ಬಳ್ಳಾರಿ: ಹ್ಯಾಂಡ್ಸ್ ಆನ್ ಪ್ರಾಕ್ಟಿಸ್ ವಿತ್ 'ಪೈಥಾನ್ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 13: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ & ಇಂಜಿನೀಯರಿಂಗ್ ವಿಭಾಗವತಿಯಿಂದ "ಹ್ಯಾಂಡ್ಸ್ ಆನ್ ಪ್ರಾಕ್ಟಿಸ್ ವಿತ್ 'ಪೈಥಾನ್ ಎಂಬುವ ಎರಡು ವಾರದ  ತರಬೇತಿ ಶಿಬಿರದ ಕಾರ್ಯಕ್ರಮವನ್ನು ವಿದ್ಯಾಲಯದ ಉಪಕುಲಪತಿ ಡಾ.ಸಿದ್ದು.ಪಿ.ಅಲಗೂರು ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಲಗೂರು ಮಾತನಾಡುತ್ತಾ ಇಂದಿನ ಜಗತ್ತಿನಲ್ಲಿ ಡೇಟಾ ಮಾಹಿತಿ ನಾಲ್ಕು ರೂಪಗಳಲ್ಲಿ ಲಭ್ಯವಿದೆ 1.ಬೃಹತ್ ರೂಪ, 2.ಹೆಚ್ಚಿನ ವೇಗದ ರೂಪ 3.ವಿಭಿನ್ನ ವೈವಿಧ್ಯಮಯ ರೂಪ 4.ನಿಖರತೆ ರೂಪ 'ಪೈಥಾನ್ ಸಾಫ್ಟ್ವೇರ್ ಮೇಲಿನ  ನಾಲ್ಕು ರೂಪಗಳನ್ನು ಸಮರ್ಥವಾಗಿ ಪರಿಣಾಮಕಾರಿಯಾಗಿ ಸುಲಭವಾಗಿ ನಿರ್ವಹಿಸುವುದು ಆದ್ದರಿಂದಲೇ ಪೈಥಾನ್ ನಿಪುಣರ ಬೇಡಿಕೆ ಹೆಚ್ಚಿದೆ ಈಗ ಪೈಥಾನ್ ಕಲಿಯುವುದು ಕಡ್ಢಾಯವಾಗಿದೆ ಎಂದು ಶುಭಹಾರೈಸಿದರು. 

ಅಧ್ಯಕ್ಷರಾದ ಜೆ.ಎಸ್.ಬಸವರಾಜ್ ಅಧ್ಯಕ್ಷತೆ ಭಾಷಣದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಹೊಸ ತಂತ್ರಜ್ಞಾನವುಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಮನವರಿಕೆ ಮಾಡಿಸುವುದು ಹಾಗೂ ಹೊಸ ಆವಿಷ್ಕಾರಗಳು ಮಾಡಲು ಹಾದಿಯನ್ನು ಸುಗಮಗೊಳಿಸುವುದು ನಮ್ಮ ಶಿಕ್ಷಕರ ಪ್ರಮುಖ ಕರ್ತವ್ಯ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಸಿದ್ದು.ಪಿ.ಅಲಗೂರು, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಎಸ್.ಬಸವರಾಜ್, ಪ್ರಾಂಶುಪಾಲರು ಡಾ.ಕುಪ್ಪಗಲ್ ವಿರೇಶ್, ಉಪಪ್ರಾಂಶುಪಾಲರು ಹಾಗು ಕಂಪ್ಯೂಟರ್ ಸೈನ್ಸ್&ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಟಿ.ಹನುಮಂತ ರೆಡ್ಡಿ, ಉಪಪ್ರಾಂಶುಪಾಲರು, ಇಲೆಕ್ಟ್ರಾನಿಕ್ಸ್ ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸವಿತಾಸೋನೋಳಿ, ಡೀನ್ ಅಕಾಡಮಿಕ್ ಡಾ.ಹೆಚ್.ಗಿರೀಶ್,  ಹಾಗೂ ಐಕೂಏಸಿ ಮೆಂಬರ್, ಡಾ.ವೀರ.ಗಂಗಾಧರ ಸ್ವಾಮಿ, ಇನ್ನಿತರರು ಡಾ.ಕೆ.ಬಿ.ಶಿವಕುಮಾರ್, ಡಾ.ದೊಡ್ಡಬಸವನ ಗೌಡರು, ವಿನುತಾ ಪ್ರಶಾಂತ್ ನಿರೂಪಿಸಿ ವಂದನಾರ್ಪಣೆ ಮಾಡಿದರು.