ಬಳ್ಳಾರಿ: ಆಕಸ್ಮಿಕ ದಾಳಿ ಮಾಡಿ 3 ಮಕ್ಕಳ ರಕ್ಷಣೆ

ಬಳ್ಳಾರಿ 22:  ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ಕಾಮರ್ಿಕ ಇಲಾಖೆ, ತಾಲೂಕು ಆಡಳಿತ, ಜಿಲ್ಲಾ ಮಕ್ಕಳ ರಕ್ಷಣ ಘಟಕ,  ಮಕ್ಕಳ ಸಹಾಯವಾಣಿ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದೊಂದಿಗೆ ಇಂದು ಬಳ್ಳಾರಿ ನಗರದಲ್ಲಿ ಅಂಗಡಿ, ಹೋಟೆಲ್ ಮತ್ತು ಜೀನ್ಸ್ ಘಟಕಗಳ ಮೇಲೆ ಆಕಸ್ಮಿಕ ದಾಳಿ ಮಾಡಿ 03 ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ನಂತರ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಬಾಲಕಾಮರ್ಿಕ ಯೋಜನೆಯ ಯೋಜನಾ ನಿದರ್ೆಶಕರು ತಿಳಿಸಿದ್ದಾರೆ. 

ಈ ದಾಳಿಯಲ್ಲಿ ಕಾರ್ಮಿಕ ನಿರೀಕ್ಷಕರಾದ ಎಂ.ರವಿದಾಸ್, ಯೋಜನಾ ನಿದರ್ೇಶಕರಾದ ಎ.ಮೌನೇಶ, ಕ್ಷೇತ್ರಾಧಿಕಾರಿಗಳು ಪಿ.ಎಂ ಈಶ್ವರಯ್ಯ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ವಿಜಯಲಕ್ಷ್ಮೀ, ಸದಸ್ಯರಾದ ಚೆನ್ನಬಸಪ್ಪ ಪಾಟೀಲ್,  ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಭೋಜರಾಜ, ಮಂಜುನಾಥ ಸೇರಿದಂತೆ  ಮಕ್ಕಳ ಸಹಾಯವಾಣಿಯ ಕಾರ್ಯಕರ್ತರು ಇದ್ದರು.