ಲೋಕದರ್ಶನ ವರದಿ
ಬಳ್ಳಾರಿ 16: ಚರಂಡಿಗಳು ನಿರ್ಮಿಸಿದ್ದು, ಇದು ಅದನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷದಿಂದ ವ್ಯವಹರಿಸಿದ್ದು, ಕಾರಣ ಅದು ಸಾರ್ವಜನಿಕರ ಉಪಯೋಗಕ್ಕಾಗಿ ಸಿಗದೆ ಹಾಗೂ ಅದರಿಂದ ದುರ್ವಾಸನೆ ಉದ್ಭವಿಸುತ್ತಾ ಇದ್ದು ಅದು ಸುತ್ತ ಮುತ್ತಲಿನ ಜನರಿಗೆ ಆಡಚಣೆ ಉಂಟಾಗಿರುತ್ತದೆ ಹಾಗೂ ಸದರಿ ಚರಂಡಿಗಳಿಂದಾದ ದುವರ್ಾಸನೆ ಅಲ್ಲದೇ ಮತ್ತು ಸರಿಯಾಗಿ ಚರಂಡಿಗಳಲ್ಲಿ ಕೊಳಚೆ ವಸ್ತಗಳು ತೆಗೆದೆ ಇರುವುದರ ಕಾರಣದಿಂದಾಗಿ ಮತ್ತು ಚಿಕ್ಕ ಮಕ್ಕಳು ಸಹಿತ ಚರಂಡಿಗಳಲ್ಲಿ ವಿರ್ಸಜನೆ ಮಾಡುವುದರಿಂದ ಚರಂಡಿಗಳ ಪಕ್ಕದಲ್ಲಿ ಶಾಲೆಯ ಮಕ್ಕಳು ಹಾಗೂ ಅಂಗನವಾಡಿಯ ಶಿಶು ಮಕ್ಕಳು ಸಹಿತ ಆಟ ಆಡುವುದರಿಂದ ದುವರ್ಾಸನೆಗೆ ತೊಂದರೆಗೊಳಗಾಗುವಂತಾಗಿದೆ. ಮನೆಗಳ ಮುಂದೆ ಚರಂಡಿಗಳು ಇರುವುದರಿಂದ ಆ ಕಾಲೋನಿಯ ಜನರು ಹೋರಗೆ ಬರುವುದಕ್ಕೂ ಹಾಗೂ ತಿರುಗಾಡುವುದಕ್ಕೆ ಬಹಳ ತೊಂದರೆ ಯಾಗಿರುವುದರಿಂದ ಸಾರ್ವನಿಕರಿಗೆ ಅನಾರೋಗ್ಯ ಬರುವ ಸಾಧ್ಯತೆಗಳು ಇವೆ.
ಆದ್ದರಿಂದ ಅಪಾಯಕಾರಿ ರೋಗಗಳ ಹೊಡೆತಕ್ಕೆ ತತ್ತರಿಸುವ ಸಾರ್ವಜನಿಕರು ಭಯ ಬೀತರಾಗಿದ್ದಾರೆ. ಸಂಗನಕಲ್ಲು ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡಬೇಕೆಂದು ಗ್ರಾಮದ ಸಾರ್ವಜನಿಕರು ಆಗ್ರಹಿಸಿದ್ದೇವೆ.
ಯಾವುದೇ ಕಾರ್ಯ ತೆಗೆದು ಕೊಳ್ಳುವ ಮುಂಚಿತವಾಗಿ ಕನಿಷ್ಟ ಪಕ್ಷ ರೋಗಗಳಿಗೆ ಸೂಕ್ತ ರೀತಿಯ ಆರೋಗ್ಯ ಚಿಕಿತ್ಸೆ ನೀಡಿ ಮತ್ತು ಚರಂಡಿಗಳ ಪಕ್ಕದಲ್ಲಿ ಸುಭದ್ರತೆ ಮತ್ತು ಬ್ಲಿಚಿಂಗ್ ಪೌಡರ್ ಸಿಂಪಡಿಸಬೇಕು ಮತ್ತು ರಸ್ತೆಗಳಲ್ಲಿ ಮಣ್ಣು (ಗ್ರಾವೆಲ್) ಹಾಕಿ ಸರಿಪಡಿಸಿಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಒಂದು ವೇಳೆ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಸಂಗನಕಲ್ಲು ಗ್ರಾಮದ ಸಾರ್ವಜನಿಕರು ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಏಚ್ಚರಿಕೆಯನ್ನು ನೀಡಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗುತ್ತದೆ.