ಬಳ್ಳಾರಿ 10: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹಾಗೂ ಜೆಲ್ಲಾಡಳಿತ ಬಳ್ಳಾರಿ ಇವರ ವತಿಯಿಂದ ಮಾತಂಗ ಪರ್ವತ ಮೈದಾನದ ಮುಂಭಾಗದ ವಸ್ತು ಪ್ರದರ್ಶನ ಮೇಳದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳವನ್ನು ಸಚಿವರಾದ ಸಿ.ಟಿ. ರವಿ ಅವರು ಉದ್ಘಾಟಿಸಿದರು.
ಪ್ರದರ್ಶನದಲ್ಲಿ ರಾಜ್ಯದ ಮುದೋಳ, ಗೊಕಾಕ್, ಹಾವೇರಿ, ಕುಂದಾಪುರ, ಹುಬ್ಬಳ್ಳಿ, ಬೆಂಗಳೂರು ಕಡೆಯಿಂದ ಹಲವಾರು ಭಾಗಗಳ ಪುಸ್ತಕ ಮಳಿಗೆಗಳು ಕಂಡುಬಂದವು.
ಹಾವೇರಿಯ ಗೊಟಗೋಡೆಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಗದಗಿನ ಕರ್ನಾಟಕ ರಾಜ್ಯ ಗ್ರ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ವಿಶ್ವವಿದ್ಯಾಲಗಳು ಭಾಗವಹಿಸಿದ್ದವು. ಅದೇ ರೀತಿ ಕನರ್ಾಟಕ ರಾಜ್ಯದ ಗ್ರಂಥಾಲಯ ಇಲಾಖೆ ಬಳ್ಳಾರಿ ಹಾಗೂ ವಿವಿದ ಪುಸ್ತಕ ಮಳಿಗೆಗಳು ಮೇಳದಲ್ಲಿ ಪ್ರದರ್ಶನಗೊಂಡವು.