ಬಳ್ಳಾರಿ: ಮರಳಿನಲ್ಲಿ ಅರಳಿದ ಹಂಪಿ ವೈಭವದ ಸ್ಮಾರಕಗಳು

ಲೋಕದರ್ಶನ ವರದಿ

ಬಳ್ಳಾರಿ 10: ವಿಜಯನಗರ ಸಾಮ್ರಾಜ್ಯದ ವೈಭವದ ಸ್ಮಾರಕಗಳು ಮರಳು ಶಿಲ್ಪಿಗಾರರ ಕೈಚಳಕದಿಂದ ಮರಳಿನಲ್ಲಿ ಅದ್ಭುತವಾಗಿ ಅರಳಿದ್ದು, ಈ ಬಾರಿಯ ಹಂಪಿ ಉತ್ಸವಕ್ಕೆವಿಶೇಷ ಮೆರಗು ನೀಡಿವೆ. ಜತೆಗೆ ಹಂಪಿ ಉತ್ಸವಕ್ಕೆ ಆಗಮಿಸಿದ ಜನರ ಕಣ್ಮನ ತಣಿಸಿವೆ. 

ಹಂಪಿಯ ಎದುರು ಬಸವಣ್ಣ ಹತ್ತಿರದ ಮಾತಂಗ ಪರ್ವತ ಮೈದಾನದ ಆವರಣದಲ್ಲಿ ವಿರೂಪಾಕ್ಷ ದೇವಾಲಯದ ದ್ವಾರಗೋಪುರ, ತಾಜ್ ಮಹಲ್, ಆನೆ ಸಾಲು ಮಂಟಪ, ಉಗ್ರ ನರಸಿಂಹ, ಕಮಲ ಮಹಲ್, ಗಜಶಾಲೆ, ಕಲ್ಲಿನ ರಥ, ನಟರಾಜ ಸ್ಮಾರಕಗಳನ್ನು ಮುಂಬೈ, ಒಡಿಸ್ಸಾ ಮರಳು ಶಿಲ್ಪಿಗಾರರು ಸ್ಯಾಂಡ್ ಆರ್ಟ  ಕಲೆಯನ್ನು ಅನಾವರಣಗೊಳಿಸಿದ್ದಾರೆ. 

ಮುಂಬೈ ಮತ್ತು ಒಡಿಸ್ಸಾದಿಂದ ಆಗಮಿಸಿರುವ ಖ್ಯಾತ ಮರಳು ಶಿಲ್ಪಿಗಳಾದ ನಾರಾಯಣ ಸಾಹು ಹಾೂ ಅವರ ತಂಡ ಒಂದು ವಾರದಿಂದ ಮಾತಂಗಪರ್ವತ ಮೈದಾನದಲ್ಲಿ ಅತ್ಯಂತ ತಾಳ್ಮೆಯುತವಾಗಿ ಮರಳಿನಲ್ಲಿ ಹಂಪಿ ವೈಭವದ ಸ್ಮಾರಕಗಳನ್ನು ಅರಳಿಸುವ ಕೆಲಸ ಮಾಡಿದ್ದಾರೆ. ಕಳೆದ ವರ್ಷದಿಂದ ಮರುಳು ಕಲೆ ಶಿಲ್ಪ ಅಯೋಜಿಸಲಾಗಿರುವ ಈ ಮರಳು ಶಿಲ್ಪ ಉತ್ಸವಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಒಡಿಸ್ಸಾದ ಸನ್ ಟೆಂಪಲ್ ಕೋನಾರ್ಕ  ಸೇರಿದಂತೆ ವಿವಿಧೆಡೆ ಮರಳಿನಲ್ಲಿ ಶಿಲ್ಪಗಳನ್ನು ಅರಳಿಸಿರುವ ಖ್ಯಾತ ಮರಳು ಶಿಲ್ಪಿ ನಾರಾಯಣ ಸಾಹು ನೇತೃತ್ವದ ತಂಡ ಹಾಗೂ ಗೋಕರ್ಣ, ಹಂಪಿಗೆ ಆಗಮಿಸಿ ವಿಜಯ ನಗರ ಸಾಮ್ರಾಜ್ಯದ ವೈಭವ ಸ್ಮಾರಕಗಳನ್ನು ಮರಳಿನಲ್ಲಿ ಅರಳಿಸುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ.