ಬಳ್ಳಾರಿ: ನಾಡಿನ ಪ್ರತಿಯೊಬ್ಬರಿಗೂ ಮಾತೃ ಭಾಷೆ ಇರುತ್ತದೆ

ಲೋಕದರ್ಶನ ವರದಿ

ಬಳ್ಳಾರಿ 20: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಕವನ ವಾಚನ, ಸಂವಾದ ಮತ್ತು ಕಿರುಚಿತ್ರ ಪ್ರದರ್ಶನವನ್ನು ಏರ್ಪಡಿಸುವುದರ ಮೂಲಕ ಹಮ್ಮಿಕೊಳ್ಳಲಾಗಿತ್ತು.

ಮಾತೃ ಭಾಷೆ ದಿನಾಚರಣೆ ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳನ್ನು ಸ್ವಾಗತ ಕೋರಿ, ಆಶಯ ಭಾಷಣವನ್ನು ಭಾಷಾ ನಿಕಾಯದ ಡೀನ್ರು ಮತ್ತು ಇಂಗ್ಲೀಷ ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗಿರುವ ಪ್ರೊ.ಶಾಂತನಾಯ್ಕ್ ನಡೆಸಿಕೊಟ್ಟರು. ಪ್ರೊ.ಶಾಂತನಾಯ್ಕರು ಮಾತೃ ಭಾಷಾ ದಿನಾಚರಣೆಯ ಇತಿಹಾಸವನ್ನು ಕುರಿತು ಮಾತಾನಾಡುತ್ತ ನಾಡಿನ ಪ್ರತಿಯೊಬ್ಬರಿಗೂ ಮಾತೃ ಭಾಷೆಯೆಂಬುದು ಇರುತ್ತೆ ಆ ಭಾಷೆಗಳು ತಮ್ಮ ಪರಂಪರೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಹೇಳುತ್ತಿರುತ್ತವೆ. ಅಂತಹ ಭಾಷೆಗಳನ್ನು ಉಳಿಸುವ ಮತ್ತು ಬೆಳಸುವ ನಮ್ಮ ಮೇಲಿದೆ ಎಂದು ಹೇಳುತ್ತ ತಮ್ಮ ಮನೆಯ ಭಾಷೆ ಬಂಜಾರ ಇದ್ದರು, ನಾವು ಯಾವ ರಾಜ್ಯದಲ್ಲಿ ವಾಸಿಸಿ ಆ ಭಾಷೆಯನ್ನು ಮಾತಾನಾಡುತ್ತೇವೆಯೋ ಅದುವೆ ನಮ್ಮ ಮಾತೃ ಭಾಷೆ ಎಂದು ತಮ್ಮ ಗುರುಗಳು ಹೇಳಿರುವುದನ್ನು ನೆನಪಿಕೊಂಡರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಕುಲಸಚಿವರಾದ ಪ್ರೊ.ತುಳಸಿಮಾಲಾ ಮೇಡಂ ರವರು ವಹಿಸಿಕೊಂಡಿದ್ದರು. ದೀಪ ಹಚ್ಚುವುದರ ಮೂಲಕ ಉದ್ಘಾಟನೆಯನ್ನು ಮಾಡಿ, ಅದ್ಯಕ್ಷೀಯ ಭಾಷಣ ಮಾಡಿದ ಪ್ರೊ. ತುಳಸಿಮಾಲಾ ಮೇಡಂ ರವರು 1999 ರಂದು ಮಾತೃ ಭಾಷಾ ದಿವಸ ಎಂದು ಯುನೊಸ್ಕೊ ಪೆಬ್ರವರಿ 21 ರಂದು ಘೋಷಿಸಿತು. ಇದಕ್ಕೆ ಕಾರಣ ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲದೇಶದಲ್ಲಿ ಬಾಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕು ಎಂದು ಹೋರಾಡಿ ಸತ್ತ ವಿದ್ಯಾಥರ್ಿಗಳ ನೆನಪಿಗಾಗಿ ಈ ಆಚರಣೆಯನ್ನು ಮಾಡಲಾಗುತ್ತದೆ. ಮಾತೃ ಭಾಷಾ ದಿವಸ ದಿನವನ್ನು ಅಧಿಕೃತವಾಗಿ ವಿಶ್ವಸಂಸ್ಥೆ 2008 ಪೆಬ್ರವರಿ 21 ರಿಂದ ವಿಶ್ವದಾದ್ಯಂತ ಜಾರಿಗೆ ತಂದಿದೆ.

ಈ ಕಾರ್ಯಕ್ರಮಕ್ಕೆ ಬಂದಂತಹ ಅತಿಥಿಗಳಿಗೆ ವಂದನೆಯನ್ನು ಕನ್ನಡ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ನಾಯಕರ ಹುಲುಗಪ್ಪ ಮಾಡಿದರು. ನಿರೂಪಣೆಯನ್ನು ಕನ್ನಡ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕರಾದ  ಡಾ.ಶಕೀಲಾ ಮಾಡಿದರು.

ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಮುಖ್ಯಸ್ಥ ಪ್ರೊ.ರಾಬಟರ್್ ಜೋಸ್,  ಇಂಗ್ಲೀಷ್ ಅಧ್ಯಯನ ವಿಭಾದ ಅಧ್ಯಾಪಕ ವಾತ್ಸಲ್ಯ ಆರ್, ಡಾ.ಸಂತೋಷ. ಜಿ.ಕೆ, ಮತ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳು ಭಾಗವಹಿಸಿದ್ದರು.