ಬಳ್ಳಾರಿ 11: ಕುಸ್ತಿ ದೇಶದ ಪಾರಂಪರಿಕ ಕ್ರೀಡೆ. ಈ ಕುಸ್ತಿಗೆ ಪ್ರಾಚೀನತೆ ಜೊತೆಗೆ ಆಧುನಿಕನಿಕ ಸ್ಪರ್ಶ ನೀಡಿದರೇ ಮುಂದಿನ ದಿನಗಳಲ್ಲಿ ಪ್ರೊ.ಕಬಡ್ಡಿ ಮಾದರಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನಮನ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಹಂಪಿ ಉತ್ಸವದ ನಿಮಿತ್ತ ಮಲಪನಗುಡಿ ಮೈದಾನದಲ್ಲಿ ಏರ್ಪಡಿಸಿದ್ದ ಕುಸ್ತಿ ಸ್ಪಧರ್ೆ, ಕಲ್ಲು ಗುಂಡೆತ್ತುವ ಮತ್ತು ಬಂಡಿಗಾಲಿ ಜೋಡಿಸುವ ಮತ್ತು ಬಿಡಿಸುವ ಸ್ಪಧರ್ೆಗೆ ಚಾಲನೆ ನೀಡಿ ಮಾತನಾಡಿದರು.
ವಿಜಯನಗರ ಸಂಸ್ಥಾನದಲ್ಲಿ ಕುಸ್ತಿ ಸ್ಪಧರ್ೆ ಪ್ರಮುಖವಾಗಿತ್ತು. ಸ್ವತಃ ಶ್ರೀಕೃಷ್ಣದೇವರಾಯರೇ ಕುಸ್ತಿಪಟು ಆಗಿದ್ದರು. ಇಂದು ಅಳಿವಿನಂಚಿನಲ್ಲಿರುವ ಕುಸ್ತಿ ಸ್ಪಧರ್ೆಯನ್ನು ಹಂಪಿ ಉತ್ಸವ ಆಯೋಜಿಸಿ ಸ್ಥಳೀಯ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧಾಳುಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಹಂಪಿ ಉತ್ಸವ ಅನುದಾನ ನಿಗದಿ ಮೊದಲಗೊಂಡು ದಿನಾಂಕ ನಿಗದಿಪಡಿಸಿದರೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ವಹಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮವಹಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ನಕುಲ್ ಮಾತನಾಡಿ, ಈ ಭಾಗದ ಕುಸ್ತಿಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಹಂಪಿ ಉತ್ಸವದಲ್ಲಿ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ, ಪ್ರೊಬೆಷನರಿ ಐಎಎಸ್ ಈಶ್ವರ್ ಕಾಂಡೂ, ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್ ರಾಠೋಡ ಮತ್ತಿತರರು ಇದ್ದರು.