ಲೋಕದರ್ಶನ ವರದಿ
ಬಳ್ಳಾರಿ 01: ಜಿಲ್ಲೆಯು ಸಾಹಿತ್ಯ, ಲಲಿತಕಲೆ, ಜಾನಪದ, ರಂಗಭೂಮಿ ಕ್ಷೇತ್ರಗಳಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದು, ಕನರ್ಾಟಕ ಸಂಸ್ಕೃತಿಗೆ ಅಮೂಲ್ಯ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಎಂದು ಸಮ್ಮೇಳನಾಧ್ಯಕ್ಷ ಡಾ.ಜೆ.ಎಂ.ನಾಗಯ್ಯ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣ ಚಳವಳಿಗೆ ಸಹ ಬಳ್ಳಾರಿ ಜಿಲ್ಲೆ ಅದಮ್ಯ ಕೊಡುಗೆ ನೀಡಿದೆ. ವೈಭವಪೂರ್ಣವಾದ ಕಲಾ ಮತ್ತು ಸಾಂಸ್ಕೃತಿಕ ಪರಂಪರೆಗಳಿಂದ ಶ್ರೀಮಂತರಾದ ಈ ನಾಡು ಬರದ ನಾಡು ಎಂಬ ಅಪಕೀರ್ತಿಯನ್ನು ನಾವು ಅಳಿಸಿ ಕಳೆದುಹೋದ ಗತವೈಭವ, ಸಾಂಸ್ಕೃತಿಕ ಪರಂಪರೆಯನ್ನು ಮರು ನಿರ್ಮಿಸುವ ಧೃಡಸಂಕಲ್ಪ ನಾವೆಲ್ಲರು ಮಾಡೋಣ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿ ಧರ್ಮಸಮತ್ವಯತೆ ಇದೆ ಎಂಬುದನ್ನು ವಿವಿಧ ಉದಾರಣೆಗಳ ಮೂಲಕ ಪ್ರಸ್ತಾಪಿಸಿದ ಸಮ್ಮೇಳನಾಧ್ಯಕ್ಷರು, ಇಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ನಡೆಸಲಾಗುತ್ತದೆ. ಮಿಷನರಿಗಳ ಸೇವೆ, ಶೈಕ್ಷಣಿಕ ಸೇವೆ, ಸಾಹಿತ್ಯ ಮತ್ತು ಕಲಾಕ್ಷೇತ್ರ ಇನ್ನೀತರ ಸೇವೆಗಳನ್ನು ವಿವರಿಸಿದರು.
ಬಳ್ಳಾರಿ ಎಂಬುದು ಬಳಾರಿಯಿಂದ ಬಂದದ್ದು, ಬಳಾರಿ ಎಂದರೆ ಕಾಳಿ; ಈ ಬಳಾರಿ ದೇವಿಯಿಂದ ಬಳ್ಳಾರಿ ಹೆಸರು ಬಂದಿದೆ. ರಾಬರ್ಟ ಬ್ರೂಸ್ಫುಟ್ ಎಂಬ ವಿದ್ವಾಂಸ ಸರ್ವೇಕ್ಷಣೆಯನ್ನು ಮಾಡಿ ಬಳ್ಳಾರಿಯಲ್ಲಿ ಅನೇಕ ಪ್ರಾಗೈತಿಹಾಸಿಕ ನೆಲೆಗಳನ್ನು ಗುರುತಿಸಿದ್ದನು. ಬಳ್ಳಾರಿಗೆ ಸೇರಿದ ಹಲವು ಹಳ್ಳಿಗಳು ಸೂಕ್ಷ್ಮ ಶೀಲಾಯುಗಕ್ಕೆ ಸೇರಿದ ನೆಲೆಗಳಾಗಿದ್ದವು ಎಂದರು.
ಜಿಲ್ಲೆಯು ಈ ಹಿಂದೆ ಎರಡು ಪ್ರಮುಖ ಆಡಳಿತ ವಿಭಾಗಗಳಲ್ಲಿ ಹಂಚಿಕೆಯಾಗಿತ್ತು. ಎರಡು ಆಡಳಿತ ವಿಭಾಗಕ್ಕೂ ನೊಳಂಬವಾಡಿ 32000 ಅರಸನೇ ಮಹಾಮಂಡಳೇಶ್ವರನಾಗಿದ್ದನು. ಭಾರತದ ಅನೇಕ ರಾಜಪರಂಪರೆಗಳು ಆಳ್ವಿಕೆ ಮಾಡಿದ ಪ್ರದೇಶ ಬಳ್ಳಾರಿ ಆಗಿದೆ. ಮುಮ್ಮಡಿ ಮನೆತನದ ಕಂಪಿಲರಾಯನ ಮಗ ಕುಮಾರರಾಮನ ವ್ಯಕ್ತಿತ್ವ ಉತ್ಕೃಷ್ಟವಾಗಿತ್ತು. ಬುರ್ರಕಥಾ ಕಲಾವಿದರು ಈತನ ಕಥೆಯನ್ನು ರಸವತ್ತಾಗಿ ವಣರ್ಿಸುತ್ತಾರೆ. ಕಪ್ಪೆ ಅರಭಟನನ್ನು ಕುರಿತು ಅನೇಕ ವಿದ್ವಾಂಸರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಸಂಡೂರು ಗ್ರಾಮವೊಂದರಲ್ಲೇ ಕಪ್ಪೆ ಎಂಬ ಹದಿನಾಲ್ಕು ಮನೆತನಗಳಿದ್ದು ಅದರ ಕುರಿತಾಗಿ ಒಂದು ಗ್ರಂಥವನ್ನು ಹೊರತಂದಿದ್ದೇನೆ ಎಂದು ಹೇಳಿದರು.
ಪ್ರಸಿದ್ಧ ಜಾನಪದ ಸಾಹಿತಿ ಪ್ರೊ.ಶಂಭು ಬಳಿಗಾರ್ ಅವರು ಸಮ್ಮೇಳನಕ್ಕೆ ಚಾಲನೆ ನೀಡಿದರು. ಗಡಿನುಡಿ ಸ್ಮರಣ ಸಂಚಿಕೆ,ಕಸಾಪ ಹೊರತಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.ಪುಸ್ತಕ ಮಳಿಗೆಗಳನ್ನು ಹಾಗೂ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಲಾಯಿತು ಮತ್ತು ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಜಿ.ಸೋಮಶೇಖರರೆಡ್ಡಿ,ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ,ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ್ ಮತ್ತಿತರರು ಇದ್ದರು.