ಲೋಕದರ್ಶನ ವರದಿ
ಬಳ್ಳಾರಿ 29: ಸುತ್ತಮುತ್ತಲಿನ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಎಲ್ಲಾ ಬಗೆಯ ಪರಿಸರ ಮಾಲಿನ್ಯ, ಸಂಚಾರ ದಟ್ಟಣೆ ಹಾಗೂ ಇನ್ನಿತರ ಹತ್ತಾರು ಗಂಭೀರ ಸ್ವರೂಪದ ಸಮಸ್ಯೆಗಳಿಂದ ನಿರಂತರವಾಗಿ ಬಳಲುತ್ತಿರುವ ಸುಲ್ತಾನಪುರ ಗ್ರಾಮವನ್ನು ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಗ್ರಾಮದ ಜಂಬಯ್ಯ ಮತ್ತಿತರರು ಮಾಧ್ಯಮದ ತಮ್ಮ ಅಳಲನ್ನು ತೋಡಿಕೊಂಡಿದ್ದು, ಜನರನ್ನು ಗ್ರಾಮಸ್ಥರ ಉತ್ತಮ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಬೇಕೆಂದು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ತೋರಣಗಲ್ಲು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಸುಲ್ತಾನಪುರ(ಯರಬನಹಳ್ಳಿ) ಗ್ರಾಮದ ಸುತ್ತ-ಮುತ್ತಲಿನ ಕಾರ್ಖಾನೆಗಳಾದ ಮಿನೆರಾ ಸ್ಟೀಲ್, ಜೆಎಸ್ಡಬ್ಲ್ಯು ಯೋಜಿತ ಸ್ಪಾಂಜ್ ಐರನ್, ಪದ್ಮಾವತಿ ಫೆರರ್ಸ, ಜೆಎಸ್ ಡಬ್ಲ್ಯು ಸ್ಟೀಲ್, ಭುವಲ್ಕಾ ಪೈಪ್ಸ್, ಜೆಎಸ್ ಡಬ್ಲ್ಯು ಡಂಪ್ ಯಾರ್ಡ, ಎಪ್ಸಲಿನ್ ಕಾರ್ಬನ್, ಜೆಎಸ್ ಡಬ್ಲ್ಯು ಪೇಂಟ್ಸ, ಜಿಂದಾಲ್ ಸಾ ಲಿಮಿಟೆಡ್ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಎಲ್ಲಾ ಬಗೆಯ ತೀವ್ರ ಪರಿಸರ ಮಾಲಿನ್ಯ, ಸಂಚಾರ ದಟ್ಟಣೆ, ಆರೋಗ್ಯ ಸಮಸ್ಯೆಗಳು ಹಾಗೂ ಇನ್ನಿತರ ಹತ್ತಾರು ಗಂಭೀರ ಸಮಸ್ಯೆಗಳಿಂದ ಜಬರು ಬಳಲುತ್ತಿದ್ದಾರೆ.
ವಿಶೇಷ ಕೈಗಾರಿಕಾ ವಲಯವಾಗಿ ಗುರುತಿಸಿಕೊಂಡಿರುವ ಸುಲ್ತಾನಪುರ ಗ್ರಾಮವನ್ನು 'ಗ್ರಾಮಸ್ಥರ ಉತ್ತಮ ಆರೋಗ್ಯ ಹಾಗೂ ಭವಿಷ್ಯದ ಹಿತ ದೃಷ್ಟಿಯಿಂದ" ಗ್ರಾಮಸ್ಥರ ಬೇಡಿಕೆಗಳಿಗೆ ಅನುಗುಣವಾಗಿ ಗ್ರಾಮವನ್ನು ಸ್ಥಳಾಂತರಿಸಬೇಕು ಎನ್ನುವುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದೆ.
ಈಗಾಗಲೇ ಕಳೆದ 2-3 ವರ್ಷಗಳಿಂದ ಗ್ರಾಮಪಂಚಾಯತಿ,ಸಂಡೂರು ತಾಲೂಕು ಆಡಳಿತ,ಬಳ್ಳಾರಿ ಜಿಲ್ಲಾ ಆಡಳಿತ,ಕೈಗಾರಿಕಾ ಇಲಾಖೆ ಮತ್ತು ಸಚಿವರು, ಶಾಸಕರು ಸಂಡೂರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದಶರ್ಿಗಳು, ಹಾಗೂ ಸಕರ್ಾರದ ಇನ್ನಿತರ ಸಂಬಂದಿಸಿದ ಹಲವಾರು ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಇಲ್ಲಿವರೆಗೂ ಯಾವುದೇ ಪ್ರಯೋಜನಗಳಾಗಿಲ್ಲ.
ಈ ಗ್ರಾಮ ಕಂದಾಯ ಗ್ರಾಮವಾಗಿದ್ದು, ಗ್ರಾಮದಲ್ಲಿ ಸುಮಾರು 150 ಕುಟುಂಬಗಳ 750ಕ್ಕೂ ಹೆಚ್ಚು ಜನ ಅಂದಾಜು 230 ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಗ್ರಾಮದ 140 ಏಕರೆಗೂ ಹೆಚ್ಚು ರೈತರ ಕೃಷಿ ಜಮೀನು ಇದ್ದು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಆದರೆ ಇದ್ಯಾವುದನ್ನು ಪರಿಶೀಲಿಸದೆ ಏಕಾ-ಏಕಿ ಕಾರ್ಖಾನೆಗಳಿಗೆ ಪರವಾನಗಿ ನೀಡಿರುವ ರಾಜ್ಯ ಸರ್ಕಾರ ನಮ್ಮೆಲ್ಲರ ಜೀವನವನ್ನು ಅಕ್ಷರಶಃ ನರಕ ಮಾಡಿದೆ ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಗಳು ಸರ್ಕಾರದ ನೀತಿ ನಿಯಮಗಳನ್ನು ಪಾಲಿಸದೆ ಬೇಕಾ-ಬಿಟ್ಟಿ ಕಾರ್ಯಾಚರಿಸುತ್ತಿವೆ. ಪರಿಣಾಮ ಉಂಟಾಗುತ್ತಿರುವ ಎಲ್ಲ ಬಗೆಯ ಮಾಲಿನ್ಯದಿಂದ ಗ್ರಾಮದ ಜನರು,ಜಾನುವಾರುಗಳು ಪದೇ ಪದೇ ಅನೇಕ ಗಂಭೀರ ಸ್ವರೂಪದ ಕಾರ್ಖಾನೆಗಳು ಎಲ್ಲ ಬಗೆಯ ಮಾಲಿನ್ಯ ಮಾಡುತ್ತಿರುವ ಬಗ್ಗೆ ಸಾಕಷ್ಟು ಸಾಕ್ಷಿ ಸಮೇತ ದೂರು ನೀಡಿದರೂ ಸಹ ಸರ್ಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾತ್ರ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.
ಈ ಕೂಡಲೇ ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಪ್ರಕರಣವನ್ನು ಅತ್ಯಂತ ಗಂಭೀರ ಪ್ರಕರಣವೆಂದು ಪರಿಗಣಿಸಬೇಕು. ವಿಶೇಷ ಕೈಗಾರಿಕಾವಲವವಾಗಿ ಗುರುತಿಸಿಕೊಂಡಿರುವ ಮತ್ತು ಸುತ್ತಮುತ್ತಲಿನ ಕಾರ್ಖಾನೆಗಳಿಂದ ಉಂಟಾಗುತ್ತಿರುವ ತೀವ್ರ ಮಾಲಿನ್ಯದಿಂದ ಬಳಲುತ್ತಿರುವ ಗ್ರಾಮಸ್ಥರನ್ನು ಶೀಘ್ರದಲ್ಲಿ ಅವರ ಬೇಡಿಕೆಗಳಿಗೆ ಅನುಗುಣವಾಗಿ ಗ್ರಾಮ ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಕರ್ಾರದ ನಿಯಮ ಉಲ್ಲಂಘಿಸಿ ಎಲ್ಲಾ ಬಗೆಯ ಮಾಲಿನ್ಯ ಉಂಟುಮಾಡುತ್ತಿರುವ ಎಲ್ಲಾ ಕಾರ್ಖಾನೆಗಳವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಆಮೂಲಕ ಇಲ್ಲಿನ ಒಟ್ಟಾರೆ ಪರಿಸರದ ಉಳಿವಿಗೆ ಸರ್ಕಾರ ಶ್ರಮಿಸಬೇಕು ಎಂದು ಒತ್ತಾಯಿಸಿದ್ದಾರೆ.