ಬಳ್ಳಾರಿ: ಸಮ ಸಮಾಜ ನಿರ್ಮಾಣದ ಕರ್ತ ಬಸವಣ್ಣ: ಡಾ.ಸ.ಚಿ.ರಮೇಶ

ಲೋಕದರ್ಶನ ವರದಿ

ಬಳ್ಳಾರಿ 08: ಬಸವಣ್ಣನವರ ಚಿಂತನೆಗಳು ಎಲ್ಲಾ ಕಾಲಕ್ಕೂ ಸಕಾಲಿಕವಾದವು. ಬಡವರು, ಅಂಚಿನ ಸಮುದಾಯದವರು, ಹಿಂದುಳಿದವರನ್ನು ಒಟ್ಟುಗೂಡಿಸಿ ಸಮ ಸಮಾಜದ ನಿರ್ಮಾಣದ ಕಾರ್ಯವನ್ನು ಕೈಗೊಂಡಿದ್ದರು. ಬಸವಣ್ಣನವರು ಸಮಾಜದಲ್ಲಿನ ವೃತ್ತಿಗಳನ್ನು ಹಿರಿದು ಕಿರಿದು ಎಂದು ಬೇಧಭಾವ ಮಾಡದೇ ಸಮಾನವಾಗಿ ಗೌರವಿಸುವ ಮೂಲಕ ವ್ಯಕ್ತಿಯ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದರು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅಭಿಪ್ರಾಯಪಟ್ಟರು. 

ಕನ್ನಡ ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲಸಂಗಮದ ವತಿಯಿಂದ  ಮಂಟಪ ಸಭಾಂಗಣದಲ್ಲಿ ಬಸವ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿಗಳು ಬಸವಣ್ಣನವರು ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿರುವುದು ಅಭಿಮಾನದ ಸಂಗತಿಯಾಗಿದೆ. ಬಸವಣ್ಣನವರು ಒಬ್ಬ ತತ್ವಜ್ಞಾನಿ, ಚಿಂತಕ, ಕವಿಯಾಗಿ, ಹೋರಾಟಗಾರ, ಸಂಘಟಕರಾಗಿ, ಸಮಾಜ ಸುಧಾರಕರಾಗಿ ಅವರು ಜಗತ್ತಿಗೆ ನೀಡಿದ ಕೊಡುಗೆ ಅಪಾರವಾದುದು. ಎನಗಿಂತ ಕಿರಿಯರಿಲ್ಲ ಎಂದು ಹೇಳುವ ಮೂಲಕ ಮನುಷ್ಯನಲ್ಲಿರುವ ಅಹಂಕಾರವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಕಾಯಕ ಮತ್ತು ದಾಸೋಹದಂತಹ ಪರಿಕಲ್ಪನೆಗಳನ್ನು ಹುಟ್ಟು ಹಾಕುವ ಮೂಲಕ ವಚನ ಚಳುವಳಿಯಂತಹ ಮಹಾನ್ ಕ್ರಾಂತಿಯನ್ನು ಸೃಷ್ಠಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಅವರು ಮಾತನಾಡಿ ಬಸವಣ್ಣನವರು ಜಾತಿ ಸೂತಕ ಬೇಡವೆಂದು ದೂರವಿದ್ದವರು. ಆದರೆ ಇಂದು ಅವರನ್ನು ಮತ್ತೇ ಜಾತಿಯ ಬಂಧನಕ್ಕೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ ಎಂದರು. 

ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ.ಅಶೋಕಕುಮಾರ ರಂಜೇರೆ ಮಾತನಾಡುತ್ತ ವಚನ ಸಾಹಿತ್ಯ ಬರುವವರೆಗೆ ಸಾಹಿತ್ಯ ರಚನೆ ಎಂಬುದು ತುಂಬಾ ಕಷ್ಟಕರವಾಗಿತ್ತು. ವಚನ ಸಾಹಿತ್ಯ ಜನಸಾಮಾನ್ಯರನ್ನು ಕೂಡ ತಲುಪಿತು. ವಚನಕಾರರ ನಡೆ-ನುಡಿ ಯಾವಾಗಲೂ ಒಂದೇಯಾಗಿರುತ್ತಿತ್ತು. ಎಂದು ಹೇಳಿದರು. ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಕೂಡಲಸಂಗಮದ ಸಂಚಾಲಕರಾದ ಡಾ.ಎಸ್.ಆರ್ ಚನ್ನವೀರಪ್ಪ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿನಿ  ಗಂಗಮ್ಮ  ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು  ಪ್ರಾಥರ್ಿಸಿದರು. ಸಂಶೋಧನಾ ವಿದ್ಯಾಥರ್ಿ ರಾಮಕೃಷ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು