ಅಥಣಿ 07: ದಕ್ಷಿಣ ಭಾರತದ ಸಕ್ಕರೆ ಕಾರಖಾನೆಗಳ ಸಂಘದ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾದ ಅಥಣಿ ಶುಗರ್ಸ ವ್ಯವಸ್ಥಾಪಕ ನಿರ್ದೇಶಕರಾದ ಯೋಗೇಶ ಪಾಟೀಲ ಇವರಿಗೆ ಅವರ ಅಭಿಮಾನಿ ಬಳಗದಿಂದ ಅಥಣಿ ಶುಗರ್ಸ ಆವರಣದಲ್ಲಿ ಗೌರವ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಯುವ ಧುರೀಣ, ಅಥಣಿ ಶುಗರ್ಸ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ, ನಮ್ಮ ತಂದೆ ಶ್ರೀಮಂತ ಪಾಟೀಲ ಮಾರ್ಗದರ್ಶನದಲ್ಲಿಯೇ ನಾವು ಮೂರು ಜನ ಸಹೋದರರು ಇಲ್ಲಿಯವರೆಗೂ ನಡೆದುಕೊಂಡು ಬಂದಿದ್ದರಿಂದಲೇ ನಾವು ನಮ್ಮ ಜೀವನದಲ್ಲಿ ಯಶಸ್ವಿಯಾಗಿದ್ದೇವೆ ಎಂದ ಅವರು ನಮಗೆ ಪ್ರಾಮಾಣಿಕತೆ, ನಿಷ್ಠೆ, ಸತ್ಯವನ್ನು ನಮ್ಮ ತಂದೆ ನಮಗೆ ಕಲಿಸಿದ್ದಾರೆ ಅವರೇ ನಮಗೆ ಮಾದರಿ ವ್ಯಕ್ತಿ ಎಂದರು. ನನ್ನ ಸಹೋದರ ಯೋಗೇಶ ಪಾಟೀಲ ಇವರಿಗೆ ದಕ್ಷಿಣ ಭಾರತ ಸಕ್ಕರೆ ಕಾರಖಾನೆಗಳ ಸಂಘದ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ ಜೊತೆಗೆ ಯೋಗೇಶ ಪಾಟೀಲ ಈಗಾಗಲೇ ಮಹಾರಾಷ್ಟ್ರ ದ ಶುಗರ್ ಮಿಲ್ಲ ಅಸೋಸಿಯೇಷನ್ ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದ ಅವರು ಭಾರತದಲ್ಲಿ ಒಬ್ಬ ಯುವಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದು ಕೂಡ ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಸಕ್ಕರೆ ಕಾರಖಾನೆಗಳಿಗಾಗಿ ದುಡಿಯುತ್ತಿರುವ ಕಬ್ಬು ಕಟಾವು ಕಾರ್ಮಿಕರಿಗೆ ಮತ್ತು ಕಾರಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಜೀವನ ಮಟ್ಟ ಹೆಚ್ಚಾಗಬೇಕು ಮತ್ತು ಕಾರಖಾನೆಗಳ ಆರ್ಥಿಕ ಮಟ್ಟ ಇನ್ನಷ್ಟು ಹೆಚ್ಚಾಗಬೇಕು ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕೈಗೊಳ್ಳುವ ಉತ್ತಮ ಕ್ರಮಗಳು ಇಡೀ ಭಾರತಕ್ಕೆ ಮಾದರಿಯಾಗಬೇಕು ಎಂದು ಶುಭ ಹಾರೈಸಿದ ಅವರು ದಕ್ಷಿಣ ಭಾರತದ ಜೊತೆಗೆ ಭಾರತೀಯ ಸಕ್ಕರೆ ಕಾರಖಾನೆಗಳ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಸಚಿವ ಶ್ರೀಮಂತ ಪಾಟೀಲ, ಯೋಗೇಶ್ ಪಾಟೀಲರ ಕಾರ್ಯಕ್ಷಮತೆ ಗಮನಿಸಿದ ದಕ್ಷಿಣ ಭಾರತ ಸಕ್ಕರೆ ಕಾರಖಾನೆಗಳ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ಅಥಣಿ ಶುಗರ್ಸ ಜೊತೆಗೆ ಮಹಾರಾಷ್ಟ್ರದಲ್ಲಿರುವ ನಮ್ಮ ಮಾಲಿಕತ್ವದ ಐದು ಕಾರಖಾನೆಗಳನ್ನೂ ಸಹ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದ ಅವರು ಅತೀ ಶೀಘ್ರದಲ್ಲಿಯೇ ಇಂಡಿಯನ್ ಶುಗರ್ ಮಿಲ್ಲ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಯೋಗೇಶ್ ಪಾಟೀಲ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಉದ್ಯಮದ ಜೊತೆಗೆ ನಾನು ಈ ಮೊದಲಿನಂತೆ ಕಾಗವಾಡ ಕ್ಷೇತ್ರದ ಅಭಿವೃದ್ಧಿಗೂ ಅಧಿಕಾರದಲ್ಲಿರಲಿ ಅಥವಾ ಇರದೇ ಇರಲಿ ನಿರಂತರವಾಗಿ ಪ್ರಯತ್ನ ಮಾಡುವೆ ನನ್ನ ಈ ಕಾರ್ಯದಲ್ಲಿ ಯುವ ಧುರೀಣ ಶ್ರೀನಿವಾಸ ಪಾಟೀಲ ಕೂಡ ಕೈ ಜೋಡಿಸಿದ್ದು, ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಕಾಗವಾಡ ಕ್ಷೇತ್ರದ ಜನರೂ ಕೂಡ ನಿಶ್ಚಿತವಾಗಿ ಸಹಕಾರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಥಣಿ ಶುಗರ್ಸ ವ್ಯವಸ್ಥಾಪಕ ನಿರ್ದೇಶಕ ಯೋಗೇಶ ಪಾಟೀಲ ಮಾತನಾಡಿ, ನಾನು ದಕ್ಷಿಣ ಭಾರತ ಸಕ್ಕರೆ ಕಾರಖಾನೆಗಳ ಕರ್ನಾಟಕದ ಅಧ್ಯಕ್ಷನಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದ ಅವರು ಸಕ್ಕರೆ ಕಾರಖಾನೆಗಳು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತವೆ ಹೀಗಾಗಿ ಸಕ್ಕರೆ ಕಾರಖಾನೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕಿದೆ ಎಂದರು. ನಾನು ಅಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ ರಾಜ್ಯ ಸಕ್ಕರೆ ಸಚಿವರನ್ನು ಭೇಟಿ ಮಾಡಿ ಸಕ್ಕರೆ ಕಾರಖಾನೆಗಳ ನಿರ್ವಹಣೆಯಲ್ಲಿನ ಮತ್ತು ಕಬ್ಬು ಕಟಾವು ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಿರುವೆ ಎಂದ ಅವರು ಸಕ್ಕರೆ ಕಾರಖಾನೆಗಳು ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಕಾರಖಾನೆಯಲ್ಲಿ ದುಡಿಯುವ ಕಾರ್ಮಿಕರ, ಕಬ್ಬು ಬೆಳೆಗಾರರ ಮತ್ತು ಕಟಾವು ಮಾಡುವ ಕಾರ್ಮಿಕರ ಸಹಕಾರ ಅತ್ಯಗತ್ಯ ಎಂದರು. ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿದರು. ಅಥಣಿ ಶುಗರ್ಸ ನಿರ್ದೇಶಕ ಅಬ್ದುಲ್ ಬಾರಿ ಮುಲ್ಲಾ ಸ್ವಾಗತಿಸಿದರು.
ವೇದಿಕೆಯಲ್ಲಿ ಧುರೀಣರಾದ ಅಪ್ಪಾಸಾಹೇಬ ಅವತಾಡೆ, ಗಜಾನನ ಮಂಗಸೂಳಿ, ಉತ್ತಮ ಪಾಟೀಲ, ಗೀರೀಶ ಬುಟಾಳಿ, ಡಾ.ಪ್ರಕಾಶ ಕುಮಠಳ್ಳಿ, ಸುಧಾಕರ ಭಗತ್, ಗಜಾನನ ಯರಂಡೋಲಿ, ನಿಂಗಪ್ಪ ನಂದೇಶ್ವರ, ಬಿ.ಎ.ಪಾಟೀಲ, ಅಪ್ಪಾಸಾಬ ಮಳಮಳಸಿ, ಅಭಯ ಅಕ್ಕಿವಾಟೆ, ಶಿವಾನಂದ ಪಾಟೀಲ, ರಾಜು ಪೊದ್ದಾರ, ಬಾಳು ಹಜಾರೆ, ಬಸಗೌಡ ಪಾಟೀಲ, ಉತ್ಕರ್ಷ ಪಾಟೀಲ, ಪ್ರಕಾಶ ಹಳ್ಳೊಳ್ಳಿ, ಅಭಯ ಪಾಟೀಲ, ತಮ್ಮಣ್ಣ ಪಾರಶೆಟ್ಟಿ, ಪ್ರಕಾಶ ಪಾಟೀಲ, ನಾನಾಸಾಹೇಬ ಅವತಾಡೆ, ಬಾಹುಸಾಹೇಬ ಜಾಧವ, ನಿಂಗಪ್ಪಾ ಖೋಕಲೆ, ರವಿ ಪೂಜಾರಿ, ಆರ್.ಎಮ್.ಪಾಟೀಲ, ಈಶ್ವರ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಗೇಶ ಪಾಟೀಲ ಅಭಿಮಾನಿಗಳು ಸತ್ಕರಿಸಿದರು.