ಬಳ್ಳಾರಿ: ಬಡತನವೆಂಬ ಭೂತ ಶಿಕ್ಷಣಕ್ಕೆ ಅಡ್ಡಿಯಾಗಬಾರದು: ನಾಗವೇಣಿ

ಲೋಕದರ್ಶನ ವರದಿ

ಬಳ್ಳಾರಿ 10: ಬಡತನವೆಂಬ ಭೂತ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಎಂದು ಸನ್ಮಾರ್ಗ ಗೆಳೆಯರ ಬಳಗದ ಮಹಿಳಾ ವಿಭಾಗದ ನಾಗವೇಣಿ ಇವರು ಪ್ರತಿಪಾದಿಸಿದರು. ನಗರದ ಕರ್ನಾಟಕ ಪಬ್ಲಿಕ್ ಶಾಲೆ (ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ) ಸಂಕ್ರಾಂತಿ ಹಬ್ಬದ ಪ್ರಯುಕ್ತ ಸನ್ಮಾರ್ಗ ಗೆಳೆಯರ ಬಳವು ವಿದ್ಯಾರ್ಥಿನಿಯರಿಗೆ ಉಚಿತ ನವ ವಸ್ತ್ರದಾನ ಕಾರ್ಯಕ್ರಮದಲ್ಲಿ ಬಾಲಕಿಯರ ಸಿದ್ದ ಉಡುಪು ವಿತರಿಸಿ ಮಾತನಾಡಿದ ಅವರು, ಅಜ್ಷಾನ ಹಾಗೂ ಬಡತನವನ್ನು ಹೋಗಲಾಡಿಸಲು ಪ್ರಮುಖ ಸಾಧನ "ಶಿಕ್ಷಣ" ಪ್ರಯುಕ್ತ ಬಾಲಕಿಯರು ಶ್ರಮ ವಹಿಸಿ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಲು ಕರೆ ನೀಡಿದರು.

ಬಡತನದ ನೆಪವೊಡ್ಡಿ ಸಾಧನೆಯಲ್ಲಿ ಹಿಂದುಳಿಯದೇ ಪ್ರಾಮಾಣಿಕವಾಗಿ ಅಧ್ಯಯನ ಮಾಡಿ ಪಠ್ಯಪುಸ್ತಕ ಹಾಗೂ ಪೂರಕ ಪಠ್ಯಗಳನ್ನು ಅಧ್ಯಯನ ಮಾಡಿ ಮುಂದಿನ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಿ ಯಶಸ್ಸು ಗಳಿಸಿ ಸಮಾಜದ ಋಣ ತಿರಿಸುವ ವ್ಯಕ್ತಿಗಳು ನೀವಾಗಿ ಎಂದು ಹಾರೈಸಿದರು.

ಬಳ್ಳಾರಿಯ ಕಳಾಂಜಲಿ ಶಿಲ್ಕ್ಸ್ನ ಮಾಲೀಕರಾದ ನಾಗರಾಜ ಇವರು ವಸ್ತ್ರದಾನಿಗಳಾಗಿದ್ದು, ಇವರು ಮಾತನಾಡಿ ನಮ್ಮ ದುಡಿಮೆಯಲ್ಲಿನ ಸ್ವಲ್ಪ ಭಾಗವನ್ನು ಹಂಚಿ ತಿನ್ನುವ ಮೂಲಕ ಸಮಾಜಕ್ಕೆ ಸಹಾಯವಾಗುವ ಸ್ವಭಾವ ಬೆಳೆಸಿಕೊಳ್ಳೋಣ ಎಂದರು. ದಾನ ಧರ್ಮಗಳ: ಜೊತೆಗೆ ವಿಚಾರಗಳಲ್ಲಿ ಒಳಿತನ್ನು ಅಗರಿಸಿಕೊಂಡು ಸ್ಪಷ್ಟ ಸಮಾಜ ನಿರ್ಮಿಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಢಿದ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಂ.ಮಹಾಲಿಂಗನಗೌಡ ಇವರು ಮಾತನಾಡಿ ಒಳ್ಳೆ ಕೆಲಸ ಮಾಡುವ ಹೃದಯವಂತರಿಗೆ ಸಾಧಕರಿಗೆ ಸಮಾಜದಲ್ಲಿ ಕೈಜೋಡಿಸುವ ಸಹಾಯ ಮಾಡುವ ಜನ ಇದ್ದೇ ಇರುತ್ತಾರೆ. ಎಲ್ಲೂ ಎದೆಗುಂದದೇ ನಿಮ್ಮ ಸಾಧನೆ ಮುಂದುವರೆಯಲು ತಾವೆಲ್ಲಾ ಶ್ರಮಿಸಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳಿಗೆಲ್ಲ ಒಂದೇ ಗುರಿ ಇರಬೇಕು. ಅದು ಶಿಕ್ಷಣ ಎಂದರು. ಸನ್ಮಾರ್ಗ ಗೆಳೆಯರ ಬಳಗದ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ಸದರಿ ಕಾರ್ಯಕ್ರಮದಲ್ಲಿ ಬಳ್ಳಾರಿಯ ಹಾಸ್ಯ ಸಾಹಿತಿ ಶಿಕ್ಷಕ ಯರ್ರಿಸ್ವಾಮಿ ಹಾಸ್ಯ ಕಾರ್ಯಕ್ರಮ ಮೂಲಕ ನೆರೆದವರನ್ನು ರಂಜಿಸಿದರು.

ಸನ್ಮಾರ್ಗ ಗೆಳೆಯರ ಬಳಗದ ಪ್ರಜ್ವಲ್ ಹನುಮಂತಪ್ಪ ವಸಂತಲಕ್ಷ್ಮಿ ಮೋದರ, ಗುರು ಫಂಕ್ಷನ್ ಹಾಲ್ನ ಸುಬ್ಬಾರಾವ್, ತೇಜಾ ರಘುರಾಮ ಹಾಜರಿದ್ದರು. ಸನ್ಮಾರ್ಗ ಗೆಳೆಯರ ಬಳಗದ ಕಾರ್ಯಕ್ರಮ ಚಂದ್ರಶೇಖರ ಆಚಾರ್ ನಿರೂಪಿಸಿದರು. ಉಪನ್ಯಾಸಕರಾದ ಯು.ಶ್ರೀನಿವಾಸಮೂತರ್ಿ ಸ್ವಾಗತಿಸಿದರು. ಚಾಂದ್ಪಾಷ ವಂದಿಸಿದರು. ಕಾಲೇಜಿನ ವತಿಯಿಂದ ಸನ್ಮಾರ್ಗ ಗೆಳೆಯರ ಬಳಗದವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಎ.ವೀರಣ್ಣ ಮಲ್ಲಿಕಾರ್ಜುನಗೌಡ ಹಾಜರಿದ್ದರು.