ಬಳ್ಳಾರಿ: ಬೆಳೆಗಳ ಬೆಲೆ ಸಮಸ್ಯೆ: ಸಕರ್ಾರಕ್ಕೆ ಶಿಫಾರಸ್ಸು

ಬಳ್ಳಾರಿ 19: ರೈತರ ಬೆಳೆಗಳ ಬೆಲೆ ಹಾಗೂ ಬೆಲೆ ಸಮಸ್ಯೆಗೆ ಸಂಬಂಧಿಸಿದಂತೆ ಕೃಷಿ ಬೆಲೆ ಆಯೋಗದಿಂದ ಸಕರ್ಾರಕ್ಕೆ ಶಿಫಾರಸ್ಸು ಮಾಡಲಾಗುವುದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕ್  ಹೇಳಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೃಷಿ, ತೋಟಗಾರಿಕೆ ಬೆಳೆಗಳ ಮಾರುಕಟ್ಟೆ, ಖರೀದಿ ಮತ್ತು ಬೆಲೆಗಳ ಕುರಿತ ವಿಚಾರ ತಜ್ಞರು, ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದರು.

     ವಿವಿಧ ಬೆಳೆಗಳ ಬೆಲೆಗೆ ಸಂಬಂಧಿಸಿದಂತೆ ಆಯೋಗ ಅಂತಿಮ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ ಎಂದು ವಿವರಿಸಿದ ಅಧ್ಯಕ್ಷ ಹನುಮನಗೌಡ ಅವರು ಬೆಂಬಲ ಬೆಲೆ ಘೋಷಿಸಿದ ನಂತರ ರೈತರು ಮಾರುಕಟ್ಟೆಗೆ ಬರುವುದು ತುಂಬಾ ವಿರಳವಾಗಿದೆ. ಹಾಗಾಗೀ ನಮ್ಮ ಕೃಷಿ ಬೆಲೆ ಆಯೋಗದಿಂದ ರೈತರು ಬೆಳೆದ ಬೆಳೆಯನ್ನು ರೈತನ ಮನೆಯಿಂದ ನೇರವಾಗಿ ಖರೀದಿಸಿ ಅದನ್ನು ಎ.ಪಿ.ಎಂ.ಸಿ ಮಾರುಕಟ್ಟೆ ತರುವ ವ್ಯವಸ್ಥೆಯನ್ನು ಹಾಕಿಕೊಳ್ಳಲಾಗಿದ್ದು, ಈ ಶಿಫಾರಸ್ಸನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದರು.

       ಈ ಸಂದರ್ಭದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ರೈತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು