ಲೋಕದರ್ಶನ ವರದಿ
ಬಳ್ಳಾರಿ 28: ಕರ್ನಾಟಕ ಹಾಲು ಮಹಾಮಂಡಳಿ ಮತ್ತು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತಿಚೆಗೆ ನಗರದ ಮೇರಿ ಮಾತಾ ಚಚರ್್ ಆವರಣದಲ್ಲಿ ನಂದಿನಿ ಸಿಹಿ ಉತ್ಸವ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.
ಮೇರಿ ಮಾತಾ ಚರ್ಚ ಫಾರ್ದರ್ ಡಾ. ಹೆನ್ಸಿ ಡಿಸೋಜಾ ಮತ್ತು ಪಾಲಿಕೆಯ ಆಯುಕ್ತೆ ತುಷಾರಮಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ ಅತಿಥಿಗಳಾಗಿ ಭಾಗವಹಿಸಿದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬುಕ್ಕಾ ಮಲ್ಲಿಕಾರ್ಜುನ ಈ ಸಂದರ್ಭದಲ್ಲಿ ಮಾತನಾಡಿ, ಜನವರಿ 02ರವರೆಗೆ ಶೇ.10 ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಈ ಸದರಿ ಉಪಯೋಗವನ್ನು ಬಳ್ಳಾರಿ ನಗರದ ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಡಾ.ಸುನೀಲ್ ಸುಹೇಲ, ಸಹಾಯಕ ವ್ಯವಸ್ಥಾಪಕ ಎಸ್.ವೆಂಕಟೇಶ್ ಗೌಡ, ಮಾರುಕಟ್ಟೆ ಸಿಬ್ಬಂದಿಗಳಾದ ಇಂದುಕಲಾ, ವಿರೇಶ್(ಹಳೇಕೊಟೆ), ಮಂಜುನಾಥ ಸೇರಿದಂತೆ ಇತರರು ಇದ್ದರು.