ವಿಮಾ ಯೋಜನೆ ಜೀವನದಲ್ಲಿ ಆತ್ಮಸ್ಥೈರ್ಯ ತುಂಬಿ ಸರಳ ಜೀವನ ಬದುಕಿಗೆ ತುಂಬಾ ಸಹಕಾರಿಯಾಗಲಿದೆ: ಮಂಜುನಾಥಗೌಡ ಎಂ.
ರಾಣೇಬೆನ್ನೂರು 29: ಡಿ 29ಯಾವುದೇ ಸಮುದಾಯದ ಕುಟುಂಬದಲ್ಲಿ ಅನೇಕ ರೀತಿಯ ಸಮಸ್ಯೆಗಳು ಇದ್ದೇ ಇರುತ್ತವೆ. ಯಾರಿಗೂ ಕಷ್ಟಗಳು, ಆಕಸ್ಮಿಕ ಘಟನೆಗಳು ಹೇಳಿಕೇಳಿ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಜೀವ ವಿಮಾ ಯೋಜನೆ ಜೀವನದಲ್ಲಿ ಆತ್ಮಸ್ಥೈರ್ಯ ತುಂಬಿ ಸರಳ ಜೀವನ ಬದುಕಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಎಸ್. ಕೆ.ಡಿ.ಆರ್, ಡಿ.ಪಿ. ಬಿಸಿ ಟ್ರಸ್ಟ್ ವಲಯ 1ರ ತಾಲೂಕ ಯೋಜನಾಧಿಕಾರಿ ಮಂಜುನಾಥಗೌಡ ಎಂ. ಹೇಳಿದರು. ಅವರು, ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ, ತಿಮ್ಮೇನಹಳ್ಳಿ ಕಾರ್ಯಕ್ಷೇತ್ರದ ಗಜಾನನ ತಂಡದ ಹನುಮಂತಪ್ಪ ತೆಕ್ಕೆದಾರ್ ಕಳೆದ ಆರು ತಿಂಗಳ ಹಿಂದೆ ಆಕಸ್ಮಿಕ ನಿಧನ ಹೊಂದಿದ್ದರು. ಅವರ( ಎಲ್‌ಐಸಿ ಮೈಕ್ರೋ ಬಚತ ) ಯೋಜನೆಯ ಅಡಿಯಲ್ಲಿ ಜೀವ ವಿಮಾ ನಿಗಮದಿಂದ ಬಿಡುಗಡೆಯಾದ, 200000-00ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಕೃಷ್ಣಮೂರ್ತಿ,ಅವರು,ಕುಟುಂಬದ ಫಲಾನುಭವಿ ಮೀನಾಕ್ಷಿ ಹೆಚ್. ತೆಕ್ಕೆದಾರ್ ಅವರಿಗೆ ಜೀವ ವಿಮಾ ನಿಗಮದಿಂದ ಬಿಡುಗಡೆಯಾದ ಚೆಕ್ ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಚಂದ್ರಶೇಖರ ಬಣಕಾರ್, ತಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಕೇಲಗಾರ, ಗದಿಗೆಪ್ಪ ಬುಡಮಣ್ಣನವರ, ಗ್ರಾ. ಪಂ.ಸದಸ್ಯರಾದ ಮಾಲತೇಶ್ ಗಡ್ಡದ, ಷಣ್ಮುಖಪ್ಪ ಅರಿಕೇರಿ, ಪರಶುರಾಮ ಪೂಜಾರ,ಮೇಲ್ವಿಚಾರಕ ಹನುಮಂತಪ್ಪ ಪಿ.ಎಸ್, ಸೇರಿದಂತೆ ಸೇವಾ ಪ್ರತಿನಿಧಿಗಳು, ಒಕ್ಕೂಟದ ಸದಸ್ಯರು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.