ಬಳ್ಳಾರಿ 22: ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಇಂಗ್ಲಿಷ್ ಭಾಷೆಯಲ್ಲಿ ಸರಳವಾಗಿ ಮಾತನಾಡುವುದನ್ನು ರೂಢಿ ಮಾಡಿಕೊಳ್ಳಬೇಕು ಅಂದಾಗ ವಿದ್ಯಾರ್ಥಿಗಳು ಸುಲಲಿತವಾಗಿ ಇಂಗ್ಲಿಷ್ ಭಾಷೆ ಅಭ್ಯಾಸ ಮಾಡಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಪ್ಪ ಹೇಳಿದರು.
ನಗರದ ಅಲ್ಲಂ ಕರಿಬಸಪ್ಪ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಇಂಗ್ಲಿಷ್ ಶಿಕ್ಷಕರಿಗೆ ವಿವಿ ಸಂಘದಿಂದ ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇನ್ನೇನು ಎಸ್ ಎಸ್ ಎಲ್ ಸಿ ಪರೀಕ್ಷೆ ಹತ್ತಿರ ಬರಲಿದೆ.ಆದರೆ, ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ಪರೀಕ್ಷೆ ಪಾಸ್ ಮಾಡಲು ವಿದ್ಯಾರ್ಥಿಗಳು ಕಷ್ಟ ಪಡುತ್ತಿದ್ದಾರೆ.ಈ ಸಮಸ್ಯೆ ಹೊಗಲಾಡಿಸಲು ಶಿಕ್ಷಕರು ಶ್ರಮಿಸಬೇಕು. ಇಂಗ್ಲಿಷ್ ಭಾಷೆಯಲ್ಲಿ ಪ್ರಾವಿಣ್ಯತೆ ಸಾಧಿಸಲಿ ಎಂದು ಶಿಕ್ಷಕರಿಗೆ ಸಾಕಷ್ಟು ತರಬೇತಿ ನೀಡಲಾಗುತ್ತಿದೆ.ತರಬೇತಿಯ ಸದುಪಯೋಗ ಪಡೆದುಕೊಂಡು
ವಿದ್ಯಾಥರ್ಿಗಳಲ್ಲಿ ಶಬ್ಧ ಸಂಗ್ರಹ ಬೆಳೆಸಬೇಕು. ಕೈ ಬರವಣಿಗೆ ಶುದ್ಧಿ ಕರಿಸಬೇಕು, ಸತತವಾಗಿ ಓದಿಸುವ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ವಿದ್ಯಾರ್ಥಿಗಳು ಪ್ರೌಡಿಮೆ ಸಾಧಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘದ ಶೈಕ್ಷಣಿಕ ಸಲಹೆಗಾರ ಡಾ.ಅರವಿಂದ ಪಾಟೀಲ್ ಮಾತನಾಡಿ, ಇಂಗ್ಲೀಷ್ ಭಾಷೆ ಕಲಿಯುವಿಕೆ ಕಬ್ಬಿಣದ ಕಡಲೆಯಲ್ಲ. ಶಿಕ್ಷಕರು ಸರ್ಮಪಕ ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರೇ ಸುಲಲಿತವಾಗಿ ಇಂಗ್ಲಿಷ್ ಭಾಷೆಯನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ ಎಂದರು.
ಬಿಇಒ ವೆಂಕಟೇಶ ರಾಮಚಂದ್ರಪ್ಪ, ಟೆಕ್ಸ್ ಬುಕ್ ಕಮಿಟಿ ಚೇರಮೇನ್ ಪಿ.ಎನ್.ಶ್ರೀನಾಥ, ಸಂಪನ್ಮೂಲ ವ್ಯಕ್ತಿ ಯು.ಬಸವರಾಜ ಸೇರಿ ಇಂಗ್ಲಿಷ್ ಶಿಕ್ಷಕರು ಪಾಲ್ಗೊಂಡಿದ್ದರು.