ಲೋಕದರ್ಶನ ವರದಿ
ಬಳ್ಳಾರಿ 29: ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮದಿನೋತ್ಸವ ದಿನದಂದು ಹಳೆ ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿರುವುದು ಸಂತಸ ಮೂಡಿಸಿದೆ ಎಂದು ನಿವೃತ್ತ ಶಿಕ್ಷಕ ಮುದ್ದೇಗೌಡ ಹೇಳಿದರು.
ನಗರದ ಗಾಂಧಿನಗರ ಬಡಾವಣೆಯ ನಕ್ಷತ್ರ ಹೋಟೆಲ್ ಸಭಾಂಗಣದಲ್ಲಿ ಶೆಟ್ರ ಗುರುಶಾಂತಪ್ಪ ಪದವಿ ಪೂರ್ವ ಕಾಲೇಜಿನ 1980 ರಿಂದ 1985ರವರೆಗಿನ ಹಳೆಯ ವಿದ್ಯಾರ್ಥಿಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಭಾನುವಾರ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಪ್ರತಿಯೋಬ್ಬರೂ ತಮ್ಮ ಕರ್ತವ್ಯದಲ್ಲಿ ಬ್ಯುಸಿಯಾಗಿರಲಿದ್ದಾರೆ. ಇದರ ಮಧ್ಯೆ ನಮ್ಮ ಹಳೆ ವಿದ್ಯಾರ್ಥಿಗಳು ಬಿಡುವು ಮಾಡಿಕೊಂಡು ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿ, ಕಲಿಸಿದ ಎಲ್ಲ ಗುರುಗಳು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಿರುವುದು ಸಂತಸ ಮೂಡಿಸಿದೆ. ನಮ್ಮ ಕೈಯಲ್ಲಿ ಕಲಿತ ಬಹುತೇಕ ಎಲ್ಲ ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲ ವಿದ್ಯಾರ್ಥಿಗಳು ಬೃಹತ್ ಉದ್ಯಮಿಗಳಾಗಿದ್ದಾರೆ.
ಗೌರವ ಸನ್ಮಾನ:
ನಿವೃತ್ತ ಹಳೆ ಶಿಕ್ಷಕರಾದ ತಿಪ್ಪೇಸ್ವಾಮೀ, ರವೀಂದ್ರನಾಥ್, ಶಾಂತವೀರಪ್ಪ, ಬಿ.ಜಿ.ಹುಬ್ಬಳ್ಳಿ, ಮುದ್ದೇಗೌಡ, ಸರ್ವೇಶ್ವರಿ, ಸುಲೋಚನಾ, ವಿಜಯಲಕ್ಷ್ಮೀ, ಗೊವಿಂದರಾಜಲು, ಕೆ.ದಾರುಕೇಶ್, ಉದ್ದಿ ವಿಶ್ವನಾಥ್, ಅಳವಂಡಿಮಠ, ಪಿ.ಬಸವನಗೌಡ, ಶಿವಯೋಗಿ ಪ್ಯಾಟೆ ಶೆಟ್ರು, ಮಹದೇವಪ್ಪ, ರಾಮಲಿಂಗಪ್ಪ, ಜೆ.ಬಸವನಗೌಡ ಹಾಗೂ ಬೋಧಕೇತರ ಸಿಬ್ಬಂದಿಗಳಾದ ವಿ.ಶಿವಕುಮಾರ್, ಎಚ್.ಚೆನ್ನಬಸವರೆಡ್ಡಿ, ಕೆ.ಅಮರನಾಥ್, ಬಿ.ವಿಜಯಕುಮಾರ್, ಜಿ.ಗಾದಿಲಿಂಗಪ್ಪ, ರುದ್ರೇಗೌಡ ಅವರನ್ನು ಎಸ್ಜಿ ಕಾಲೇಜಿನ 1980-1985ನೇ ಸಾಲಿನ ಎಲ್ಲ ಹಳೆಯ ವಿದ್ಯಾಥರ್ಿಗಳು ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ತಮ್ಮ ಅನಿಕೆಸಗಳನ್ನು ಹಂಚಿಕೊಂಡರು. ಇದಕ್ಕೂ ಮುನ್ನ ಅಗಲಿದ ಗುರುಗಳ ಹಾಗೂ ವಿದ್ಯಾರ್ಥಿಗಳಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ, ಉಪನ್ಯಾಸಕ ಹಾಗೂ ಹಳೆಯ ವಿದ್ಯಾಥರ್ಿ ವಿರುಪಾಕ್ಷಪ್ಪ ಕೋರಿ ನಾಗರಾಜ್, ಮೇಘನಾಥ್, ಚಂದ್ರಮೌಳಿ ಸ್ವಾಮೀ, ಮಹೇಶ್, ರಾಮೇಶ್ವರ್, ರಾಜೇಶ್, ಎಚ್.ಅಬ್ದುಲ್, ಮಂಜುನಾಥ್ ಗೌಡ ಸೇರಿದಂತೆ ಇತರರಿದ್ದರು. ರಾಮೇಶ್ವರ ಅವರು ಸ್ವಾಗತಿಸಿದರು. ಉಪನ್ಯಾಸಕ ಶರಣಬಸವ ಕಾರ್ಯಕ್ರಮ ನಿರ್ವಹಿಸಿದರು.