ಲೋಕದರ್ಶನ ವರದಿ
ಬಳ್ಳಾರಿ 11: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಯಾದ, ಮಹಾದಾಯಿ ಯೋಜನೆಯನ್ನು ಜಾರಿಗೊಳಿಸದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹುಸಿ ಭರವಸೆ ನೀಡಿ ಮೋಸ ಮಾಡುತ್ತಾ ಬಂದಿವೆ.
ಇಡೀ ರಾಜ್ಯದ ಅನ್ನದಾತ ರೈತರಿಗೆ ಸಮಸ್ತ ಕರ್ನಾಟಕದ ಜನತೆಗೆ ಮಾಡಿದ ಅಕ್ಷಮ್ಯ ಅಪರಾಧವಾಗಿದೆ. ಕಡೆಗೆ ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹವುಂಟಾಗಿ ಲಕ್ಷಾಂತರ ಜನರು ನೆಲೆ-ಜೀವನ ಕಳೆದುಕೊಂಡು ಬೀದಿಪಾಲಾಗಿದ್ದಾರೆ.
ಅಂತಹ ಸಂತ್ರಸ್ತ ಜನರಿಗೆ ಸೂಕ್ತ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ" ಎಂದು ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಬಳ್ಳಾರಿ ಜಿಲ್ಲಾ ಘಟಕಕ್ಕೆ ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷ ಬಿ.ಕೆ.ಚಂದ್ರಶೇಖರ್ ನೊಂದು ನುಡಿದರು. ಇದೇ ತಿಂಗಳು ಫೆಬ್ರುವರಿ 15ನೇ ತಾರೀಖಿನಂದು ನಮ್ಮ ಸಮಿತಿಯ ರಾಜ್ಯಾಧ್ಯಕ್ಷ ಡಾ.ವಿಶ್ವನಾಥ.ಜಿ.ಪಿ. ನಾಯಕತ್ವದಲ್ಲಿ ಬೆಳಗಾವಿಯಿಂದ ಬೆಂಗಳೂರುರವರೆಗೆ ಬೃಹತ್ ಐತಿಹಾಸಿಕ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಕರ್ಣಟಕ ರಾಜ್ಯದ ಕನ್ನಡಪರ ಸಂಘಟನೆಗಳು ವಿವಿಧ ಮಠಾಧೀಶರು-ಖ್ಯಾತ ಚಲನಚಿತ್ರ ನಟರು-ರೈತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ಒಂದು ಲಕ್ಷಕ್ಕೂ ಮಿಕ್ಕಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ. "ರ್ಯಾಲಿಯ ಯಶಸ್ವಿಗೆ ಆದಿದೇವತೆ-ಶ್ರೀ ಕನಕದುರ್ಗಮ್ಮಗೆ ಹರಕೆ" ಹೊತ್ತ ನಮ್ಮ ಕರ್ನಾಟಕ ಪ್ರಜಾಶಕ್ತಿ ಸಮಿತಿಯ ರಾಜ್ಯಾಧ್ಯಕ್ಷರಾದ ಡಾಜಿ.ಪಿ.ವಿಶ್ವನಾಥ್ ನಾಯಕತ್ವದಲ್ಲಿ ನಡೆಯುವ ಐತಿಹಾಸಿಕ ಪ್ರತಿಭಟನಾ ರ್ಯಾಲಿಯು ಯಶಸ್ವಿಯಾಗಲೆಂದು ನಂತರ ಬಳ್ಳಾರಿಯಿಂದ ಪ್ರತಿಭಟನಾ ರ್ಯಾಲಿಗೆ ಸಹಸ್ರಾರು ಸಂಖ್ಯೆಯ ಸಾರ್ವಜನಿಕರನ್ನು ಕರೆದುಕೊಂಡು ರ್ಯಾಲಿಯಲ್ಲಿ ಪಾಲ್ಗೊಳ್ಳಲಾಗುವುದಾಗಿ ಎಂದು ತಿಳಿಸಿದ್ದಾರೆ.