ಬಳ್ಳಾರಿ: ಕೀಲು-ಎಲುಬು ಸಂಘ: ರಾಜ್ಯ ಮಟ್ಟದ ಸಮಾವೇಶ ಜ.31ರಿಂದ

ಲೋಕದರ್ಶನ ವರದಿ

ಬಳ್ಳಾರಿ 30: ಕರ್ನಾಟಕ ಕೀಲು ಮತ್ತು ಎಲುಬು ಸಂಘದ ವತಿಯಿಂದ 44ನೇ ವಾರ್ಷಿಕ ಸಮ್ಮೇಳನವನ್ನು ಜ.31ರಿಂದ ಫೆ.2ರವರೆಗೆ ಮೂರು ದಿನಗಳ ಕಾಲ ಬಳ್ಳಾರಿಯ ವಿಮ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಅಗತ್ಯ ಸಿದ್ಧತೆಗಳು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಅರಥೋಪಡಿಕ್ ಅಸೋಸಿಯೇಷನ ಮುಖ್ಯಸ್ಥರಾದ ಡಾ.ಅಶ್ವಿನಿಕುಮಾರ ಸಿಂಗ್ ತಿಳಿಸಿದರು. 

ನಗರದ ವಿಮ್ಸ್ನ ಬಿಸಿ.ರಾಯ್ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದರು. ಈ ಸಮ್ಮೇಳನವು 1992ರಲ್ಲಿ ಬಳ್ಳಾರಿಯಲ್ಲಿ ನಡೆದಿತ್ತು. ಅದಾದ ನಂತರ ಎರಡನೇ ಸಲ ಅಂದ್ರೇ 28ವರ್ಷಗಳ ನಂತರ ಬಳ್ಳಾರಿಯಲ್ಲಿ ನಡೆಸಲಾಗುತ್ತಿದೆ ಎಂದರು. 

ಸಮಾವೇಶದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧಡೆಯಿಂದ ಸುಮಾರು ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹತ್ತು ಅಂತರಾಷ್ಟ್ರೀಯ ಖ್ಯಾತಿ ಪಡೆದ ವೈದ್ಯರು ಅಲ್ಲದೇ ಮೂವತ್ತು ರಾಷ್ಟ್ರೀಯ ಖ್ಯಾತಿ ಪಡೆದ ವೈದ್ಯರು ಮತ್ತು 60 ಹಿರಿಯ ತಜ್ಞರು ವ್ಯಾಖ್ಯಾನ ಮಾಡಲಿದ್ದಾರೆ ಹಾಗೂ ಚಿನ್ನದ ಪದಕ ಪತ್ರಿಕೆಗಳು ಸೇರಿದಂತೆ ಮೂರು ದಿನಗಳಲ್ಲಿ ಸುಮಾರು 600ಕ್ಕೂ ಹೆಚ್ಚು ವೈಜ್ಞಾನಿಕ ಪತ್ರಿಕೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಅಲ್ಲದೆ ಕಿರಿಯ ವೈದ್ಯರಿಗೆ ರಸಪ್ರಶ್ನೆ ಸ್ಪಧರ್ೆಯನ್ನು ನಡೆಸಲಾಗುವುದು ಎಂದರು. ಈ ಸಮ್ಮೇಳನವು ಜ.31 ರಿಂದ ಫೆ.2ರ ವರೆಗೆ ವಿಮ್ಸ್ ಸಭಾಂಗಣದಲ್ಲಿ ಹಾಗೂ ಬಿ.ಸಿ.ರಾಯ್ ಉಪನ್ಯಾಸ ಕೊಠಡಿಯಲ್ಲಿ ಚರ್ಚೆ, ಉಪನ್ಯಾಸ,ಭಾಷಣ ಕಾರ್ಯಕ್ರಮಗಳು ನಡೆಸಲಾಗುವುದು ಜೊತೆಗೆ ಮೂರು ದಿನಗಳ ಕಾರ್ಯಕ್ರಮದಲ್ಲಿ  ನೇರ ಪ್ರದರ್ಶನ ಕಾರ್ಯಕ್ರಮ  ಸರ್ಜರಿಯನ್ನು ಆರಾಧನಾ ಆಸ್ಪತ್ರೆಯಲ್ಲಿ ನಡೆಸಲಾಗುವುದು ಕಾರ್ಯಕ್ರಮದ ಉದ್ಘಾಟನೆಯನ್ನು ವಿಮ್ಸ್ ಸಂಭಾಗಣದಲ್ಲಿ ಸಂಜೆ 5ಕ್ಕೆ ನಡೆಸಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಸಂಘಟನಾ ಸಹಾಯಕ ಚೆರಮನ್ ಡಾ.ಕೆ.ವಿ.ಪಿ. ರಾವ್, ಡಾ.ಸತೀಶ್ ಕಂಡುಲಾ, ಡಾ.ಶ್ರೀನಿವಾಸ, ಡಾ.ಶಶಿಧರ ರೆಡ್ಡಿ, ಡಾ.ವೆಂಕಟೇಶ ಉಪಸ್ಥಿತರಿದ್ದರು.