ಮುತಗಾದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ

Bhoomi Puja for road construction in Muthaga

ಬೆಳಗಾವಿ 08 : ಮುತಗಾ ಗ್ರಾಮದ ವಿನಾಯಕ ನಗರದ ಕಚ್ಚಾ ರಸ್ತೆಗಳ ಪೆವರ್ಸ್‌ ಜೋಡಣೆ ಮಾಡಿ ರಸ್ತೆ ನಿರ್ಮಾಣ ಮಾಡಲು ರವಿವಾರ ದಿ. 8 ರಂದು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಮುತಗಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀರಾ ದೇಶಪಾಂಡೆ, ಗ್ರಾ. ಪಂ. ಸದಸ್ಯರಾದ ರವಿ ಕೋಟಬಾಗಿ, ಸದಸ್ಯೆ ರೂಪಾ ಸಣ್ಣಮನಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವಂತ ಕಡೇಮನಿ ಗುದ್ದಲಿ ಪೂಜೆ ನೆರವೇರಿಸಿದರು.  

ನಂತರ ಮಾತನಾಡಿದ ಅಧ್ಯಕ್ಷೆ ಮೀರಾ ದೇಶಪಾಂಡೆ, ಗ್ರಾಮದ ಅಭಿವೃದ್ಧಿಗಾಗಿ ನಾವೆಲ್ಲರೂ ಸನ್ನದ್ಧರಾಗಿದ್ದೇವೆ. ಆದರೆ ಇದಕ್ಕೆಲ್ಲ ಕೆಲ ಸಮಯ ಬೇಕಾಗುತ್ತದೆ. ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳ ಬೇಕಾಗುತ್ತದೆ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ನುಡಿದರು.  

ಈ ಭಾಗದ ಸಮಸ್ಯೆಗಳನ್ನು ವಿವರಿಸುತ್ತ, ಗ್ರಾಮಸ್ಥ ಎಎಸ್ ಐ ಭೀಮರಾಯ ಚೌಗಲಾ ಅವರು ಮಾತನಾಡಿ ಗಟಾರು, ರಸ್ತೆ, ಬೀದಿ ದೀಪಗಳು ಇಲ್ಲಿನ ಅವಶ್ಯಕತೆಗಳಾಗಿವೆ. ಇವುಗಳನ್ನು ಶೀಘ್ರದಲ್ಲಿ ಒದಗಿಸಿಕೊಡಬೇಕೆಂದು ಕೇಳಿಕೊಂಡರು.  

ಕಾರ್ಯಕ್ರಮದಲ್ಲಿ ನಿಲಜಿ ಪಿಡಿಓ ಶ್ರೀದೇವಿ ಹಿರೇಮಠ, ಸಂತೋಷ ಸುತಾರ, ರಾಜಕುಮಾರ ಪಂಚಾಳ, ಬಸವಣ್ಣೆಪ್ಪ ಕುಂಬಾರ, ಗಣಪತಿ ಗಡ್ಡಿ, ಹರ್ಷವರ್ಧನ್ ಕಾಂಬಳೆ ಬಸವರಾಜ ಪಾಟೀಲ, ಕೃಷ್ಣಾ ರಾಚಣ್ಣವರ, ರಮೇಶ ದೇಶಪಾಂಡೆ, ಗಿರಿಮಲ್ಲಪ್ಪ ಆಸಂಗಿ ಮುಂತಾದವರು ಹಾಜರಿದ್ದರು.  

ನಿವೃತ್ತ ಶಿಕ್ಷಕ ವಸಂತ ಕಟ್ಟಿ ವಂದಿಸಿದರು.