳ್ಳಲಾಗುವುದು. ಈ ಯೋಜನೆಯಿಂದ ಸುಮಾರು 30ರಿಂದ 35 ವರ್ಷಗಳವರೆಗೆ ಪಟ್ಟಣದ ಜನತೆಗೆ ನೀರಿನ ತೊಂದರೆ ಇರುವುದಿಲ್ಲ.ಇದು ಪುರಸಭೆಯ ಆದಾಯ ಹೆಚ್ಚಿಸಲಿದೆ,ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಇದನ್ನು ಹೈದರಾಬಾದಿನ ಪ್ರಸಿದ್ಧ ಸಿವೆಟ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ, ಈ ಕಾಮಗಾರಿ ನಡೆಯುವಾಗ ಒಳಚರಂಡಿ, ನೀರಿನ ಮೂಲ ಪೈಪ್ ಲೈನ್ ಹಾಗೂ ರಸ್ತೆಗಳಿಗೆ ಧಕ್ಕೆಯಾಗದಂತೆ ನೋಡಿಕೊಡಲಾಗುವುದು ಒಂದು ಪಕ್ಷ ರಸ್ತೆಗಳು ಹಾಳಾದಲ್ಲಿ ಮತ್ತೆ ನಿರ್ಮಾಣ ಮಾಡಿಕೊಡಲು ಇದಕ್ಕೆ ಅನುದಾನ ಇರುವುದು ಯೋಜನೆಯ ಯಶಸ್ವಿಗೆ ಪುರಸಭೆ ಎಲ್ಲ ಸದಸ್ಯರು ಅಧಿಕಾರಿಗಳು ಹಾಗೂ ವಿಶೇಷವಾಗಿ ಸಾರ್ವಜನಿಕರು ಸಹಕರಿಸಬೇಕಾಗಿದೆ ಎಂದರು. ಮಾರ್ಚ್ 1 ರಂದು ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ, ಸಚಿವ ಶಿವಾನಂದ ಎಸ್ ಪಾಟೀಲ,ಸಂಸದ ರಮೇಶ ಜಿಗಜಿಣಗಿ,ವಾಟರ್ ಬೋರ್ಡ್ ಮಂಡಳಿ ಅಧ್ಯಕ್ಷರಾದ ವಿನಯ್ ಕುಲಕರ್ಣಿ, ಸಂಸದೆ ಸುಧಾ ಮೂರ್ತಿ, ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಸುನಿಲಗೌಡ ಪಾಟೀಲ, ಪಿ.ಎಚ್. ಪೂಜಾರ, ರವಿಕುಮಾರ ಎನ್,ಕೇಶವ ಪ್ರಸಾದ ಎಸ್, ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನ್ ಭಾಷಾ ಜಮಾದಾರ, ಉಪಾಧ್ಯಕ್ಷೆ ಗೌರಮ್ಮ ಕುಂಬಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್ ಕುಮಾರ ಘೋಷ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ,ಶ್ರೀಮತಿ ದೀಪಾ ಚೋಳನ್, ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಸೆಲ್ವಮಣಿ ಆರ್, ಜಿಲ್ಲಾಧಿಕಾರಿ ಟಿ.ಭೂಬಾಲನ್,ಜಿಪಂ ಸಿಇಒ ರಿಷಿ ಆನಂದ,ಎಸ್.ಪಿ. ಲಕ್ಷ್ಮಣ್ ನಿಂಬರಗಿ, ಮುಖ್ಯ ಅಭಿಯಂತರ ವಿ.ಎಲ್.ಚಂದ್ರ್ಪ, ಕಾರ್ಯಪಾಲಕ ಅಭಿಯಂತರ ಗೋವಿಂದ ಎಸ್. ಮುಖ್ಯಾಧಿಕಾರಿ ಮೋಹನ ಜಾಧವ ಇರುವರು ಎಂದು ಅವರು ತಿಳಿಸಿದರು. ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷೆ ಜುಬೇದಾ ಹುಸೇನ್ ಭಾಷಾ ಜಮಾದಾರ, ಉಪಾಧ್ಯಕ್ಷೆ ಗೌರಮ್ಮ ಕುಂಬಾರ, ಮುಖ್ಯಾಧಿಕಾರಿ ಮೋಹನ ಜಾಧವ, ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಪರಶುರಾಮ ತಂಗಡಗಿ,ಯಾಶೀನ ಮಮದಾಪೂರ, ಮುತ್ತಪ್ಪ ಚಮಲಾಪೂರ,ಅಣ್ಣಪ್ಪ ಜಗತಾಪ,ಡಿ.ವಿ.ಪಾಟೀಲ,ಮುಸ್ತಫಾ ಚೌಧರಿ,ನಿಂಗಣ್ಣ ಕುಂಟೋಜಿ, ಪ್ರತಿನಿಧಿಗಳಾದ ಮಂಜೂರ ಬೇಪಾರಿ, ಮೆಹಬೂಬ ಲಾಹೋರಿ, ಸದ್ದಾಂ ಮನಗೂಳಿ,ಗುತ್ತಿಗೆದಾರ ರವಿ ಪಾಟೀಲ, ಸುನೀಲ,ಅಭಿಯಂತರ ಪ್ರಶಾಂತ ಲಕಶಟ್ಟಿ,ಪಿಡಿಎಂಸಿ ಮುತ್ತು ಶಿವಸಿಂಪಿಗೇರ, ಪಾಟೀಲ ಹಾಗೂ ಪುರಸಭೆ ಸಿಬ್ಬಂದಿಗಳು ಇದ್ದರು.