ಬಳ್ಳಾರಿ : ಅಯ್ಯಪ್ಪನ ಉತ್ಸವಮೂರ್ತಿಗೆ ಭಕ್ತಾದಿಗಳಿಂದ ಅಭಿಷೇಕ

ಲೋಕದರ್ಶನ ವರದಿ

ಬಳ್ಳಾರಿ 27: ಶುಕ್ರವಾರ ವಿಶೇಷ ತುಪ್ಪಾಭಿಷೇಕ ಕಾರ್ಯಕ್ರಮದಲ್ಲಿ ಧರ್ಮಸಾಸ್ಥ ಹೋಮ ಕಳಸ ಸುದ್ಧೀಕರಣ ಮತ್ತು ಕಳಸ ಸುದ್ದೀಕರಣ ಮತ್ತು ಕಳಸಗಳಿಗೆ ಷಡೋಶೋಪಚಾರ ಸಹಸ್ರಕಳಸಗಳಿಂದ ಅಯ್ಯಪ್ಪನ ಉತ್ಸವಮೂತರ್ಿಗೆ ಭಕ್ತಾದಿಗಳಿಂದ ಅಭಿಷೇಕ ಮತ್ತು 21 ಪ್ರಧಾನಕಳಸಗಳಿಂದ ಗುಡಿಯಲ್ಲಿ ಮೂಲ ವಿರಾಟ್ಗೆ ಅಭಿಷೇಕ

ಬೆಳಿಗ್ಗೆ 11.00 -12.00 ಗಂ ವರೆಗೆ ಅಯ್ಯಪ್ಪ ಲಕ್ಷ್ಯಾರ್ಚನ, ಮದ್ಯಾಹ್ನ 12.00-1.00 ಭಜನ ಕಾಳಗಟ್ಟಿ ಆಶ್ರಮದಲ್ಲಿ ಪೂಜೆ ಮತ್ತು ಅಯ್ಯಪ್ಪನಿಗೆ ಮಹಾ ಮಂಗಳಾರತಿ. ಮದ್ಯಾಹ್ನ: 1.00 ರಿಂದ 2.30 ಗಂಟೆಗೆ: ಪ್ರಸಾದ ವಿನಿಯೋಗ, ಸಂಜೆ: 6.00 ರಿಂದ 8.30 ಗಂಟೆಗೆ ಅರೈ ತೆಂಡ್ರಾಲ್ ಕಲೈಮಣಿ "ವೀರಮಣಿ ರಾಜು" ಮತ್ತು ಭಕ್ತಿ ಗಾನ ಗಂಧರ್ವ "ಅಭಿಷೇಕ್ ರಾಜು" ಮತ್ತು ಸಂಗಡಿಗರಿಂದ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗಳ ಸಂಗೀತ ವಿಭಾವರಿ.

ರಾತ್ರಿ 8.30 ರಿಂದ 9.00 ಗಂಟಗೆ: 18 ಮೆಟ್ಟಿಲುಗಳಿಗೆ "ಪಡಿ ಪೂಜೆ" ರಾತ್ರಿ 9.00 ಗಂಟೆಗೆ ಪ್ರಸದ ವಿನಿಯೋಗವನ್ನು ಶಬರಿ ಅಯ್ಯಪ್ಪ ಟ್ರಸ್ಟ್(ರಿ), ಶ್ರೀರಾಘವೇಂದ್ರ ಕಾಲೋನಿ, 2ನೇ ಹಂತ, ತಾರಾನಾಥ ಆಯುವರ್ೇದ ಕಾಲೇಜು ಹತ್ತಿರ, ಅನಂತಪುರ ರಸ್ತೆ, ಸ್ವಾಮಿ ಶರಂಣ ಅಯ್ಯಪ್ಪ ಭಕ್ತ ಮಂಡಳಿ, ಮಣಿಕಂಠ ಭಜನೆ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು

ಪೂಜಾ ಕಾರ್ಯಕ್ರಮದಲ್ಲಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತರಾದ ತುಷರ್ ರಮಣಿ, ದೇವಸ್ಥಾನದ ಚೇರ್ಮನ್ ಆದ ಜಯಪ್ರಕಾಶ್ ಜೆ.ಗುಪ್ತ, ಟ್ರೆಸ್ಟ್ನ ಸದಸ್ಯರಾದ ಎ.ನಟರಾಜ್, ಕೆ.ದಿನೇಶ್ ಬಾಬು, ಡಿ.ವಿನೋದ್, ಟಿ.ಎಸ್.ನಾಗರಾಜ್ ಎ.ಇ, ಮಂಜುನಾಥ ಹಾಗೂ ನೂರಾರು ಮಂದಿ ಅಯ್ಯಪ್ಪ ಮಾಲಾದರಿಗಳು ಮತ್ತು ಅಯ್ಯಪ್ಪ ಭಕ್ತಾದಿಗಳು ಭಾವಗಿಸಿದ್ದು, ಸುಮಾರು 10,000 ಕ್ಕೂ ಹೆಚ್ಚು ಜನರಿಗೆ ಅನ್ನದಾನ ಕಾರ್ಯಕ್ರಮ ನಡೆದಿರುತ್ತದೆ ಎಂದು ಶಬರಿ ಅಯ್ಯಪ್ಪ ಟ್ರಸ್ಟ್(ರಿ) ದೇವಸ್ಥಾನದ ಚೇರ್ಮನ್ ಆದ ಜಯಪ್ರಕಾಶ್ ಜೆ.ಗುಪ್ತ ತಿಳಿಸಿದ್ದಾರೆ.