ಲೋಕದರ್ಶನ ವರದಿ
ಬಳ್ಳಾರಿ 27: ಕಂಪ್ಲಿಯ ಲಕ್ಷ್ಮೀ ಚಿತ್ರಮಂದಿರವನ್ನು ನವೀಕರಿಸಿ ಜನತಾ ಚಲನಚಿತ್ರಮಂದಿರ ಯೋಜನೆ ಅಡಿ ನವೀಕರಣ ಚಲನಚಿತ್ರಮಂದಿರಕ್ಕೆ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದ ಹಿನ್ನೆಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಶುಕ್ರವಾರ ಕಂಪ್ಲಿಯ ಲಕ್ಷ್ಮೀ ಚಿತ್ರಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರಮಂದಿರದಲ್ಲಿರುವ ಶೌಚಾಲಯ, ಬೆಳಕು, ಸ್ವಚ್ಛತೆ, ಆಸನ ವ್ಯವಸ್ಥೆ ಸೇರಿದಂತೆ ಇನ್ನೀತರ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಚಲನಚಿತ್ರ ಮಂದಿರಕ್ಕೆ ಸಂಬಂಧಿಸಿದ ಮಾಲೀಕತ್ವದ ಕರಾರುಪತ್ರಗಳು, ಜಿಲ್ಲಾಧಿಕಾರಿಗಳು,ವಾಣಿಜ್ಯ ತೆರಿಗೆ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ವಿದ್ಯುತ್ ಪರಿವೀಕ್ಷಣಾಲಯ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನೀಡಿರುವ ನಿರಪೇಕ್ಷಣಾ ಪತ್ರ,ನಿರ್ಮಾಣದ ಅನುಮೋದಿತ ವೆಚ್ಚದ ಪಟ್ಟಿ ಸೇರಿದಂತೆ ಇನ್ನೀತರ ದಾಖಲೆಗಳನ್ನು ಪರಿಶೀಲಿಸಿದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಚಲನಚಿತ್ರಮಂದಿರ ಮಾಲೀಕರಿಗೆ ಕೆಲ ಅಗತ್ಯ ಸಲಹೆ ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು.
ಸರಕಾರದ ಪ್ರೋತ್ಸಾಹಧನ ಪಡೆದ ನಂತರ ಚಿತ್ರಮಂದಿರ ಮಾಲೀಕರು ಕನ್ನಡ ಚಲನಚಿತ್ರ ಪ್ರದರ್ಶನ ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಬಳಸತಕ್ಕದ್ದಲ್ಲ ಎಂದರು.
ಚಿತ್ರಮಂದಿರದ ಮಾಲೀಕರಾದ ಸುಭಾಷ ಸೇರಿದಂತೆ ಚಿತ್ರಮಂದಿರದ ಸಿಬ್ಬಂದಿ ಇದ್ದರು.