ಬಳ್ಳಾರಿ: ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಿ: ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾತ್

ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ


ಲೋಕದರ್ಶನ ವರದಿ

ಬಳ್ಳಾರಿ 30: ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾತ್ ಹೇಳಿದರು. 

ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿಮರ್ೂಲನಾ ಸಂಘ, ರೂಪನಗುಡಿ ಗ್ರಾಪಂ, ಸಕರ್ಾರಿ ಆಸ್ಪತ್ರೆ ಕೇಂದ್ರ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಗುರುವಾರ ರೂಪನಗುಡಿ ಗ್ರಾಪಂನಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ರಾಷ್ಟ್ರಾದ್ಯಂತ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆ ದಿನದ ಅಂಗವಾಗಿ ಕುಷ್ಠರೋಗ ಮುಕ್ತ ದೇಶ ನನ್ನ ಕನಸು ಎಂಬ ಅವರ ಆಶಯದೊಂದಿಗೆ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನವನ್ನು ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರು ಕೈ ಜೋಡಿಸಿ ಕುಷ್ಠರೋಗ ನಿವಾರಿಸಿ ಎಂದು ಕರೆ ನೀಡಿದರು. 

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಟಿ ರಾಜಶೇಖರ ರೆಡ್ಡಿ ಅವರು ಮಾತನಾಡಿ, ರಾಷ್ಟ್ರದ 471000 ಗ್ರಾಮಗಳಲ್ಲಿ ಆಂದೋಲನ ನಡೆಯುತ್ತಿದೆ. ಹಲವು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ 10 ಜನ ಕುಷ್ಠರೋಗಿಗಳು ಪತ್ತೆಯಾಗುತ್ತಿದ್ದರು. ಪ್ರಸ್ತುತ ಇಪ್ಪತ್ತು ಸಾವಿರಕ್ಕೆ ಒಬ್ಬರಂತೆ ರೋಗಿಗಳು ಇದ್ದಾರೆ. ಜಿಲ್ಲೆಯಲ್ಲಿ ಕಳೆದ ವರ್ಷ 122 ಜನ ಕುಷ್ಠರೋಗಿಗಳು ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಷ್ಠರೋಗದಿಂದ ವಿಕಲಚೇತನ ಹೊಂದಿದ 3 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. 50 ಜನರಿಗೆ ರಾಜ್ಯ ಸಕರ್ಾರದ ವಸತಿ ಸೌಲಭ್ಯದಡಿಯಲ್ಲಿ ಮನೆಗಳು ಮಂಜೂರಾಗಿವೆ. 347 ಜನ ಕುಷ್ಠರೋಗಿಗಳಿಗೆ ಪಾದರಕ್ಷೆಗಳನ್ನು ಮತ್ತು 75 ಜನರಿಗೆ ಸ್ವಯಂ ರಕ್ಷಣಾ ಔಷಧಿ ಕಿಟ್ಟುಗಳನ್ನು ವಿತರಿಸಲಾಗಿದೆ. ಒಟ್ಟು 129 ರೋಗಿಗಳನ್ನು ಗುಣಪಡಿಸಲಾಗಿದೆ ಎಂದರು.

 ರೋಗದಲ್ಲಿ ಸಾಂಸಗರ್ಿಕ ಹಾಗೂ ಅಸಾಂಸಗರ್ಿಕ ಎಂಬುದಾಗಿ 2ವಿಧಗಳಿವೆ. ಒಟ್ಟು ರೋಗಿಗಳಲ್ಲಿ ಶೇ.3ರಷ್ಟಿರುವ ಸಾಂಸಗರ್ಿಕ ರೋಗಿಗಳಿಂದ ಈ ರೋಗ ಬಹಳ ನಿಧಾನವಾಗಿ ಹರಡುತ್ತದೆ. ಈ ರೋಗವು ವಂಶಪಾರಂಪರ್ಯವಲ್ಲ ಹಾಗೂ ಪಾಪ, ಶಾಪಗಳಿಂದ ಬರುವುದಿಲ್ಲ. ಮುಖ್ಯ ವಾಗಿ ಕುಷ್ಠರೋಗಿಯನ್ನು ನಾವು ಗೌರವಯುತವಾಗಿ ಕಾಣುವುದು ಅಗತ್ಯವಾಗಿದೆ ಎಂದು ಹೇಳಿದ ಅವರು ದೇಹದ ಯಾವುದೇ ಭಾಗದ ಮೇಲೆ ಸ್ಪರ್ಶ ಜ್ಞಾನವಿಲ್ಲದ ಬಿಳಿ ತಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕೈ-ಕಾಲುಗಳಲ್ಲಿ ಜೋಮು ಉಂಟಾಗುವುದು. ಮುಖ ಮತ್ತು ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು ಮತ್ತು ಎಣ್ಣೆ ಸವರಿರುವಂತೆ ಚರ್ಮ ಕಾಣಿಸುವುದು. ಮಚ್ಚೆಗಳನ್ನು ಗುಪ್ತವಾಗಿರಸದೇ ವೈದ್ಯರಿಗೆ ತೋರಿಸುವುದು. ರೋಗದ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದು. ಈ ರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸುವುದು ಬಹುವಿಧ ಔಷಧಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಚಿಕಿತ್ಸೆಯು ಸರಳ ಅವಧಿ ಕೇವಲ 6 ಅಥವಾ 12 ತಿಂಗಳು ಮಾತ್ರ ಮನೆಯಲ್ಲಿಯೇ ಚಿಕಿತ್ಸೆ ಪಡೆಬಹುದು. ಕುಷ್ಠರೋಗದ ಬಗ್ಗೆ ಸರಿಯಾದ ಮಾಹಿತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಂದ ಪಡೆದು ಜನ ಸಾಮಾನ್ಯರು ಕುಷ್ಠರೋಗ ಮುಕ್ತ ಸಮಾಜ ನಿಮರ್ಿಸಲು ಸಹಕರಿಸಬೇಕು ಎಂದರು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹೊನ್ನುರಸ್ವಾಮಿ, ಜಿಪಂ ಯೋಜನಾ ನಿರ್ದೇಶಕ ಜಾನಕಿ ರಾಮ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಸಪ್ಪ, ಸದಸ್ಯ ಗೋವಿಂದಪ್ಪ, ಮುಖಂಡರಾದ ಜಯಣ್ಣ, ಎನ್.ಸಿ.ಡಿ ವೈದ್ಯಾಧಿಕಾರಿ ಡಾ.ನಿಜಾಮುದ್ದಿನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ, ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣ್ ಬಾಬು, ಚೆನೈ ಡಿ.ಪಿ.ಎಂ.ಆರ್.ಸುಧಾಕರ್, ಪಿ.ಡಿ.ಒ ಪ್ರಕಾಶ್, ಮುಖ್ಯಗುರುಗಳಾದ ಶಿವಣ್ಣ, ಜಿಲ್ಲಾ ಪಂಚಾಯನ ಮಹೇಶ್, ಶಾಂತಮ್ಮ ಉಪ್ಪಾರ್ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳು, ನಾಗರಾಜ ಹೆಚ್.ಎಂ ಹಿ.ಆ.ಸ ಮತ್ತು ಸಿಬ್ಬಂದಿಯವರಾದ ಮಲ್ಲಿಕಾರ್ಜುನ್, ಹುಲುಗಪ್ಪ, ಮಾನಪ್ಪ, ವೀರರೆಡ್ಡಿ, ಮುತ್ತನಗೌಡ, ಪಂಪಾಪತಿ, ಖಾಸಿಂ ವಲಿ ಹಾಗೂ ಗ್ರಾಂ.ಪಂ ಸದಸ್ಯರು, ಗ್ರಾಮಸ್ಥರು, ಶಾಲಾ ಮಕ್ಕಳು, ತಾಯಂದಿರು, ಅಂಗನವಾಡಿ ಕಾರ್ಯಕತರ್ೆಯರು, ಆಶಾಕಾರ್ಯಕತರ್ೆಯರು ಹಾಜರಿದ್ದರು.