ಲೋಕದರ್ಶನ ವರದಿ
ಬಳ್ಳಾರಿ 02: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳ ಕಾವ್ಯದಲ್ಲಿ ನಾಡು-ನುಡಿಯ ಸಂಸ್ಕೃತಿ, ಶ್ರೀಮಂತಿಕೆ ಮತ್ತು ಪರಂಪರೆಯ ಅನಾವರಣವಾಯಿತು. ನೆರೆದ ಸಾಹಿತ್ಯಾಸಕ್ತರು, ಪ್ರೇಕ್ಷಕರು ವಿದ್ಯಾರ್ಥಿಗಳ ಕಾವ್ಯವಾಚನಕ್ಕೆ ತಲೆದೂಗಿದರು ಮತ್ತು ಪ್ರಶಂಸೆ ವ್ಯಕ್ತಪಡಿಸಿದರು.
ಕರ್ನಾಟಕ ವೈಭವ, ಕನ್ನಡ ತಾಯಿ, ಬಡತನ, ಜೈವಿಕ ಇಂಧನ, ಸಿರಿಗನ್ನಡ, ಸ್ವಚ್ಛತೆ, ಸತ್ಯದ ಅರಿವು, ಸ್ವಾರ್ಥದ ಜೀವನ ಸೇರಿದಂತೆ ನಾನಾ ವಿಷಯಗಳು ಈ ವಿದ್ಯಾರ್ಥಿಗಳು ಕವನಗಳ ಮೂಲಕ ಪ್ರಸ್ತುತಪಡಿಸಿದರು.
ವಿದ್ಯಾರ್ಥಿಗಳಾದ ಕೌಸ್ತುಭ ಭಾರದ್ವಜ, ವಿಜಯೇಂದ್ರ ಬಳ್ಳಾರಿ, ಲಕ್ಷ್ಮಣ ಸಿರಗುಪ್ಪ, ಬಿ.ಸುರೇಂದ್ರ, ವಿಶಾಲ ಸಿರುಗುಪ್ಪ, ಜೆ ರಾಣಿ ಜೋಳದರಾಶಿ, ಕಲ್ಪನ ಎ.ಕೆ. ಬಳ್ಳಾರಿ, ಕೆ.ಭೂಮಿಕಾ ತಾಳೂರು, ಪಿ.ಸರಸ್ವತಿ ತೋರಣಗಲ್ಲು, ಎಸ್.ಎಂ.ಜಯಲಲಿತಾ, ಜಗನ್ನಾಥ ಕುರುಗೋಡು, ಎಂ.ಪಿ.ಎಂ.ಶ್ರೇಯಾ ಹಗರಿಬೊಮ್ಮನಹಳ್ಳಿ, ಕೆ.ಎಂ.ಅಮಿತ್ ಕವನ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಆಶಯನುಡಿಗಳನ್ನಾಡಿದ ಸಾಹಿತಿ ಡಾ.ಸಂಪಿಗೆ ನಾಗರಾಜ ಅವರು ನಿರಂತರ ಅಧ್ಯಯನದ ಮುಖಾಂತರ ಯುವಕವಿಗಳು ಕಾವ್ಯಗಳ ರಚನೆ ಮಾಡಬೇಕು ಎಂದರು.
ಯಾವುದೇ ರೀತಿಯ ಚಳವಳಿಗಳು ಇಲ್ಲದ ಕಾಲಘಟ್ಟದಲ್ಲಿ ಇಂದಿನ ಕವಿಗಳು ಸಾಹಿತ್ಯ ರಚನೆಯಲ್ಲಿ ತೋಡಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ 125 ಅಂಕಗಳನ್ನು ಪಡೆದ ಪ್ರತಿಭಾವಂತ 250 ವಿದ್ಯಾಥರ್ಿಗಳಿಗೆ ಕನ್ನಡ ಜಾಣ-ಜಾಣೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡದ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಕನ್ನಡ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ್, ಪತ್ರಕರ್ತರಾದ ಕೆ.ಎಂ. ಮಂಜುನಾಥ, ಸಿ.ಮಂಜುನಾಥ, ಸಾಹಿತಿ ಎನ್. ಬಸವರಾಜ, ಎನ್.ಎಂ. ಮರುಳಾರಾಧ್ಯ, ಕೆ.ಸಿ.ಸುರೇಶ್, ಕೆ.ಸತ್ಯನಾರಾಯಣ, ಪಂಪಾಪತಿ ಕಲ್ಲುಕಂಭ ಇತರರು ಉಪಸ್ಥಿತರಿದ್ದರು.