ಬಳ್ಳಾರಿ: ಜನತಾ ಬಜಾರ್ ಆವರಣದಲ್ಲಿ ಸಹಕಾರಿ ಧುರೀಣ ಲಿಂಗಾರೆಡ್ಡಿಯವರ ಪ್ರತಿಮೆ ಅನಾವರಣ

ಲೋಕದರ್ಶನ ವರದಿ

ಬಳ್ಳಾರಿ 29: ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ದಿವಂಗತ ಲಿಂಗಾರೆಡ್ಡಿಯವರು ಸಹಕಾರಿ ತತ್ವಕ್ಕೆ ಮತ್ತೊಂದು ಹೆಸರಾಗಿದ್ದರು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ ಅಭಿಪ್ರಾಯ ಪಟ್ಟರು. 

ನಗರದ ಜನತಾ ಬಜಾರ್ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಸಹಕಾರಿ ಧುರೀಣ ಲಿಂಗಾರೆಡ್ಡಿಯವರ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಿ ಮಾತನಾಡಿದರು. 

ಲಿಂಗಾರೆಡ್ಡಿಯವರು ಮೂಲತಃ ಆಂಧ್ರಪ್ರದೇಶದವರು. ಬಳ್ಳಾರಿಗೆ ಬಂದು ನೆಲೆಸಿ ಕುರುಗೋಡು ಕ್ಷೇತ್ರದ ಶಾಸಕರಾದರು. ಅಷ್ಟಕ್ಕೆ ನಿಲ್ಲದ ಅವರ ಜನಸೇವೆ ಬಳ್ಳಾರಿ ನಗರದಲ್ಲೂ ಜನತಾ ಬಜಾರ್ ಸ್ಥಾಪಿಸುವ ಮೂಲಕ ಅಂದಿನ ದಿನದಲ್ಲಿಯೇ ಮಾರುಕಟ್ಟೆ ಧರಕ್ಕಿಂತ ಕಡಿಮೆ ಬೆಲೆಗೆ ದಿನ ಬಳಕೆ ವಸ್ತುಗಳ ಮಾರಾಟ ವ್ಯವಸ್ಥೆಯನ್ನು ಸಹಕಾರಿ ತತ್ವದಡಿ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದರು ಎಂದು ಸ್ಮರಿಸಿದರು. 

ಕೃಷಿ ಕ್ಷೇತ್ರದಲ್ಲೂ ರೈತರ ಅಭಿವೃದ್ಧಿಗಾಗಿ ಶ್ರಮಿಸಿದ್ದ ದಿವಂಗತ ಲಿಂಗಾರೆಡ್ಡಿಯವರು, ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕಂಪ್ಲಿಯಲ್ಲಿ ಸಕ್ಕರೆ ಕಾಖರ್ಾನೆ ಆರಂಭಿಸಿದ್ದರು. ನಗರದ ಅಲ್ಲೀಪುರದ ಬಳಿ ದಾರದ ಮಿಲ್ನ್ನು ಸಹ ಆರಂಭಿಸಿ ನೂರಾರು ಜನರಿಗೆ ಉದ್ಯೋಗ ನೀಡಿದ ಖ್ಯಾತಿ ಅವರದ್ದಾಗಿತ್ತು. ಹಲವು ಕಾರಣಗಳಿಂದ ಸಕ್ಕರೆ ಕಾಖರ್ಾನೆ, ದಾರದ ಮಿಲ್ ಮುಚ್ಚಿವೆ. ಜನತಾ ಬಜಾರ್ ಇಂದಿಗೂ ನಡೆದುಕೊಂಡು ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಅವರ ಸ್ಮರಣೆಗೆ ಪ್ರತಿಮೆ ಅನಾವರಣಗೊಳಿಸಿದ್ದು ಎಲ್ಲರೂ ಮೆಚ್ಚುವಂತಹ ಕೆಲಸವಾಗಿದೆ ಎಂದು ಗುಣಗಾನ ಮಾಡಿದರು. 

ಸಮಾರಂಭದಲ್ಲಿ ಸಿರುಗುಪ್ಪ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್) ಅಧ್ಯಕ್ಷ ಹುಂಡೇಕರ್ ಪ್ರಕಾಶ್, ಉಪಾಧ್ಯಕ್ಷ ಪಾಲಾಕ್ಷಿರೆಡ್ಡಿ, ಪ್ರಧಾನ ವ್ಯವಸ್ಥಾಪಕ ದಸ್ತಗಿರಿ ಅಲಿ, ಲಿಂಗಾರೆಡ್ಡಿ ಅವರ ಮೊಮ್ಮಗ ರಾಮ್ ಪ್ರಕಾಶ್ ರೆಡ್ಡಿ, ಹೊಟೇಲ್ ಉದ್ಯಮಿ ಸೂರ್ಯಕುಮಾರಶೆಟ್ಟಿ, ಮಾಜಿ ಉಪಾಧ್ಯಕ್ಷೆ ಕೋಳೂರು ಸುಮಂಗಳಮ್ಮ, ನಿದರ್ೇಶಕರಾದ ಗೋವಿಂದರಾಜು, ನರಸಿಂಹರಾಜು, ಅಬ್ದುಲ್ ಬಷೀರ್, ಎಚ್.ಶಾಂತನಗೌಡ, ವಿ.ಎಸ್.ಬಸವರಾಜ, ಬಿ.ಮಾರೆಣ್ಣ  ಸೇರಿದಂತೆ ಹಲವರು ಇದ್ದರು. ಮಾಜಿ ಅಧ್ಯಕ್ಷೆ ಕಮಲಾ ಮರಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಜನತಾ ಬಜಾರ್ ಸಿಬ್ಬಂದಿ ನಾಗರಾಜ ಸ್ವಾಗತಿಸಿದರು.