ಬೆಳ್ಳಟ್ಟಿ ಗ್ರಾಮ: ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಜಾಗೃತಿ, ಉಲ್ಲಂಘನೆ ವಿರುದ್ಧ ದಂಡ

ಗದಗ 13:  ಶಿರಹಟ್ಟಿ  ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ  ಕೋಟ್ಪಾ 2003 ತಂಬಾಕು ನಿಯಂತ್ರಣ ಕಾಯ್ದೆ, ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಸ್ಥರಲ್ಲಿ ಜಾಗೃತಿ ದಿ. 11ರಂದು ಉಲ್ಲಂಘನೆ ಮೂಡಿಸಿ ವಿರುದ್ಧ  ಕಾರ್ಯಾಚರಣೆ ಹಮ್ಮಿಕೊಂಡು ಸೆಕ್ಷನ್ 4 ಉಲ್ಲಂಘನೆ ವಿರುದ್ಧ ಕ್ರಮಕೈಗೊಳ್ಳಲಾಯಿತು. 

ಸೆಕ್ಷನ್ 4 ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧವೆಂದು ಕಾಯ್ದೆ ಇದ್ದರು ಸಹ ಕೆಲವು ಪಾನ್ ಶಾಪ್ ಟೀ ಪಾಯಿಂಟ್ಗಳಲ್ಲಿ ಧೂಮಪಾನಕ್ಕಾಗಿಯೇ ಪ್ರತ್ಯಕ ಸ್ಥಳ ಮಾಡಿ ಧೂಮಪಾನ ನಿಷೇಧ ಕಾಯ್ದೆ ಉಲ್ಲಂಗನೆಯಾಗುತ್ತಿದ್ದು ಜೊತೆಗೆ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ,  ಅಂಗಡಿ ಮುಗ್ಗಟ್ಟುಗಳ ಹಾಗೂ ಸಾರ್ವಜನಿಕ ಪತ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ತಬಾಕು ಮಾರಾಟ ನಿಷೇಧ ಎಂಬ ಅಧಿಕೃತ 30*60 ಸೆಂ.ಮೀ. ಅಳತೆಯ ನಾಮಫಲಕಗಳನ್ನು ಕಡ್ಡಾಯವಾಗಿ ಬಿತ್ತರಿಸುವದು ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ. ತಂಬಾಕು ಉತ್ಪನ್ನಗಳನ್ನು ಅಂಗಡಿಗಳಲ್ಲಿ ಪ್ರದಶರ್ಿಸಬಾರದು, ಶಾಲಾ ಕಾಲೇಜು ಆವರಣದದಿಂದ 100 ಗಜದ ಒಳಗಡೆ ತಂಭಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು, ಹಾಗೂ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ 85%ರಷ್ಟು ಆರೋಗ್ಯ ಎಚ್ಚರಿಕೆ ಚಿತ್ರ ಮುದ್ರಿಸಿದಲ್ಲಿ ಮಾತ್ರ ಮಾರಾಟಕ್ಕೆ ಅವಕಾಶವಿದೆ ಎಂದು ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ. ಇಂತಹ ಕಾಯ್ದೆ ಉಲ್ಲಂಘನೆ ವಿರುದ್ಧ ಕಾನೂನು ರೀತಿ ಕ್ರಮಕೈಗೊಂಡು 7 ಪ್ರಕರಣ ಹಾಗೂ ರೂ.1800 ದಂಡವಿಧಿಸಲಾಯಿತು, ತಂಡದಲ್ಲಿ ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ ಆರೋಗ್ಯ ಇಲಾಖೆಯಿಂದ ರಶ್ಮಿ ಪಾಟೀಲ ವೈದ್ಯಾಧಿಕಾರಿಗಳು ಪ್ರಾ.ಆ.ಕೇಂದ್ರ ಬೆಳ್ಳಟ್ಟಿ, ಪ್ರಕಾಶ ಎಸ್. ಕರ್ಜಗಿ ತಾಲೂಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಶಿರಹಟ್ಟಿ, ಎಚ್.ಲಿ.ತಳವಾರ, ಕಾರ್ಯದರ್ಶಿಗಳು, ಗ್ರಾ.ಪಂ. ಬೆಳ್ಳಟ್ಟಿ, ಪ್ರತಾಪ್ ಎಂ.ವೈ.ಗ್ರಾಮ ಲೆಕ್ಕಿಗರು ಬೆಳ್ಳಟ್ಟಿ, ಎಸ್.ಸಿ.ತೇಗೂರು ಎಲ್.ಎಚ್.ವಿ, ಆನಂದ ಕಿ.ಆ.ಸ. ಪೊಲೀಸ್ ಇಲಾಖೆಯಿಂದ ಎಲ್.ಆರ್.ಕೊಳ್ಳಿ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ಮಾಡಲಾಯಿತು.