ಬಳ್ಳಾರಿ: ಕಮಲಾಪುರ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳು

ಲೋಕದರ್ಶನ ವರದಿ

ಬಳ್ಳಾರಿ 29: ಈ ಬಾರಿಯ ಹಂಪಿ ಉತ್ಸವಕ್ಕೆ ವೈವಿದ್ಯಮಯ ಜಲಸಾಹಸ ಕ್ರೀಡೆಗಳು ಮೆರಗು ನೀಡಲಿವೆ. ಇದಕ್ಕಾಗಿ ಕಮಲಾಪುರ ಕೆರೆಯಲ್ಲಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ ಮತ್ತು ಜಲಸಾಹಸಿಗಳಿಗೆ ಈ ಬಾರಿಯ ಹಂಪಿ ಉತ್ಸವ ಅತ್ಯಂತ ಸ್ಮರಣೀಯ ಮತ್ತು ವಿಶೇಷವಾಗಲಿದೆ.

ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಪಿ.ಎನ್.ಲೋಕೇಶ ಅವರ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಈ ಬಾರಿಯ ಜಲಸಾಹಸ ಕ್ರೀಡೆಗಳಲ್ಲಿ ಸ್ಪೀಡ್ ಬೋಟ್, ಜಡ್ಸ್ಕೀ, ಬನಾನ ಬಂಪರ್, ಕಾಯಕ್, ಸ್ಲೋಬೋಟ್ ಸೇರಿದಂತೆ ಇನ್ನೀತರ ಕ್ರೀಡೆಗಳಿರಲಿವೆ. ಕಾರವಾರದ ಹರೀಶ್ ನೇತೃತ್ವದ 5 ಜನರ ತಂಡ ಈಗಾಗಲೇ ಬಂದಿಳಿದಿದ್ದು,ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಂಪಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಕಮಲಾಪುರ ಕೆರೆಗೆ ಬಂದು ಜಲಸಾಹಸ ಕ್ರೀಡೆಗಳ ಸವಿ ಸವಿಯಬಹುದಾಗಿದೆ. ಜ.3ರಂದು ಅಧಿಕೃತವಾಗಿ ಸ್ಥಳೀಯ ಶಾಸಕ ಆನಂದಸಿಂಗ್ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಆಯುಕ್ತ ಪಿ.ಎನ್.ಲೋಕೇಶ್  ತಿಳಿಸಿದ್ದಾರೆ.

ಕೈಗೆಟಕುವ ಬೆಲೆಯಲ್ಲಿ ಪ್ರವಾಸಿಗರಿಗೆ ಜಲಸಾಹಸ ಕ್ರೀಡೆಗಳ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಕ್ರೀಡೆಗಳಲ್ಲಿ ಭಾಗವಹಿಸಬೇಕು