ಅತೀ ಶೀಘ್ರದಲ್ಲೇ ಸೋಮಪ್ಪ ದೇವಸ್ಥಾನದ ಸಮುದಾಯ ಭವನಕ್ಕೆ 1ಕೋಟಿ.ವೆಚ್ಚದಲ್ಲಿ ಭೂಮಿ ಪೂಜೆ: ಶಾಸಕ.ಜೆ.ಎನ್‌.ಗಣೇಶ

ಕಂಪ್ಲಿ 21: ಕಂಪ್ಲಿ ತಾಲೂಕು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ 2024-2025ನೇ ಸಾಲಿನ ಎಸ್‌ಎಚ್‌ಡಿಪಿ-2054 ಯೋಜನೆಯಡಿ ಸುಮಾರು 20 ಕೋಟಿ ವೆಚ್ಚದಲ್ಲಿ ಕಂಪ್ಲಿ ವಾಲ್ಮೀಕಿ ವೃತ್ತದಿಂದ ಕಂಪ್ಲಿ ತಾಲೂಕಿನ ಸಂಡೂರು ಹೊಸಪೇಟೆ ಶಿರಗುಪ್ಪ ರಾಜ್ಯ ಹೆದ್ದರಿ -49 ಕಿ.ಮೀ. 56.00 ಯಿಂದ 62.00ಕಿ.ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಐತಿಹಾಸಿಕ ಸೋಮಪ್ಪ ದೇವಸ್ಥಾನದ ಸಮುದಾಯ ಭವನಕ್ಕೆ 1 ಕೋಟಿ ಅನುದಾನ ನೀಡಿದ್ದು, ಟೆಂಡರ್ ಕರೆದಿದ್ದು, ಅತಿ ಶೀಘ್ರದಲ್ಲೇ ಭೂಮಿ ಪೂಜೆ ಸಲ್ಲಿಸಲಾಗುತ್ತದೆ. ಕೆರೆಯಲ್ಲಿ ಉದ್ಯಾನವನದ ಅಭಿವೃದ್ಧಿಗಾಗಿ 2ಕೋಟಿ ಹೆಚ್ಚುವರಿ ಅನುದಾನ ಕೊಟ್ಟಿದೆ. ಹೀಗೆ ಕಂಪ್ಲಿ ನಗರದ ಅಭಿವೃದ್ಧಿಗೆ ಒಟ್ಟಾರೆ 40 ಕೋಟಿ ಅನುದಾನ ಕೊಟ್ಟಿವೆ. ಹಂಪಿ ಉತ್ಸವ ಸಂದರ್ಭದಲ್ಲಿ ಕಂಪ್ಲಿ ಉತ್ಸವ ಮಾಡಲಾಗುವುದು.  

ಕಂಪ್ಲಿ ಪಟ್ಟಣದ ರಸ್ತೆ ಅಭಿವೃದ್ಧಿಗಾಗಿಯೇ 40ಕೋಟಿ ರೂಪಾಯಿಗಳಷ್ಟು ಹಣ ಮಂಜೂರಾಗಿದೆ. ರೈತರು ರಸ್ತೆಯ ಮೇಲೆ ಟ್ರ್ಯಾಕ್ಟರ್‌ಗಳಿಗೆ ವೀಲ್ ಪಟ್ಲರ್ ಅಳವಡಿಸಿ ಚಲಾಯಿಸಬಾರದು. ಕ್ಷೇತ್ರದಲ್ಲಿನ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನ ನಡೆಸಿದ್ದೇನೆ ಎಂದರು. .ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಭಟ್ಟ ಪ್ರಸಾದ್, ಕೆ.ಎಸ್‌.ಚಾಂದ್ ಭಾಷಾ, ವೀರಾಂಜಿನೇಯ, ಮುಖಂಡರಾದ ಪಿ.ಮೂಕಯ್ಯಸ್ವಾಮಿ, ಕೆ.ಎಂ.ಹೇಮಯ್ಯಸ್ಚಾಮಿ, ಡಾ.ಎ.ಸಿ.ದಾನಪ್ಪ, ಜಿ.ಜಿ.ಚಂದ್ರಣ್ಣ, ಜಿ.ರಾಮಣ್ಣ, ಬಿ.ದೇವೇಂದ್ರ, ವಿ.ಸತ್ಯಪ್ಪ, ಆಟೋ ರಘು, ಡಿ.ಮೌನೇಶ, ಹೊನ್ನಳ್ಳಿ ಗಂಗಾಧರ, ಜಾಫರ್, ಕೃಷ್ಣ, ಕೆ.ಹೊನ್ನೂರ​‍್ಪ, ಪೇಂಟರ್ ಮಸ್ತಾನ್, ಶಶಿಕುಮಾರ್, ಶ್ರೀನಿವಾಸ ಸೇರಿದಂತೆ ಅನೇಕರಿದ್ದರು.