ಲೋಕದರ್ಶನ ವರದಿ
ಬಳ್ಳಾರಿ 27: ಗೃಹರಕ್ಷಕದಳ ಕಚೇರಿ ಆವರಣ, ಮೋಕಾ ಗ್ರಾಮದಲ್ಲಿ "ಗೃಹರಕ್ಷಕದಳ ದಿನಾಚರಣೆ" ಅಂಗವಾಗಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಹಂಪಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರು, ಮೋಕಾ. ಇವರು ಉದ್ಘಾಟನೆ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು, ರ್ಯಾಲಿಯು ಕಸ್ತೂರಿಬಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಮೋಕಾ ಗೃಹರಕ್ಷಕದಳ ಕಚೇರಿಯಿಂದ ಪ್ರಾರಂಭವಾಗಿ ಮೋಕಾ ಬಸ್ಟಾಂಡ್ ವೃತ್ತ, ಹಳೆ ಮೋಕಾ, ಪೊಲೀಸ ಠಾಣೆ ವೃತ್ತ ಮೂಲಕ ರ್ಯಾಲಿಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾವಾಲಿ ನಾಗರಾಜ, ಮಾಜಿ ಸದಸ್ಯರು ಗ್ರಾಮ ಪಂಚಾಯಿತಿ, ಮೋಕಾ. ರಾಮಣ್ಣ, ಅಧ್ಯಕ್ಷರು, ಎಸ್.ಡಿ.ಎಂ.ಸಿ., ಮೋಕಾ. ಬಿ.ಕೆ.ಬಸವಲಿಂಗ, ಘಟಕಾಧಿಕಾರಿಗಳು, ಮೋಕಾ. ಜಿ.ಬಸವರಾಜು, ಘಟಕಾಧಿಕಾರಿಗಳು, ಜೆ.ಸುರೇಶ್, ಪಿ.ಎಲ್.ಸಿ, ಹೆಚ್.ನಾಗರಾಜ್, ಸಾರ್ಜೆಟ್, ಬಿ.ಮಾರಯ್ಯ, ಹೆಚ್.ಲಕ್ಷ್ಮಿನಾರಾಯಣ, ಬಿ.ಸುಧರ್ಶನ, ಘಟಕದ ಗೃಹರಕ್ಷಕರು ಭಾಗವಹಿಸಿದ್ದರು.