ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಆರ್ಥಿಕ ಸಾಕ್ಷರತಾ ಸಪ್ತಾಹ

ಲೋಕದರ್ಶನ ವರದಿ

ಬಳ್ಳಾರಿ 15: ಭಾರತೀಯ ರಿಸರ್ವ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ "ಆರ್ಥಿಕ ಸಾಕ್ಷರತಾ ಸಪ್ತಾಹ" ವನ್ನು  10.02.2020 ರಿಂದ 15.02.2020 ರ ವರೆಗೆ ಆಚರಿಸಲು ಆದೇಶ ಹೊರಡಿಸಿದೆ. ಈ ಸಂದರ್ಭದಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆ ಗಳಿಗೆ ಹಾಗೂ ಉದಯೋನ್ಮುಖ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲು ತಿಳಿಸಲಾಗಿದೆ.

ಈ ಹಿನ್ನಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ ಇವರ ಜಂಟಿ ಯೋಜನೆಯಲ್ಲಿ  "ಆಥರ್ಿಕ ಸಾಕ್ಷರತಾ ಸಪ್ತಾಹ" ವನ್ನು  ಬಳ್ಳಾರಿ ನಗರದ ಸಂಜಯಗಾಂಧಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಾಗಿತ್ತು.  ಈ ಕಾರ್ಯಕ್ರಮವನ್ನು   ಕರ್ನಾಟಕ  ಗ್ರಾಮೀಣ ಬ್ಯಾಂಕಿನ ಎಸ್ ಜೆ ಎಫ್ ರವೀಂದ್ರನಾಥ್ ಮಹಾ ಪ್ರಬಂಧಕರು ಉದ್ಘಾಟಿಸಿ ಮಾತನಾಡುತ್ತಾ, ಕೇಂದ್ರ ಸರ್ಕಾರ ಬ್ಯಾಂಕ್ ಗಳ ಮುಖಾಂತರ ಒದಗಿಸುತ್ತಿರುವ ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಉದ್ಯಮಶೀಲರಾಗಿ ತನ್ಮೂಲಕ ಆಥರ್ಿಕ ಅಬವೃದ್ಧಿಯಲ್ಲಿ ಬಾಗಸ್ವಾಮಿಗಳಾಗಿ ಅನೇಕ ಯುವಕರಿಗೆ ಉದ್ಯೋಗ ನೀಡುವ ಚೈತನ್ಯವನ್ನು ಪಡೆದುಕೊಳ್ಳಲು ಕರೆಕೊಟ್ಟರು. ಬಿ.ಎನ್. ಭಾಸ್ಕರ, ಪ್ರಾದೇಶಿಕ ಮಹಾ ಪ್ರಬಂಧಕರು,  ನಾಗರಾಜ, ಮುಖ್ಯಪ್ರಬಂಧಕರು, ಇವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಬ್ಯಾಂಕಿನಿಂದ ದೊರೆಯುವ ವಿವಿಧ ರೀತಿಯ ಯೋಜನೆಗಳ ಬಗ್ಗೆ  ವಿವರವಾಗಿ ತಿಳಿಯಪಡಿಸಿದರು.

ಈ ಕಾರ್ಯಕ್ರಮದಲ್ಲಿ 650 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ "ಆರ್ಥಿಕ ಸಾಕ್ಷರತಾ ಸಪ್ತಾಹ" ದ ಪ್ರಯೋಜನವನ್ನು ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಪ್ರಾಂಶುಪಾಲರಾದ ಗೌರಿಶಂಕರ್ ಹಾಗೂ ಬ್ಯಾಂಕಿನ ಅಧಿಕಾರಿಗಳಾದ  ಗೌರಿಪ್ರಸಾದ್,  ರಾಮಣ್ಣ ಟಿ, ಹಾಗೂ  ಎಂ.ಸತೀಶ್ ಕುಮಾರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.