ಬಳ್ಳಾರಿ: ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಲೋಕದರ್ಶನ ವರದಿ

ಬಳ್ಳಾರಿ 01: 12ನೇ ಶತಮಾನದ ಅವತಾರ ಪುರುಷನಾದ ಮಡಿವಾಳ ಮಾಚಿದೇವರು ಜನರ ಮನಸ್ಸಿನಲ್ಲಿನಲ್ಲಿದ್ದ ಜಾತಿ ಎಂಬ ಕೊಳೆಯನ್ನ ತೆಗೆಯುವ ಪ್ರಯತ್ನ ಮಾಡುವುದರ ಮುಖಾಂತರ ಜಾತಿ ವ್ಯವಸ್ಥೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದ ಮಹಾನ್ ವ್ಯಕ್ತಿ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಬಣ್ಣಿಸಿದರು.

ನಗರದ ಬಿ.ಡಿ.ಎ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯಲ್ಲಿ ಶನಿವಾರದಂದು ಮಡಿವಾಳ ಮಾಚಿದೇವ ಜಯಂತಿ ನಿಮಿತ್ತ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಡಿವಾಳ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಬೇಕು ಎಂದು ಸಭೆಯಲ್ಲಿ ಹೇಳಿದ ಅವರು, ತಮ್ಮ ಸಮುದಾಯದವರು ಈಗಾಗಲೇ ಉನ್ನತ ಹುದ್ದೆಗಳಲಿದ್ದು,ಇನ್ನೂ ಹೆಚ್ಚಿನ ಉನ್ನತ ಹುದ್ದೆಗಳಲ್ಲಿ ಅಲಂಕರಿಸಲಿ ಎಂದರು.

ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷರಾದ ಕೆ.ಬಿ ಸಿದ್ದಲಿಂಗಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ಬಳ್ಳಾರಿಯ ಕೆ.ಆರ್.ಎರ್ರೇಗೌಡ ಅವರು ವಚನ ಗಾಯನ ಪ್ರಸ್ತುತ ಪಡಿಸಿದರು.

ಮಡಿವಾಳ ಸಮಾಜದ ವತಿಯಿಂದ ಇದೇ ಸಂದರ್ಭದಲ್ಲಿ ಮಡಿವಾಳ ಸಮಾಜದಲ್ಲಿ ಸೇವೆ ಸಲ್ಲಿಸಿದ ಚೇತನ್, ಕೆ.ಎಮ್.ಎಫ್ ನಿದರ್ೆಶಕರಾದ ವೀರಶೇಖರ ರೆಡ್ಡಿ, ಹಾಗೂ ಕೃಷ್ಣ ಅವರಿಗೆ  ಮಡಿವಾಳ ಮಾಚಿದೇವ ಪ್ರಶಸ್ತಿಯನ್ನು ಇದೇ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕರಾದ ಸಿದ್ದಲಿಂಗೇಶ.ಕೆ.ರಂಗಣ್ಣವರ, ಬಳ್ಳಾರಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರಾದ ಎನ್.ಧನುಂಜಯ ಹಮಾಲ್, ಕೆ.ಎಮ್.ಎಫ್ ನಿದರ್ೆಶಕರಾದ ವೀರಶೇಖರ ರೆಡ್ಡಿ, ಕೆ.ಇ.ಬಿ ಉದ್ಯೋಗಿ ಹೊನ್ನುರಪ್ಪ, ಮಡಿವಾಳ ಸಮಾಜದ ಮುಖಂಡರಾದ ದಾನಪ್ಪ, ಲೆಕ್ಕ ಪರಿಶೋದಕರಾದ ರಾಜ, ಉಪಾಧ್ಯಕ್ಷರಾದ ಬಿ.ನಾಗರಾಜ, ಪ್ರಧಾನ ಕಾರ್ಯದಶರ್ಿಯಾದ ರಾಮಾಂಜಿನಿ, ಮಡಿವಾಳ ಸಮಾಜದ ಮುಖಂಡರು ಹಾಗೂ ಗಣ್ಯರು ಇದ್ದರು.