ಬಳ್ಳಾರಿ: ಆರು ವರ್ಷದ ಮಗುವಿನ ಅತ್ಯಾಚಾರ ಕೊಲೆ

ಬಳ್ಳಾರಿ 11: ಸಂಡೂರು ತಾಲ್ಲೂಕು ವಡ್ಡು ಗ್ರಾಮದಲ್ಲಿ ಆಟ ಆಡುವ 6 ವರ್ಷದ ರೂಪ ಎನ್ನುವ ಹೆಣ್ಣು ಮಗುವಿಗೆ ಚಾಕಲೇಟ್ ಆಸೆ ತೋರಿಸಿ ಕರೆದೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ. ಇದೊಂದು ಪೈಶಾಶಿಕ ಕೃತ್ಯವಾಗಿದ್ದು, ಇಂತಹ ಕೃತ್ಯವನ್ನು ಜನವಾದಿ ಮಹಿಳಾ ಸಂಘಟನೆ ಬಲವಾಗಿ ಖಂಡಿಸುತ್ತದೆ. ರೂಪ ಎನ್ನುವ ಹೆಣ್ಣು ಮಗು ಒಂದನೇ ತರಗತಿಯಲ್ಲಿ ಓದುತ್ತಿದ್ದಳು. ಎರಡನೇ ಮಗು ಆಗಿದ್ದಳು. ಗಂಗಾವತಿ ತಾಲ್ಲೂಕು ಹೊಸಗೇರಿ ಗ್ರಾಮದ ರೇವಣ್ಣ ಮತ್ತು ಆತನ ಹೆಂಡತಿ ತಿಪ್ಪಮ್ಮ ಇವರು ಕಳೆದ 12 ವರ್ಷಗಳಿಂದ ವಡ್ಡು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಬಡ ಕುಟುಂಬ ಇದಾಗಿದೆ. 

ಗೆಳತಿಯರ ಜೊತೆ ಆಟವಾಡಲು ಹೋಗಿದ್ದಳು. ಮನೆಗೆ ಬಾರದ ರೂಪಳನ್ನು ಹುಡುಕಲು ಹೋದಾಗ, ಅವಳು ಕಾಣಿಸಲಿಲ್ಲದ ಕಾರಣ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದರು. ಗೋಣಿ ಚೀಲದಲ್ಲಿ ಶವವಾಗಿ ಕಂಡು ಬಂದಿದೆ. ಇದೊಂದು ಹೇಯ ಕೃತ್ಯವಾಗಿದೆ. ಸಮಾಜಘಾತುಕ ವ್ಯಕ್ತಿಗಳು ರೂಪ ಎನ್ನುವ ಆರು ವರ್ಷದ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಗೋಣಿ ಚೀಲದಲ್ಲಿ ಬಿಸಾಕಿರುವುದು ಕಂಡುಬಂದಿದೆ. ಸೂಕ್ತ ತನಿಖೆ ನಡೆಸಿ ಇಂತಹ ಕೃತ್ಯ ಮಾಡುವ ನೀಚ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಲು ಜನವಾದಿ ಮಹಿಳಾ ಸಂಘಟನೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಕೆ.ಬಾಬಾ ಅವರಿಗೆ ಮನವಿ ಪತ್ರ ಸಲ್ಲಿಸಿ ಅಪರಾಧಿಕಾರಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.