ಲೋಕದರ್ಶನ ವರದಿ
ಬಳ್ಳಾರಿ 10: ಮಸಣ ಕಾರ್ಮಿಕರ ಅ.04 ರಂದು ಪ್ರಥಮ ರಾಜ್ಯ ಸಮಾವೇಶ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಯೋಜಿಸಿಲಾಗಿದೆ ಎಂದು ಸಂಚಾಲಕರಾದ ಯು. ಬಸವರಾಜ ಮತ್ತು ಸಹ ಸಂಚಾಲಾಕಿಯಾಗಿ ಬಿ.ಮಾಳಮ್ಮ ಮತ್ತಿತ್ತರರು ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದರು.
ಮಸಣ ಕಾಮರ್ಿಕರಿಗೆ ಆರೋಗ್ಯ ರಕ್ಷಣೆ ನೀಡಬೇಕು, ಪ್ರತಿ ಸಾರ್ವಜನಿಕ ಮಸಣಕ್ಕೆ ಒಬ್ಬರಂತೆ ನೇಮಕ ಮಾಡಬೇಕು. ಪಾರಂಪರಿಕವಾಗಿ ಕಾರ್ಯನಿರ್ವಹಿಸುವ ಮಸಣ ಕಾಮರ್ಿಕರನ್ನು ಗಣತ ಮಾಡಬೇಕು. ಪ್ರತಿ ಮಸಣದಲ್ಲಿ ಕುಣಿಗಳನ್ನು ತೆಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಪರಿಗಣಿಸಿ ಕೆಲಸ ನೀಡಬೇಕು.
ರಾಜ್ಯದ ಎಲ್ಲಾ ಸಾರ್ವಜನಿಕ ಮಸಣಗಳ ಪ್ರದೇಶಗಳನ್ನು ಗಣತಿ ಮಾಡಿ ಅವುಗಳ ಸುತ್ತ ಮುತ್ತ ತಂತಿ ಬೇಲಿಯನ್ನು ಆಳವಡಿಸಿಬೇಕು, ರಾಜ್ಯದ ಎಲ್ಲಾ ಮಸಣಗಳನ್ನು ಜನಸ್ನೇಹಿ ನಂದನವನಗಳನ್ನಾಗಿ ವಿವಿಧ ಇಲಾಖೆಗಳಿಂದ ಸೂಕ್ತ ಯೋಜನೆಯನ್ನು ರೂಪಿಸಬೇಕು, ಏಕೆಂದರೆ ಈಗಾಗಲೆ ಹಲವಾರು ಕಡೆ ಮಸಣದ ಭೂಮಿಂಯನ್ನು ಒತ್ತುವರಿ ಮಾಡಿದ್ದಾರೆ. ಮಸಣ ಕಾಮರ್ಿಕರಿಗೆ ಭವಿಷ್ಯ ನಿಧಿ ಯೋಜನೆಯನ್ನು ಜಾರಿಗೊಳಿಸಬೇಕು ಜೊತೆಗೆ ಕನಿಷ್ಟ ರೂ.3000 ಗಳ ಪಿಂಚಾಣಿ ನೀಡಲು ಕ್ರಮ ವಹಿಸಬೇಕು.
ಅವರಿಗೆ ಅಂತ್ಯೋದಯ ರೇಷಾನ್ ಕಾರ್ಡ ನೀಡಬೇಕು, ಮನೆಗಳನ್ನು ಕಟ್ಟಿ ಕೊಡಬೇಕು, ಮಸಣ ಕಾಮರ್ಿಕರಿಗೆ ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಪ್ರತಿ ಒಬ್ಬರಿಗೆ 5 ಎಕೆರೆ ಜಮೀನನ್ನು ಉಚಿತವಾಗಿ ನೀಡಬೇಕು ಹೀಗೆ ಹಲವಾರು ಹಕ್ಕೋತ್ತಾಯಗಳನ್ನು ನೀಡಬೇಕೆಂದು ಒತ್ತಾಯಿಸಿ ಅ.04 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರಥಮ ರಾಜ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಮಸಣ ಕಾರ್ಮಿಕರಾದ ಲಿಂಗಪ್ಪ, ಬಸಪ್ಪ, ಯರ್ರಿಸ್ವಾಮಿ, ಮಲ್ಲೇಶಪ್ಪ, ಸೇರಿದಂತೆ ಹಲವಾರು ಕಾಮರ್ಿಕರು ಉಪಸ್ಥಿತರಿದ್ದರು.