ಬಳ್ಳಾರಿ: 6ನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಲೋಕದರ್ಶನ ವರದಿ

ಬಳ್ಳಾರಿ 23: ಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಮಿಲ್ಲರ್ಪೇಟೆಯ ಗಂಗಪ್ಪ ಜಿನ್ ಸರ್ಕಲ್ನಲ್ಲಿ ಮಿಲ್ಲಾರಪೇಟೆ ಯುವಕರ ವತಿಯಿಂದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ್ನು ಸತತ 6ನೇ ವರ್ಷ ಆಯೋಜಿ ಸಲಾಗಿತ್ತು. ಹೊನಲು ಬೆಳಕಿನ ಈ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಿತು. ಟೂನರ್ಿಯಲ್ಲಿ ಸೀನಿಯರ್ಸ್ ಮತ್ತು ಜೂನಿಯರ್ ಎಂದು ಎರಡು ವಿಭಾಗಗಳಲ್ಲಿ ಪಂದ್ಯಾವಳಿಗಳನ್ನು ನಡೆಸಲಾಯಿತು. 

ಸೀನಿಯರ್ ವಿಭಾಗದ ಫೈನಲ್ ಪಂದ್ಯದಲ್ಲಿ  ರಘು ಮತ್ತು ರಾಮು, ವೀರೇಶ್ ಮತ್ತು ಗಿರಿಯವರನ್ನು ಸೋಲಿಸಿ ಮೊದಲನೇ ಬಹುಮಾನ ಪಡೆದುಕೊಂಡರೆ, ದ್ವೀತಿಯ ಬಹುಮಾನವನ್ನು ವೀರೇಶ್ ಮತ್ತು ಗಿರಿ ಪಡೆದುಕೊಂಡರು. 

ಜೂನಿಯರ್ ವಿಭಾಗದ ಫೈನಲ್ ಪಂದ್ಯದಲ್ಲಿ ರಂಜಿತ್ ಮತ್ತು ರಿಯಾಜ್, ಕೀಶೋರ್ ಮತ್ತು ತಮ್ಮಣ್ಣ ಅವರನ್ನು ಸೋಲಿಸಿ ಮೊದಲನೇ ಬಹುಮಾನವನ್ನು ಪಡೆದುಕೊಂಡರೆ, ಕೀಶೋರ್ ಮತ್ತು ತಮ್ಮಣ್ಣ ದ್ವೀತಿಯ ಬಹುಮಾನವನ್ನು ಪಡೆದು ಕೊಂಡರು. 

ರಾತ್ರಿ 11 ಗಂಟೆಯಿಂದ ಪಂದ್ಯಾವಳಿಗಳು ಆರಂಭವಾಗಿ ಬೆಳಿಗ್ಗೆ 6 ಗಂಟೆಗೆ ಮುಕ್ತಾಯ ವಾಯಿತು. ಟೂರ್ನಮೆಂಟ್ನಲ್ಲಿ ರಘು, ಶಿವುಕುಮಾರ್, ಈಶ್ವರ್, ಸೀನಾ, ತಿಲಕ್, ಬಿ.ಟಿ.ವಿಜಯ್ ಕುಮಾರ್, ಶೇಖರ್, ವೀರೇಶ್, ರಾಮು, ಅರುಣ್, ಗಿರಿ, ಸತ್ತಿ, ಬಿ.ಎಂ., ಗೋಕುಲ್, ಲಕ್ಷ್ಮಯ್ಯ, ತಮ್ಮಣ್ಣ, ಇಮ್ರಾನ್, ಮಣಿ, ರಂಜಿತ್, ರಿಯಾಜ್, ಲೋಹಿತ್, ಸಮೀ ಪಾಲ್ಗೊಂಡಿದ್ದರು.

ಪಂದ್ಯಾವಳಿ ಮುಗಿದ ನಂತರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಫೈನಲ್ ವಿನ್ನರ್ಸ್, ಫೈನಲ್ ಲೂಸರ್ಸ್, ಸೆಮಿಫೈನಲ್ ಲೂಸರ್ಸ್ಗೂ ಟ್ರೋಫಿಗಳನ್ನು ವಿತರಿಸಲಾಯಿತು. ನಂತರ ಟೂನರ್ಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸ ಲಾಯಿತು.

ಇಂಡೋರ್ ಮಾದರಿಯಲ್ಲಿ ಟೂರ್ನಮೆಂಟ್ ನಡೆದಿದ್ದು ನೋಡುವವರಿಗೆ ಮನರಂಜನೆ ನೀಡಿತು.ಟೂರ್ನಮೆಂಟ್ನ್ನು ಯಶಸ್ವಿಯಾಗಿ ನಡೆಯಲು ರಘು ಅಕ್ತರ್, ಶಿವ, ಶ್ರೀರಾಮುಲು, ಭಾಸ್ಕರ್, ಸತ್ತಿ,  ಶಂಭು ಮತ್ತಿತರರು ಆಟಗಾರರನ್ನು ಪ್ರೋತ್ಸಾಹಿಸಿದರು.