ಬಳ್ಳಾರಿ: ಜಿಲ್ಲಾಧಿಕಾರಿಗಳಿಂದ ಬಳ್ಳಾರಿ ನಗರ ಪ್ರದಕ್ಷಿಣೆ 'ಬೀದಿಗೆ ಕಸ ಎಸೆಯುವವರ ಮೇಲೆ ದಂಡ ವಿಧಿಸಲು ಸೂಚನೆ'

ಲೋಕದರ್ಶನ ವರದಿ

ಬಳ್ಳಾರಿ 07: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ನಗರದ ವಿವಿಧೆಡೆ ಗುರುವಾರ ಪರಿವೀಕ್ಷಣೆ ನಡೆಸಿದರು. 

      ಬೆಳಿಗ್ಗೆ 5.30ಕ್ಕೆ ನಗರದ ಮುನಿಸಿಪಲ್ ಕಾಲೇಜಿನ ಎದುರುಗಡೆ ಇರುವ ಪಾಲಿಕೆಯ ನಾರಾಯಣರಾವ್ ಉದ್ಯಾನವನಕ್ಕೆ ಭೇಟಿ ನೀಡಿ ಪಾಲಿಕೆಯ ಪೌರ ಕಾರ್ಮಿಕರ ಹಾಜರಾತಿ ಪರಿಶೀಲಿಸಿ ನಂತರ ಪೌರ ಕಾರ್ಮಿಕರ ಜೊತೆಗೆ ಅವರ ದಿನನಿತ್ಯದ ಕಾರ್ಯ ಹಂಚಿಕೆ ಹಾಗೂ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು. 

    ಪೌರ ಕಾರ್ಮಿಕರಿಗೆ ಲಭ್ಯವಿರುವ ಸಕರ್ಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗೂ ಸೌಲಭ್ಯಗಳ ಬಗ್ಗೆ ಪೌರ ಕಾರ್ಮಿಕರಿಗೆ ಮಾಹಿತಿ ನೀಡಲು ಪಾಲಿಕೆಯ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚಿಸಿದರು. ತದನಂತರ ನಗರದ ಗಡಗಿ ಚನ್ನಪ್ಪ ವೃತ್ತ, ದುರ್ಗಮ್ಮ ದೇವಸ್ಥಾನ, ವಾಲ್ಮೀಕಿ ವೃತ್ತ, ಹೆಚ್.ಆರ್.ಗವಿಯಪ್ಪ ವೃತ್ತ, ಕಾಳಮ್ಮ ಬೀದಿ, ದೊಡ್ಡ ಮಾರುಕಟ್ಟೆ, ಬಾಪೂಜಿ ವೃತ್ತ, ಎ.ಪಿ.ಎಂ.ಸಿ, ರಂಗಮಂದಿರ, ಕೌಲ್ ಬಜಾರ್, ಬೆಳಗಲ್ ವೃತ್ತ, ಸುಧಾ ಕ್ರಾಸ್ ಸ್ಥಳಗಳಿಗೆ ಭೇಟಿ ನೀಡಿ ನಗರದ ವಿವಿಧ ಕಡೆ ಇರುವ ಕಸದ ರಾಶಿಗಳನ್ನು ಕೂಡಲೇ ತೆರವುಗೊಳಿಸಲು ಸೂಚಿಸಿದರು. 

      ಈ ಮಧ್ಯೆ ಇನ್ಫ್ಯಾಂಟರಿ ರಸ್ತೆಯಲ್ಲಿ ಮಹಿಳೆಯೊಬ್ಬರು ಕಸವನ್ನು ಬೀದಿಗೆ ಎಸೆಯುವುದು ಕಂಡುಬಂದಿದ್ದು ಕಸವನ್ನು ಬೀದಿಗೆ ಎಸೆಯದಂತೆ ಹಾಗೂ ಪಾಲಿಕೆಯ ಮನೆ ಮನೆ ಕಸ ಸಂಗ್ರಹ ವಾಹನಕ್ಕೆ ತಪ್ಪದೇ ನೀಡಲು ಸೂಚಿಸಿದರು. 

     15 ದಿನಗಳ ನಂತರ ಪುನಃ ನಗರದ ವೀಕ್ಷಣೆ ಕೈಗೊಳ್ಳಲಿದ್ದು ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲು ಎಚ್ಚರಿಕೆ ನೀಡಿದರು. 

      ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿದರ್ೆಶಕರಾದ ರಮೇಶ್ ಬಿ.ಎಸ್, ಪಾಲಿಕೆ ಆಯುಕ್ತರಾದ ಎಂ.ವಿ ತುಗಣರಮಣಿ, ಪಾಲಿಕೆಯ ಆರೋಗ್ಯ ಅಧಿಕಾರಿಗಳು, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರುಗಳು ಇದ್ದರು.