ಲೋಕದರ್ಶನ ವರದಿ
ಬಳ್ಳಾರಿ 08: ರೈತರ ಪ್ರತಿಭಟನೆ ರ್ಯಾಲಿಯು ಬಳ್ಳಾರಿ ನಗರದ ಮಯೂರ ಹೋಟಲ್ ನಿಂದ ಪ್ರಾರಂಭವಾಗಿ ರಾಯಲ್ ವೃತ್ತದಲ್ಲಿ ಪ್ರತಿಭಟನೆ ಸಭೆ ನಡೆಸಿ ನಂತರ ಮೋತಿ ವೃತ್ತದ ವರೆಗೂ ರ್ಯಾಲಿ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಖಏಖ ಜಿಲ್ಲಾಕಾರ್ಯದರ್ಶಿ ಈ.ಹನುಮಪ್ಪ ಆಳುವ ಸಕರ್ಾರಗಳ ನಿರಂತರ ರೈತ ವಿರೋಧಿ ನೀತಿಗಳಿಂದ ಉಂಟಾಗಿರುವ ಕೃಷಿ ಬಿಕ್ಕಟ್ಟಿನ ಫಲವಾಗಿ ನಡೆಯುತ್ತಿರುವ ಅಸಂಖ್ಯಾತ ರೈತರು ಮತ್ತು ಕೃಷಿ ಕೂಲಿಕಾರರ ಆತ್ಮಹತ್ಯೆಗಳನ್ನು ತಡೆಯಲು ಕೂಡಲೇ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ವಯ ಪಾರ್ಲಿಮೆಂಟ್ನಲ್ಲಿ ಮಂಡಿಸಲಾಗಿರುವ "ಕನಿಷ್ಟ-ಬೆಂಬಲ ಬೆಲೆ ಖಾತರಿ ಕಾಯ್ದೆ",ಎಲ್ಲಾ ರೈತರು ಮತ್ತು ಕೃಷಿ ಕೂಲಿಕಾರರನ್ನು ಸಾಲದ ಭಾದೆಯಿಂದ ಸಂಪೂರ್ಣವಾಗಿ ಮುಕ್ತಿಗೊಳಿಸುವ ಉದ್ದೇಶದ ಪಾರ್ಲಿಮೆಂಟ್ನ ಮುಂದಿರುವ "ಋಣ ಮುಕ್ತ ಕಾಯ್ದೆ" ಗಳನ್ನು ಜಾರಿ ಮಾಡಬೇಕೆಂದು, ಸುಮಾರು ತಿಂಗಳುಗಳಿಂದ ಪ್ರವಾಹದಿಂದ ಬೀದಿ ಪಾಲಾಗಿರುವ ಅಸಂಖ್ಯಾತ ರೈತರು, ಕೃಷಿ ಕೂಲಿಕಾರರು, ಇತರೆ ಕಸುಬುದಾರರಿಗೆ ಕೂಡಲೇ ನ್ಯಾಯಯುತ ಪರಿಹಾರ ನೀಡಬೇಕೆಂದು, ಲಕ್ಷಾಂತರ ಬಡರೈತರು, ಕೃಷಿಕೂಲಿಕಾರರು 30-40 ವರ್ಷಗಳಿಂದ ಬಗರ್ಹುಕ್ಕುಂ ಸಾಗುವಳಿ ಮಾಡುತ್ತಿರುವ ಭೂಮಿಗಳ ಸಕ್ರಮಕ್ಕಾಗಿ, ಕೇಂದ್ರದ ಭೂಸ್ವಾಧೀನ ಕಾಯ್ದೆಯ ಅಶಯಕ್ಕೆ ವಿರುದ್ಧವಾಗಿ ಭೂಸ್ವಾಧೀನ ಕಾಯ್ದೆಗೆ ಹಿಂದಿನ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಕೈಬಿಡಬೇಕೆಂದು, ರಾಜ್ಯದ ರೈತರು ಮತ್ತು ಕೂಲಿಕಾರರ ಸಾಲ ಮನ್ನಾಕ್ಕೆ ಸಂಬಂಧಿಸಿ ಕೇರಳ ಮಾದರಿಯಲ್ಲಿ ಶಾಶ್ವತ "ಋಣ ಮುಕ್ತ ಆಯೋಗ" ವನ್ನು ರಚಿಸಬೇಕೆಂದು, ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಇತ್ಯಾದಿ ಮುಖ್ಯ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಮುಖ್ಯವಾಗಿ ಬೆಂಬಲ ಬೆಲೆ, ಸಾಲಮನ್ನಾ, ಬಗರ್ಹುಕ್ಕುಂ ಸಾಗುವಳಿಯ ಸಕ್ರಮಕ್ಕಾಗಿ, ಪ್ರವಾಹ ಪೀಡಿತರ ಪರಿಹಾರ, ರೈತ ವಿರೋಧಿ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ, ಉದ್ಯೋಗ ಖಾತರಿಯ ಕೂಲಿಯ ಹೆಚ್ಚಳ, ಕೆಲಸದ ದಿನಗಳನ್ನು 200 ಕ್ಕೆ ಏರಿಸಬೇಕು.
"ಋಣ ಮುಕ್ತ ಅಯೋಗ"ದ ರಚನೆಯಂತಹ ಬೇಡಿಕೆಗಳಲ್ಲದೆ 60 ವರ್ಷ ದಾಟಿದ ಪ್ರತಿಯೊಬ್ಬ ರೈತರು ಮತ್ತು ಕೃಷಿಕೂಲಿಕಾರರಿಗೆ ತಿಂಗಳಿಗೆ 10,000 ರೂ. ಪಿಂಚಣಿ, ಸಾರ್ವತ್ರಿಕ ರೇಷನ್ ವ್ಯವಸ್ಥೆ, ಕಬ್ಬು ಕಟಾವಾದ 14 ದಿನಗಳಲ್ಲಿ ಹಣ ಪಾವತಿಸದೆ ಬಾಕಿ ಉಳಿಸಿಕೊಂಡರೆ ಶೇ. 15 ರ ಬಡ್ಡಿ ನೀಡಿಕೆ, ದರವನ್ನು ಇಳುವರಿ ಶೇ.9.5 ಆಧಾರದಲ್ಲಿ ನಿಗದಿ ಮಾಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರು, ತಾವು ಬೆಳೆಯುವ ತರಕಾರಿಗಳು, ಹಾಲು ಇನ್ನಿತರೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಅದೇ ರೀತಿಯಲ್ಲಿ ನಗರ/ಪಟಣ್ಣಗಳಿಂದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದೆಂದು ಎಐಕೆಎಸ್ಸಿಸಿ ವಿನಂತಿಸುತ್ತದೆ.
ಹೋರಾಟಕ್ಕೆ ನಗರ ವಾಸಿಗಳ ಸೌಹರ್ಾದ ಬೆಂಬಲವನ್ನು ಕೋರಿ, ಅಂದು ನಗರಗಳ ಶ್ರಮಜೀವಿಗಳಿಗೆ ಉಚಿತವಾಗಿ ಹಾಲು, ತರಕಾರಿ ಇನ್ನಿತರೆ ಕೃಷಿ ಉತ್ಪನ್ನಗಳನ್ನು ನೀಡುವ ಸಂಕೇತಿಕ ಕಾರ್ಯಕ್ರಮಗಳನ್ನು ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಗುಲ್ಬರ್ಗಾ ಇತ್ಯಾದಿ ನಗರಗಳಲ್ಲಿ ಸಂಘಟಿಸಲು ಸಹ ಎಐಕೆಎಸ್ಸಿಸಿ ನಿರ್ಧರಿಸಿದೆ. ಈ ಪ್ರತಿಭಟನೆಯ ಅದ್ಯಕ್ಷತೆ ವಹಿಸಿದ ಜಿಲ್ಲಾ ಮುಖಂಡರಾದ ಗೋವಿಂದ್ ರವರು ಮಾತನಾಡುತ್ತಾ, ಕಳೆದ ಲೋಕಸಭಾ ಚುನಾವಣೆಗಳ ಮುಂಚೆ ಕೃಷಿ ಉತ್ಪನ್ನಗಳಿಗೆ "ಕನಿಷ್ಟ ಬೆಂಬಲ ಬೆಲೆ ಖಾತರಿ ಕಾಯ್ದೆ" ಹಾಗು "ಋಣ ಮುಕ್ತ ಕಾಯ್ದೆ" ಗಳನ್ನು ಪಾರ್ಲಿಮೆಂಟ್ನಲ್ಲಿ ಚಚರ್ಿಸಿ, ಜಾರಿ ಮಾಡಲು ಕೇಂದ್ರ ಸಕರ್ಾರಕ್ಕೆ ಸೂಚನೆ ನೀಡುವುದಾಗಿ ಎಐಕೆಎಸ್ಸಿಸಿಯ ಅಖಿಲ ಭಾರತ ನಾಯಕತ್ವಕ್ಕೆ `ಮಾನ್ಯ ರಾಷ್ಟ್ರಪತಿ' ಗಳು ನೀಡಿದ್ದ ಭರವಸೆಯನ್ನು ನೆನಪಿಸುತ್ತಾ ಮೇಲಿನ ಎರಡು ಅಂಶಗಳ ಜೊತೆಗೆ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಮಾನ್ಯ ರಾಷ್ಟ್ರಪತಿಗಳು, ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಖಏಖ ಪದಾಧಿಕಾರಿಗಳಾದ ನಾಗರತ್ನ, ಬಸಣ್ಣ, ಪಂಪಾಪತಿ, ಹನುಮಂತಪ್ಪ, ಶಿವಶಂಕರ್, ದರೂರು ಪುರುಷೋತ್ತಮಗೌಡ, ಸಂಗನಕಲ್ಲು ಕೃಷ್ಣ್ಪ ಸೇರಿದಂತೆ ಹಳ್ಳಿಗಳಿಂದ ಬಂದ ರೈತ ಮುಖಂಡರುಗಳು ಭಾಗವಹಿಸಿದ್ದರು.