ಬಳ್ಳಾರಿ: ಕುವೆಂಪು ಜನ್ಮದಿನ: ಭಾವಗೀತೆಗಳ ಗಾಯನ

ಲೋಕದರ್ಶನ ವರದಿ

ಬಳ್ಳಾರಿ 29: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯ ಅಂಗವಾಗಿ ಸ್ಥಳೀಯ ಪೊಲೀಸ್ ಜಿಮ್ಖಾನದ ಆವರಣದಲ್ಲಿ ಸಿ.ಅಶ್ವತ್ಥ್ ಕಲಾ ಬಳಗ ಹಾಗೂ ಮಂಜುನಾಥ ಲಲಿತ ಕಲಾ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಕುವೆಂಪುರವರು ರಚಿಸಿದ ಪ್ರಸಿದ್ಧ ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಜಿಮ್ಖಾನ ಅಧ್ಯಕ್ಷರಾದ ಕೆ.ಜಿತೇಂದ್ರ ಅವರು ಮಾಲಾರ್ಪಣೆ ಮಾಡಿ ಮಾತನಾಡುತ್ತಾ, ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಸಾರಿ ಸರ್ವಜನತೆಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟವರು. ಅವರು ಜಾತಿ, ಮಥ, ಪಂಥವನ್ನು ಮೀರಿ ಬೆಳೆಯಲು ಕರೆ ನೀಡಿದ್ದರು. ಅವರು ರಚಿಸಿದ ಸಾಹಿತ್ಯ ಎಂದೆಂದಿಗೂ ಸ್ಥಿರಸ್ಥಾಯಿಯಾಗಿ ಉಳಿದಿದೆ. ಅವರ ಸಾಹಿತ್ಯವನ್ನು ಓದುವ ಮೂಲಕ ಉತ್ತಮ ನಾಗರೀಕರಾಗಿ ಜೀವನ ಸಾಗಿಸಬೇಕೆಂದು ತಿಳಿಸಿದರು. 

ಆರಂಭದಲ್ಲಿ ಮಹಂತೇಶ್ ಗೋವಿಂದವಾಡ ಇವರು ಪ್ರಾಥರ್ಿಸಿದರು. ಮಂಜುನಾಥ ಗೋವಿಂದವಾಡ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.