ಬಳ್ಳಾರಿ, ಜ 6, ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಇಬ್ಬರು ಸದಸ್ಯರು ಮೃತಪಟ್ಟಿರುವ ದುರ್ಘಟನೆ ತಾಲೊಕಿನ ಸಂಜೀವರಾಯನ ಕೋಟೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.ಮೃತ ದುರ್ದೈವಿಗಳನ್ನು ತಾಯಿ ಪಾರ್ವರ್ತಿ, ಮಗಳು ಹುಲಿಯಮ್ಮ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಡುಗೆಮನೆಯಲ್ಲಿ ತಾಯಿ ಮಗಳು ಬೆಳಗಿನ ಉಪಹಾರ ಸಿದ್ದಪಡಿಸುತ್ತಿದ್ದಾಗ ಅನಿಲ ಸಿಲಿಂಡರ್ ಸ್ಪೋಟಗೊಂಡು ದುರಂತ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಮನೆಯ ಹೆಚ್ಚಿನ ಭಾಗ ಜಖಂಗೊಂಡಿದ್ದು, ಸ್ಥಳಕ್ಕೆ ದಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದ ಅಗ್ನಿಶಾಮಕ ಸಿಬ್ಬಂದಿ ಅಡುಗೆಮನೆಯಲ್ಲಿ ಸುಟ್ಟು ಕರಕಲಾಗಿದ್ದ ತಾಯಿ- ಮಗಳ ಮೃತ ದೇಹವನ್ನುಹೊರಗೆ ಸಾಗಿಸಿದ್ದಾರೆ.ಬಳ್ಳಾರಿ ಗ್ರಾಮೀಣ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.