ಬಳ್ಳಾರಿ: ಕೌಶಲ್ಯ ತರಬೇತಿ ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸಿ: ಹುಡೇದ

ಲೋಕದರ್ಶನ ವರದಿ

ಬಳ್ಳಾರಿ 28: ಕೌಶಲ್ಯತರಬೇತಿಯಲ್ಲಿ ಸೂಕ್ತಮಾಹಿತಿಯನ್ನು ಪಡೆದುಕೊಂಡು ಸ್ವಯಂ ಉದ್ಯೋಗಗಳನ್ನು ಪ್ರಾರಂಭಿಸಿ ಆರ್ಥಿಕವಾಗಿ ಅಭಿವೃದ್ಧಿರಾಗಿ ಎಂದು ಧಾರವಾಡ ಜಿಲ್ಲೆಯ ಸಿಡಾಕ್ ಕೇಂದ್ರದ ಜಂಟಿ ನಿರ್ದೇಶಕ ಜಿ.ಯು.ಹುಡೇದ ಕರೆ ನೀಡಿದರು. 

ಜಿಲ್ಲಾಖನಿಜ ಪ್ರತಿಷ್ಠಾನ ಟ್ರಸ್ಟ್(ಡಿಎಮ್ಎಫ್), ಜಿಲ್ಲಾಡಳಿತ, ಜಿಪಂ,  ಜಿಲ್ಲಾ ಕೈಗಾರಿಕಾ ಕೇಂದ್ರ, ನಿರ್ಮಿತಿ ಕೇಂದ್ರ ಹಾಗೂ ಧಾರವಾಡ ಕರ್ನಾಟಕ ಉದ್ಯಮ ಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್) ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಖನಿಜ ಪ್ರತಿಷ್ಠಾನ ಟ್ರಸ್ಟ್(ಡಿ.ಎಂ.ಎಫ್.) ಅನುದಾದಡಿಯಲ್ಲಿ ಸಂಡೂರು ಸ್ವಯಂ ಶಕ್ತಿ ಯೋಜನೆಅಡಿಯಲ್ಲಿಯ ಕೌಶಲ್ಯ ತರಬೇತಿಗಳ ಬಗ್ಗೆ ಒಂದು ದಿನದಜಾಗೃತಿ ಕಾರ್ಯಕ್ರಮವನ್ನು ಇತ್ತಿಚೆಗೆ ಭುಜಂಗನಗರದದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಗಣಿ ಬಾಧಿತ ಪ್ರದೇಶವಾದ ಜಿಲ್ಲೆಯ ಸಂಡೂರಿನಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಜೊತೆಗೆ ಸಂಡೂರು ತಾಲೂಕಿನ ಎಲ್ಲಾ ಗ್ರಾಪಂ ಮಟ್ಟದಲ್ಲಿ ವಿವಿಧ ವೃತ್ತಿಗಳಾದ ಟೇಲರಿಂಗ್, ಡಿಪ್ಲೋಮಾ ಇನ್ ಕಂಪ್ಯೂಟರ್, ಫೈನಾನ್ಸಿಯಲ್ ಅಕೌಂಟಿಂಗ್ ತರಬೇತಿ, ಮೇಸನ್, ಬೇಸಿಕ್ ಎಲೆಕ್ಟ್ರಿಕಲ್ ರಿಪೇರ್ಸ್ ಮತ್ತು ಸವರ್ೀಸಿಂಗ್ ತರಬೇತಿಗಳನ್ನು 30 ರಿಂದ 60 ದಿನಗಳವರೆಗೆ ಕೌಶಲ್ಯ ತರಬೇತಿಗಳನ್ನು ಗ್ರಾಪಂ ಮಟ್ಟದಲ್ಲಿ, ಕ್ಲಷ್ಟರ್ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಹಾಗೂ ಭಾರಿ ವಾಹನ ಚಾಲನಾ ತರಬೇತಿಯನ್ನು ಹಗರಿಬೊಮ್ಮನಹಳ್ಳಿಯ ಕೆ.ಎಸ್.ಆರ್.ಟಿ.ಸಿಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ ಅವರು ಉದ್ಯಮ, ಉದ್ಯಮಶೀಲತೆಯ ಮಹತ್ವ ಹಾಗೂ ಕೌಶಲ್ಯ ತರಬೇತಿಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. 

ಕೌಶಲ್ಯ ತರಬೇತಿಗೆ ಗ್ರಾಪಂ ಯಲ್ಲಿ ಆನ್ಲೈನ್ನಲ್ಲಿ ಹೆಸರನ್ನು ನೋದಾಯಿಸಿಕೊಂಡು, ತರಬೇತಿ ಪಡೆದು ಸ್ವಯಂ ಉದ್ಯೋಗಿಗಳಾಗಿ ಎಂದರು. 

ಭುಜಂಗನಗರದ ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ ಉದ್ಘಾಟಕರಾಗಿ ಆಗಮಿಸಿದ್ದರು. 

ಭುಜಂಗನಗರ ಗ್ರಾಪಂ ಕಾರ್ಯದರ್ಶಿ  ಎಂ.ರುದ್ರಯ್ಯಸ್ವಾಮಿ ನಿರೂಪಿಸಿದರು. 

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಹಿರಿಯ ಸಂಪನ್ಮೂಲ ವ್ಯಕ್ತಿ ಗದೀಶಯಲಿಗಾರ, ಪಿಡಿಒ ವಸಂತರಾಜ್, ಸಿಡಾಕ್ ಕೇಂದ್ರದ ತರಬೇತಿದಾರರಾದ ವಿನೋದ ಕುಮಾರ ರೆಡ್ಡಿ, ಕಿಯೋನಿಕ್ಸ್ ಮುಖ್ಯಸ್ಥರಾದ ವೈಶಾಲಿ ಗೀತಾ,   ನಿರ್ಮಿತಿಕೇಂದ್ರದ ಶ್ರೀಧರ, ಮಹಿಳಾ ಶಕ್ತಿ ಕೇಂದ್ರದ ಎಲ್.ರೂಪಾ, ಗ್ರಾಪಂ ಸದಸ್ಯರಾದ ಹೆಚ್ತಾಯಪ್ಪ, ಪಿ.ಮಂಜುನಾಥ,  ಹನುಮಯ್ಯ ಸೇರಿದಂತೆ ಗ್ರಾಮಸ್ಥರು ಇದ್ದರು. ತರಬೇತಿಯಲ್ಲಿ 121 ಅಭ್ಯರ್ಥಿಗಳು ಭಾಗವಹಿಸಿದ್ದರು.