ಬಳ್ಳಾರಿ ೧೦: ಹಂಪಿಉತ್ಸವ 2019-20 ಈ ಬಾರಿ ಲಲಿತ ಕಲಾ ಪ್ರರ್ಶನಗಳ ಜೊತೆಗೆ, ವಿವಿಧ ಸ್ಪಧರ್ೆಗಳ ಜೊತೆಗೆ ರಂಗೋಲಿ ಪ್ರರ್ಶನವನ್ನು ಆಯೋಜಿಸಿದ್ದು ನಾಳೆ ವಿಜಯನಗರ ಕ್ಷೇತ್ರದ ಶಾಸಕರಿಂದ ಉದ್ಘಾಟನೆಗೊಳ್ಳಲಿದೆ.
ಕಮಲಾಪುರ ಪಟ್ಟಣದ ಮಯೂರ ಭುವನೇಶ್ವರಿ ಹೋಟಲ್ ಪಕ್ಕದ ಬಾಲಕಿಯರ ರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ರಂಗೋಲಿ ಕಲಾಪ್ರರ್ಶನದ ಸಿದ್ಧತೆಯು ಇಂದಿಗೆ ಕೊನೆಗೊಂಡಿದ್ದು ರಂಗೋಲಿ ಮತ್ತು ಬಣ್ಣಗಳ ಮೂಲಕ ಪೇಜಾವರ ಶ್ರೀಗಳು, ಸಿದ್ಧಗಂಗಾ ಶ್ರೀಗಳು, ಡಾ.ರಾಜ್ ಕುಮಾರ್, ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಂಪಿಯ ಸ್ಮಾರಕಗಳು ಸೇರಿದಂತೆ ವೈವಿಧ್ಯಮಯವಾದ ಕೃತಿಗಳು ರಂಗೋಲಿ ಮತ್ತು ಬಣ್ಣಗಳ ಮೂಲಕ ಕಲಾವಿದರಿಂದ ಚಿತ್ರಜೀವಂತಿಕೆಯನ್ನು ಪಡೆದುಕೊಂಡಿದೆ. ಜ.10 &11ರಂದು ರಂಗೋಲಿ ಮತ್ತು ಮೆಹಂದಿ ಸ್ಪಧರ್ೆಯನ್ನು ಆಯೋಜಿಸಲಾಗಿದ್ದು,ಒಟ್ಟು 35 ಸ್ಪರ್ಧಾಳುಗಳು ಭಾಗವಹಿಸಿವೆ ಎಂದು ಜಿಲ್ಲಾ ಪರಿಶಿಷ್ಟ ರ್ಗಗಳ ಕಲ್ಯಾಣಾಧಿಕಾರಿ ನೇತೃತ್ವ ವಹಿಸಿಕೊಂಡಿರುವ ಶುಭಾ ತಿಳಿಸಿದ್ದಾರೆ.