ಬಳ್ಳಾರಿ 23: ನೂತನವಾಗಿ ವಿಜಯಪುರ ಯಶ್ವಂತಪುರಗಳ (ಬೆಂಗಳೂರು) (ರೈಲು ಸಂಖ್ಯೆ: 16560) ನಡುವೆ ಆರಂಭವಾದ ವಿಶೇಷ ಎಕ್ಸ್ಪ್ರೆಸ್ ರೈಲು ಇಂದು ಸಂಜೆ: 7:00ಗಂಟೆಗೆ ಹೊಸಪೇಟೆ ರೈಲು ನಿಲ್ದಾಣಕ್ಕೆ ಆಗಮಿಸಿದಾಗ ಬಳ್ಳಾರಿ ಲೋಕಸಭಾ ಸದಸ್ಯ ವೈ.ದೇವೆಂದ್ರಪ್ಪನವರ ನೇತೃತ್ವದಲ್ಲಿ ರೈಲನ್ನು ಸ್ವಾಗತಿಸಿ ಇಂಜನ್ಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರು ಮಾತನಾಡಿ ಹೊಸಪೇಟೆ- ಕೊಟ್ಟೂರು-ದಾವಣಗೇರೆ ರೈಲು ಆರಂಭವಾದ ಒಂದೇ ವಾರದೊಳಗಾಗಿ ಅದೇ ಮಾರ್ಗದಲ್ಲಿ ಎಕ್ಸ್ಪ್ರೆಸ್ ರೈಲು ಆರಂಭವಾಗಿರುವುದು ಸಂತಸ ತಂದಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ವಕೀಲರಾದ ಗುಜ್ಜಲ್ನಾಗರಾಜ್, ತಾರಿಹಳ್ಳಿ ಹನುಮಂತಪ್ಪ, ರಘುನಾಥರಾವ್, ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಶಾಮಪ್ಪ ಅಗೋಲಿ, ಕೆ.ಮಹೇಶ್, ಮಲ್ಲಿನಾಥ, ನಿಂಬಗಲ್ ರಾಮಕೃಷ್ಣ, ಹೆಚ್.ಮಹೇಶ್, ಬಿ.ಜಹಾಂಗೀರ್, ಸತೀಶ್ಜಾಲಿ, ತಿಪ್ಪೇಸ್ವಾಮಿ, ಯು.ಅಶ್ವತಪ್ಪ, ಕಾಳಿದಾಸ್, ಬೋಡ ರಾಮಪ್ಪ, ಕುಮಾರಸ್ವಾಮಿ, ರಾಮಣ್ಣ, ಕ್ಯಾರೋಲಿನ್ ಲೂಸಿಯಾ, ಹಾಗೂ ರೈಲ್ವೆ ಅಧಿಕಾರಿಗಳಾದ ವಿಧ್ಯಾಧರ, ಉಮೇಶ್, ಮುಂತಾದವರು, ಉಪಸ್ಥಿತರಿದ್ದರು.