ಲೋಕದರ್ಶನ ವರದಿ
ಬಳ್ಳಾರಿ 10: ದಸರಾ ಮಹೋತ್ಸವದ ನಿಮಿತ್ತ ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮುಖಂಡ ಅಂದಾಜು 500 ಹೆಲ್ಮೆಟ್ಗಳನ್ನು ವಿತರಿಸಿ, ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ, ರಸ್ತೆ ಸುರಕ್ಷ ಅಭಿಯಾನ ಮಾಡಿದರು.
ಟ್ರಸ್ಟ್ನ ಅಧ್ಯಕ್ಷ ಎಂ.ಪ್ರಭಂಜನ್ ಕುಮಾರ್ ಮಾತನಾಡಿ, ದಸರಾ ಹಾಗೂ ನವರಾತ್ರಿಯಲ್ಲಿ ನಮ್ಮ ಕುಟುಂಬಕ್ಕೆ ಹಾಗೂ ಎಲ್ಲಾರಿಗೂ ಒಳ್ಳೆದಾಗಲಿ ಎಂದು 9 ದಿನಗಳ ಕಾಲ ನಾನಾ ರೀತಿಯಲ್ಲಿ ಪೂಜೆ, ಹೋಮ-ಹವನಗಳನ್ನು ಮಾಡುತ್ತೆವೆ. ಆದರೆ ರಸ್ತೆಯಲ್ಲಿ ಬೈಕ್ಗಳಲ್ಲಿ ಸಂಚಾರ ನಡೆಸುವಾಗ ಯಾವುದೇ ರೀತಿಯಲ್ಲಿ ಭದ್ರತೆಯನ್ನು ಮಾಡಿಕೊಳ್ಳದೇ ಸಂಚಾರ ಮಾಡುತ್ತೆವೆ. ಹೆಲ್ಮೆಟ್ ಇಲ್ಲದೇ ರಸ್ತೆ ಅಪಘಾತದಲ್ಲಿ ಸಾವು ನೋವು ಆಗ ಬಾರದು ಎಂದರೆ ಹೆಲ್ಮಟ್ ಬಳಿಸಬೇಕು. ಇಲ್ಲವೆಂದರೆ ನಮ್ಮ ಸಾವು ನಾವೆ ತಂದುಕೊಂಡತೆ. ನಮ್ಮ ರಕ್ಷಣೆ ಹಾಗೂ ಇತರೆ ಉಪಯುಕ್ತ ಆಯುದ್ಧಗಳನ್ನು ಆಯುದ್ಧ ಪುಜೆಯಲ್ಲಿ ಪುಜೆ ಮಾಡುತ್ತೆವೆ. ಆದ್ದರಿಂದ ಸಂಚಾರದಲ್ಲಿ ನಮ್ಮ ಪ್ರಾಣ ರಕ್ಷಣೆ ಮಾಡುವ ಹೆಲ್ಮೆಟ್ ಕೂಡ ಆಯುದ್ಧ ಇದ್ದಂತೆ. ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿಕೊಳ್ಳಬೇಕು ಎಂದರು.
ನಗರದ, ಹೊಸಬಸ್ ನಿಲ್ದಾಣ, ಅನಂತಪುರ ರಸ್ತೆ ಸೇರಿ ನಾನಾ ಕಡೆ ಅಂದಾಜು500 ಹೆಲ್ಮೆಟ್ಗಳನ್ನು ಸಾರ್ವಜನಿಕರಿಗೆ ಹಾಗೂ ತನ್ನ ಸ್ನೇಹಿತರಿಗೆ ವಿತರಿಸಿದರು. ಟ್ರಸ್ಟ್ನ ಎಂ.ಜಯಸಿಂಹ, ಕುಮಾರ್ ಮತ್ತಿತರರಿದ್ದರು.