ಸಾರಿಗೆ ಬಸ್ ನಿಲುಗಡೆಗೆ ಭೀಮ್ ಆರ್ಮಿ ಒತ್ತಾಯ
ಕಂಪ್ಲಿ 04: ನಂ.10 ಮುದ್ದಾಪುರ ಗ್ರಾಪಂಯ ಯಲ್ಲಮ್ಮಕ್ಯಾಂಪ್ ಬಳಿಯಲ್ಲಿರುವ ಮುಖ್ಯ ರಸ್ತೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರಿಗಾಗಿ ಸಾರಿಗೆ ಬಸ್ ನಿಲ್ಲಿಸುವಂತೆ ಆಗ್ರಹಿಸಿ, ಭೀಮ್ ಆರ್ಮಿ ತಾಲೂಕು ಘಟಕದಿಂದ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ನಿಯಂತ್ರಣಾಧಿಕಾರಿ ಆಧಿಶೇಷಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ನಂತರ ತಾಲೂಕು ಅಧ್ಯಕ್ಷ ಎ.ಎಸ್.ಯಲ್ಲಪ್ಪ ಮಾತನಾಡಿ, ಕಂಪ್ಲಿಯಿಂದ ಸುಮಾರು 3-4 ಕಿ.ಮೀಟರ್ ದೂರದಲ್ಲಿ ಡಿಪ್ಲೋಮಾ, ಹಾಸ್ಟೇಲ್ ಇದ್ದು, ಇಲ್ಲಿಗೆ ಬರಲು ದೂರವಾಗುವುದರಿಂದ ಸಾರಿಗೆ ಬಸ್ ನಿಲ್ಲಿಸುವುದಿಲ್ಲ. ದಿನನಿತ್ಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಮುದ್ದಪುರ ಗ್ರಾಪಂಯ ಯಲ್ಲಮ್ಮ ಕ್ಯಾಂಪ್‌ನಿಂದ ಕಂಪ್ಲಿಗೆ ಬರಲು ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ಮಾಡದೇ ಇರುವುದರಿಂದ ತುಂಬ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೂಲಕ ಸಂಚರಿಸಬೇಕಾಗಿದೆ. ಇಲ್ಲಿನ ಮುಖ್ಯರಸ್ತೆಯಲ್ಲಿ ಸಾಕಷ್ಟು ಸಾರಿಗೆ ಬಸ್‌ಗಳ ಓಡಾಟ ಇದ್ದರೂ, ನಿಲ್ಲಿಸುತ್ತಿಲ್ಲ. ಆದ್ದರಿಂದ ಕೂಡಲೇ ಅಧಿಕಾರಿಗಳು ಎಚ್ಚವಹಿಸಿ, ಬಸ್ ನಿಲುಗಡೆಗೆ ಸೂಕ್ತಕ್ರಮವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಡಿಗೇರ್ ಜಿಲಾನಸಾಬ್, ಮರಿಯಣ್ಣ, ಬಸವರಾಜ, ಸತೀಶ, ಬಸಪ್ಪ, ಕಂಪ್ಲಿ ಬಸವರಾಜ, ಧನಂಜಯ ಇದ್ದರು.